ಪುಣೆ(ಮಹಾರಾಷ್ಟ್ರ):ಅಂತರ್ಜಾತಿ ವಿವಾಹಕ್ಕೆ ಸರ್ಕಾರ, ಕೋರ್ಟ್ಗಳೇ ಬೆಂಬಲ ನೀಡಿ, ಅದಕ್ಕಾಗಿ ಯೋಜನೆಗಳನ್ನೇ ರೂಪಿಸಿವೆ. ಆದರೆ, ಮಹಾರಾಷ್ಟ್ರದಲ್ಲಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.
ಅಲ್ಲದೇ, ಅಂತರ್ಜಾತಿ ವಿವಾಹವಾದ ಕಾರಣಕ್ಕೆ ತನ್ನ ಕುಟುಂಬವನ್ನು ಸಮಾಜ ಬಹಿಷ್ಕರಿಸಿದೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ. ದೂರಿನ ಮೇರೆಗೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಅಂತರ್ಜಾತಿ ವಿವಾಹ ವಿವಾದ?
ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ಗವಾಲಿ ಸಮುದಾಯದ 'ಪಂಚ್' ಜಾತಿಯ ವ್ಯಕ್ತಿಯೊಬ್ಬ ಬೇರೆ ಜಾತಿಯ ಯುವತಿಯನ್ನು ವಿವಾಹವಾಗಿದ್ದ. ಇದಕ್ಕೆ ಮದುವೆಗೆ ಬಂದಿದ್ದ ಸಂಬಂಧಿಕರು ಅಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಯುವಕ ಆ ಯುವತಿಯನ್ನು ವರಿಸಿದ್ದ.
ಬಳಿಕ ಸಂಬಂಧಿಕರು ಮತ್ತು ಸಮುದಾಯದವರು ಸೇರಿ ಆ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಹಾಕಿದ್ದರು. ಇದರಿಂದ ನೊಂದಿದ್ದ ಆ ಕುಟುಂಬ ಸದಸ್ಯರು ಅಂಧ ಶ್ರದ್ಧಾ ನಿರ್ಮೂಲನಾ ಸಮಿತಿ (ಮೂಢನಂಬಿಕೆ ವಿರುದ್ಧ ಹೋರಾಡುವ ಸಂಘಟನೆ)ಯನ್ನು ಸಂಪರ್ಕಿಸಿ ತಮ್ಮ ಕುಟುಂಬವನ್ನು ಬಹಿಷ್ಕರಿಸಿದ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂಓದಿ: ಗಡಿಯಲ್ಲಿ ಪಾಕಿಸ್ತಾನದಿಂದ ಬಂಕರ್, ಪೋಸ್ಟ್ ನಿರ್ಮಾಣ?.. ಭಾರತೀಯ ಸೇನೆಯಿಂದ ಆಕ್ಷೇಪ.. ನಿರ್ಮಾಣ ಸ್ಥಗಿತ
ದೂರುದಾರರ ಮಾಹಿತಿಯಂತೆ ಇಲ್ಲಿನ ದತ್ತವಾಡಿ ಪೊಲೀಸರು ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2016 ರ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.