ಕರ್ನಾಟಕ

karnataka

ETV Bharat / bharat

ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಮೇಲೆ ಬೆಟ್ಟಿಂಗ್​​... ಮೂವರು ಬುಕ್ಕಿಗಳ ಬಂಧನ - ಬೆಟ್ಟಿಂಗ್ ನಡೆಸಿದ್ದ ಮೂವರು ಬುಕ್ಕಿಗಳ ಬಂಧನ

ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Three bookies held for betting
Three bookies held for betting

By

Published : Feb 11, 2022, 2:58 AM IST

ಕೋಟಾ(ರಾಜಸ್ಥಾನ): ಭಾರತ-ವೆಸ್ಟ್​ ಇಂಡೀಸ್ ತಂಡಗಳ ನಡುವೆ ನಡೆದ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬುಕ್ಕಿಗಳ ಬಂಧನ ಮಾಡುವಲ್ಲಿ ಕೋಟಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಟಾದ ಆರ್​ಕೆ ಪುರಂನಲ್ಲಿ ಜನವರಿ 9ರಂದು ಆಯೋಜನೆಗೊಂಡಿದ್ದ ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವಿನ ಕ್ರಿಕೆಟ್​ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ.

ಆರೋಪಿಗಳಿಂದ 2 ಸಾವಿರ ರೂ. ನಗದು, ಲ್ಯಾಪ್​ಟಾಪ್​, 20 ಮೊಬೈಲ್​, ಎಲ್​ಇಡಿ ಟಿವಿ, ಸೆಟ್​ ಟಾಪ್ ಬಾಕ್ಸ್, ಕಾಲ್​ ರೆಕಾರ್ಡರ್​ ಮತ್ತು ಬೆಟ್ಟಿಂಗ್​​ಗಾಗಿ ಬಳಕೆ ಮಾಡಿರುವ ಇತರೆ ಸಾಧನ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಬಂಧಿತ ಆರೋಪಿಗಳಿಂದ 5.70 ಕೋಟಿ ರೂ.ಗಳ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿರಿ:ಸಾವಿರಕ್ಕೂ ಅಧಿಕ ದರೋಡೆ, 48 ವರ್ಷಗಳಲ್ಲಿ 28 ವರ್ಷ ಜೈಲು ಶಿಕ್ಷೆ; ಆದ್ರೂ ಕಳ್ಳತನ ಮಾಡಿ ಸಿಕ್ಕಿಬಿದ್ದ ಖದೀಮ!

ಬಂಧಿತ ಆರೋಪಿಗಳನ್ನ ಬಜರಂಗನಗರ ನಿವಾಸಿ ಜೈಪ್ರಕಾಶ್​ ಅರೋರ(45), ದುರ್ಗಾನಗರ ಕುನ್ಹಾಡಿ ನಿವಾಸಿ ರವಿಕುಮಾರ್​ ಸಿಂಧಿ(38) ಮತ್ತು ವಿಜ್ಞಾನನಗರದ ಗಣೇಶನಗರ ನಿವಾಸಿ ಕುಲದೀಪ್ ಮೀನಾ (42) ಎಂದು ಗುರುತಿಸಲಾಗಿದೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮೇಲಿಂದ ಮೇಲೆ ತಮ್ಮ ಸ್ಥಳ ಬದಲಾವಣೆ ಮಾಡ್ತಿದ್ದರು. ನಗರದ ಹೊರವಲಯದಲ್ಲಿ ಬಾಡಿಗೆ ಪಡೆದು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ABOUT THE AUTHOR

...view details