ಸಹರಾನ್‌ಪುರ :ಕಾಶಿ ಮತ್ತು ಮಥುರಾದ ಧಾರ್ಮಿಕ ಸ್ಥಳಗಳ ಹಕ್ಕುಗಳ ನಡುವೆ ಜಮೀಯತ್ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಸಮ್ಮೇಳನ ಫತ್ವಾ ನಗರದ ದೇವಬಂದ್‌ನಲ್ಲಿ ಭಾನುವಾರ ಮುಕ್ತಾಯಗೊಂಡಿತು. ಈ ವೇಳೆ ಜಮೀಯತ್ ಪ್ರಧಾನ ಕಾರ್ಯದರ್ಶಿ ಮಹ್ಮದ್ ಮದನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.
ದಿಯೋಬಂದ್‌ನ ಈದ್ಗಾ ಮೈದನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮದನಿ, ಎಲ್ಲಾ ಮುಸ್ಲಿಮರು ಭಯ, ಹತಾಶೆ ಮತ್ತು ಭಾವೋದ್ವೇಗದಿಂದ ದೂರವಿದ್ದು ತಮ್ಮ ಭವಿಷ್ಯದ ಒಳಿತಿಗಾಗಿ ಶ್ರಮಿಸಬೇಕು. ಮುಸ್ಲಿಮರು ಯಾವಾಗಲೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಈ ವಿಷಯದಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ ಎಂದು ಹೇಳಿದರು.
ಕೊನೆಯ ದಿನದಲ್ಲಿ ವಿಶೇಷವಾಗಿ ಸಾಂವಿಧಾನಿಕ ಹಕ್ಕುಗಳ ಹರಣ ಮತ್ತು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ, ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾ, ಪವಿತ್ರ ಪ್ರವಾದಿ (ಸ) ನಿಂದನೆ ಮತ್ತು ಹಿಂದಿ ಭಾಷೆ ಅಳವಡಿಕೆಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಪ್ರಸ್ತಾಪಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.