ಗೋರಖ್‌ಪುರ (ಉತ್ತರ ಪ್ರದೇಶ): ಉತ್ತರಪ್ರದೇಶದ ಪ್ರತಿ ಪಕ್ಷಗಳನ್ನು ವಿರುದ್ಧ ಚಾಟಿ ಬೀಸಿದ ಕಾರಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ರಾಮ ಒಂದು ಕಲ್ಪನೆ ಎಂದು ಹೇಳುತ್ತಿದ್ದವರು ಈಗ ಅವರು ಎಲ್ಲರಿಗೂ ಸೇರಿದ್ದಾರೆಂದು ಹೇಳುತ್ತಿದ್ದಾರೆ".
"ಹಿಂದಿನ ಸರ್ಕಾರಗಳು ಎಲ್ಲ ಸಮಸ್ಯೆಗಳನ್ನು ಬಗೆಹರಿಸದೇ ಇರಲು ಬಯಸಿದ್ದವು. ರಾಮ ಒಂದು ಕಲ್ಪನೆ ಎಂದು ಹೇಳುತ್ತಿದ್ದವರು, 'ಭಕ್ತ'ರ ಮೇಲೆ ಕಿಡಿ ಕಾರುತ್ತಿದ್ದವರು, ರಾಮ ಅಸ್ತಿತ್ವದಲ್ಲಿಲ್ಲ ಎಂದು ಹೇಳುವವರು, ಈಗ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಿದ್ದಾರೆ" ಎಂದರು.
ಗೋರಖ್‌ಪುರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿ ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗಾಗಿ ಡಿಸಿಜಿಐ ಅನುಮೋದನೆ ಕುರಿತು ಮಾತನಾಡಿದ ಅವರು "ಇಂದು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ಏಕಕಾಲದಲ್ಲಿ ಎರಡು ಕೋವಿಡ್ -19 ಲಸಿಕೆಗಳನ್ನು ಬಿಡುಗಡೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಜಗತ್ತಿನಲ್ಲಿ ಒಂದು ಲಸಿಕೆ ಇದ್ದರೆ ಭಾರತವು ಎರಡು ಲಸಿಕೆಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತಿದೆ" ಎಂದಿದ್ದಾರೆ.
"ಪ್ರಧಾನ ಮಂತ್ರಿ ತಮ್ಮ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ, ಆದರೆ ಅವರನ್ನು ಟೀಕಿಸುವವರು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತಾರೆ. ಆದರೆ ಮೋದಿ ಇಂತ ನಿಷ್ಪ್ರಯೋಜಕ ಟೀಕೆಗಳಿಂದ ವಿಚಲಿತರಾಗುವವರಲ್ಲ" ಎಂದು ಹೇಳಿದ್ದಾರೆ.