ಕರ್ನಾಟಕ

karnataka

ETV Bharat / bharat

ಗುಂಪು ಘರ್ಷಣೆಯಲ್ಲಿ ಮೂವರು ಸಹೋದರರ ಗುಂಡಿಕ್ಕಿ ಕೊಂದರು! - ಗುಂಡಿಕ್ಕಿ ಮೂವರು ಸಹೋದರರ ಹತ್ಯೆ

ಎರಡು ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆಯಿತು.

Rajasthan
ರಾಜಸ್ಥಾನ

By

Published : Nov 27, 2022, 10:29 AM IST

ಜೈಪುರ(ರಾಜಸ್ಥಾನ):ಭರತ್‌ಪುರ ಜಿಲ್ಲೆಯ ಸಿಕ್ರೋರಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ ಮೂವರು ಸಹೋದರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತರನ್ನು ಸಮಂದರ್, ಈಶ್ವರ್ ಹಾಗೂ ಗಜೇಂದ್ರ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಮೃತಪಟ್ಟಿರುವ ಸಮಂದರ್ ಇತ್ತೀಚೆಗೆ ತಮ್ಮ ನೆರೆಯ ಲಖನ್ ಎಂಬಾತನೊಂದಿಗೆ ಜಗಳವಾಡಿದ್ದರಂತೆ. ಇದೇ ವಿಚಾರವಾಗಿ ಲಖನ್ ಇತರ ಕೆಲವರೊಂದಿಗೆ ಸಮಂದರ್ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಏಕಾಏಕಿಯಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಮೂವರು ಸಾವನ್ನಪ್ಪಿ, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಭರತ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಮೀನಾ ತಿಳಿಸಿದ್ದಾರೆ.

ಇದನ್ನೂ ಓದಿ:ಸಹೋದ್ಯೋಗಿಗಳ ನಡುವೆ ಘರ್ಷಣೆ: ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ಸಾವು

ABOUT THE AUTHOR

...view details