ಭೋಪಾಲ್(ಮಧ್ಯಪ್ರದೇಶ):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೋವಿಡ್ ದೃಢಪಟ್ಟಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಕೆ ಸಿಲುಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ ತನ್ನ ಚುನಾವಣಾ ರಾಲಿಯನ್ನು ರದ್ದು ಮಾಡಿರುವುದಾಗಿ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ. ಹೀಗಾಗಿಯೇ ಅವರಿಗೆ ಕೊರೊನಾ ಬಂದಿದೆ. ಸುಳ್ಳು ಹೇಳೋರಿಗೆ ಕೊರೊನಾ ವೈರಸ್ ಬರುತ್ತೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ನಾನು ಮೋದಿ ಅಲ್ಲ, ಸುಳ್ಳು ಹೇಳಲ್ಲ.. ಚಹಾ ಕಾರ್ಮಿಕರಿಗೆ 365 ರೂ. ಪಕ್ಕಾ: ರಾಹುಲ್ ಗಾಂಧಿ ಭರವಸೆ
ದೇಶದಲ್ಲಿ ಕೋವಿಡ್ ಸಾಮಾನ್ಯವಾಗಿದೆ. ಆದರೆ ಮಾಧ್ಯಮಗಳು ಕೋವಿಡ್-19ಗೆ ಬಲಿಯಾದವರ ಮೃತದೇಹಗಳನ್ನು ತೋರಿಸಿ ಭಯ ಹುಟ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ, ಕೋವಿಡ್ ಸೋಂಕಿತರ ಸೇವೆ ಮಾಡುತ್ತಿರುವವರ ಬಗ್ಗೆ ಪಾಸಿಟಿವ್ ವರದಿಗಳನ್ನು ತೋರಿಸಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್ ಮೊದಲ ಅಲೆಯೂ ದೇಶದಲ್ಲಿ ಭಾರಿ ತಲ್ಲಣ ಸೃಷ್ಟಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರಲ್ಲೂ ಈ ವೈರಸ್ ಪತ್ತೆಯಾದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.