ಬೀಡ್, ಮಹಾರಾಷ್ಟ್ರ: ಮನೆಯೊಂದಕ್ಕೆ ಬೆದರಿಕೆ ಪತ್ರ ಅಂಟಿಸಿರುವ ಆಘಾತಕಾರಿ ಘಟನೆ ಜಿಲ್ಲೆಯ ಪರಲಿ ತಾಲೂಕಿನ ಸಿರಸಾಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ‘ಧರ್ಮವೊಂದನ್ನು ನಿಂದಿಸಿದವರಿಗೆ ಒಂದೇ ಒಂದು ಶಿಕ್ಷೆ.. ಅದು ಶಿರಚ್ಛೇದ.. ಶೀಘ್ರದಲ್ಲೇ ನಿಮ್ಮ ತಲೆಯನ್ನು ಕಡಿಯಲಾಗುವುದು’ ಎಂದು ಪತ್ರದಲ್ಲಿ ಬರೆಯಲಾಗಿದೆ. ವಿಷಯ ಬಯಲಿಗೆ ಬಂದ ನಂತರ ಪರಲಿ ತಾಲೂಕಿನಲ್ಲಿ ಸಂಚಲನ ಮೂಡಿದೆ. ಈ ಪ್ರಕರಣದಲ್ಲಿ ಅಪರಿಚಿತ ಸಾಮಾಜಿಕ ಕಾರ್ಯಕರ್ತನ ವಿರುದ್ಧ ಸಿರಸಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಸಾಲ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ ಇಂತಹ ಬೆದರಿಕೆ ಪತ್ರಗಳು ಬರುತ್ತಿರುವುದು ಎರಡು ಧರ್ಮಗಳ ನಡುವೆ ಬಿರುಕು ಮೂಡಿಸಿದೆ. ಪೊಲೀಸ್ ಆಡಳಿತ ಇಂತಹ ಪರಿಸ್ಥಿತಿ ಬರದಂತೆ ತಡೆಯಲು ಹರಸಾಹಸ ಪಡುತ್ತಿದೆ. ಪೊಲೀಸ್ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಸಿರಸಾಲದಲ್ಲಿ ವಾಸವಾಗಿರುವ ದೂರುದಾರ ಉಮೇಶ್ ರಂಗನಾಥ್ ಪವಾರ್ ಅವರ ಮನೆಗೆ ಹಿಂದಿ ಭಾಷೆಯಲ್ಲಿ ಬೆದರಿಕೆ ಪತ್ರವನ್ನು ಅಂಟಿಸಲಾಗಿದೆ.
ಅದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಇದೊಂದು ಬೆದರಿಕೆ ಪತ್ರ ಎಂಬುದು ಉಮೇಶ್ಗೆ ತಿಳಿದಿದೆ. ಪತ್ರದ ಬೆದರಿಕೆಯ ವಿಷಯದ ಗಂಭೀರತೆಯನ್ನು ಕಂಡು ಅವರು ಪೊಲೀಸರನ್ನು ಸಂಪರ್ಕಿಸಿದರು. ಸ್ಥಳಕ್ಕೆ ಸಿರಸಾಲ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಸಾಮಾಜಿಕ ಕಾರ್ಯಕರ್ತನ ವಿರುದ್ಧ ಸಿರಸಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆ ಪತ್ರದಲ್ಲಿ ಬರೆದಿದ್ದೇನು?: ಇದೇ ವೇಳೆ ಉಮೇಶ್ ರಂಗನಾಥ್ ಪವಾರ್ ಅವರ ಮನೆಗೆ ಅಂಟಿಸಿರುವ ಬೆದರಿಕೆ ಪತ್ರದಲ್ಲಿ ಹೀಗೆ ಬರೆಯಲಾಗಿದೆ.. 'ಆರ್‌ಎಸ್‌ಎಸ್‌ನ ಗೂಂಡಾ ಆಗಿರುವ ನೀನು ಸಿರಸಾಲಾದಲ್ಲಿ ಆರ್‌ಎಸ್‌ಎಸ್ ನಡೆಸುತ್ತಿದ್ದೀಯಾ.. ನಮ್ಮ ಧರ್ಮದ ನಿಂದನೆ ಬಗ್ಗೆ ಏನು ಶಕ್ಷೆ ಎಂಬುದು ನೀನು ತಿಳಿದಿಲ್ಲ. ಆದಷ್ಟು ಬೇಗ ನಿನ್ನ ದೇಹದಿಂದ ತಲೆ ಬೇರ್ಪಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆದಷ್ಟು ಬೇಗ ಆರೋಪಿಯನ್ನು ಸೆರೆ ಹಿಡಿಯುವ ಭರವಸೆಯನ್ನು ನೀಡಿದ್ದಾರೆ. ಈ ಘಟನೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಆರ್‌ಎಸ್‌ಎಸ್ ನಾಯಕ ಶಿವಮೊಗ್ಗಕ್ಕೆ ಭೇಟಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಇತ್ತಿಚೇಗೆ ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಅವರು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಪ್ರಮುಖರೊಂದಿಗೆ ಸಭೆ ನಡೆಸಿದ ಬಳಿಕ ಅನಾರೋಗ್ಯದಿಂದ ಮೃತಪಟ್ಟ ಆರ್‌ಎಸ್‌ಎಸ್ ಪ್ರಮುಖ ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ನಗರದ ಕೋಟೆ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಾಲಯದ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದ್ದರು. ನಂತರ ಭಾಗವತ್ ಅವರು ಶ್ರೀರಾಮ ಹಾಗೂ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು.
ಬಿಜೆಪಿ ಮತ್ತು ಆರ್ಎಸ್ಎಸ್ಗೆ ರಾಹುಲ್ ಗಾಂಧಿ ಧನ್ಯವಾದ: ಇತ್ತಿಚೇಗೆ ಬಿಜೆಪಿ ಮತ್ತು ಆರ್ಎಸ್ಎಸ್ಗೆ ರಾಹುಲ್ ಗಾಂಧಿ ಧನ್ಯವಾದ ಸಲ್ಲಿಸಿದ್ದರು. ಭಾರತ್ ಜೋಡೋ ಯಾತ್ರೆ ಉದ್ದಕ್ಕೂ ಜನರ ಧ್ವನಿ ಆಲಿಸಲು ಸಾಧ್ಯವಾಗಿರುವುದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು (ಬಿಜೆಪಿ ಮತ್ತು ಆರ್‌ಎಸ್‌ಎಸ್‌ಯವರು) ನಮ್ಮನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದರಿಂದ ಅದು ನಮಗೆ ಕೆಲವು ರೀತಿಯಲ್ಲಿ ಸಹಾಯವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಓದಿ:ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಗುರುತು ಪತ್ತೆ.. ಈ ಘಟನೆ ನಡೆದಿದ್ದು ನಮ್ಮ ರಾಜ್ಯದಲ್ಲಿಲ್ಲ ಎಂದ ಮಮತಾ ಬ್ಯಾನರ್ಜಿ