ಕರ್ನಾಲ್(ಹರಿಯಾಣ): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಸ್ಸಂಧ್‌ನ ಕಾಬುಲ್‌ಪುರ ಖೇಡಾ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ...
ಕರ್ನಾಲ್(ಹರಿಯಾಣ): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಸ್ಸಂಧ್‌ನ ಕಾಬುಲ್‌ಪುರ ಖೇಡಾ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ...
ಕಾಬೂಲ್‌ಪುರ್ ಖೇಡಾ ನಿವಾಸಿ 22 ವರ್ಷದ ಬಂಟಿ, ಅವನ 20 ವರ್ಷದ ಸೋದರಸಂಬಂಧಿ ಅಕ್ಷಯ್ ಮತ್ತು 21 ವರ್ಷದ ಚಿಕ್ಕಮ್ಮನ ಮಗ ರವೀಂದ್ರ ಅವರು ಮಾತ್ಲೌಡಾದ ಪಿಜ್ಜಾ ಗ್ಯಾಲರಿಯಾ ಅಂಗಡಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಮೂವರು ಸಹೋದರರು ಕಾಬೂಲ್‌ಪುರ ಖೇಡಾ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲೇ ಸಂಭವಿಸಿದೆ.
ಬಂಟಿಗೆ 11 ತಿಂಗಳ ಹಿಂದೆ ವಿವಾಹವಾಗಿದ್ದು, ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ. ಚಿಕ್ಕಮ್ಮನ ಮಗ ರವೀಂದ್ರನ ಮುಂದಿನ ತಿಂಗಳು ಮದುವೆ ನಡೆಯಬೇಕಿತ್ತು. ಅಷ್ಟರಲ್ಲೇ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.