ನವದೆಹಲಿ:ಧರ್ಮದ ಹೆಸರಿನಲ್ಲಿ ಜನರನ್ನು ಭಯಪಡಿಸುವ ವ್ಯಕ್ತಿಗಳು ಜಿಹಾದಿಗಳಲ್ಲ, ಫಸಾದಿಗಳು ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಸಾದಿಗಳು ಎಂದರೆ ಸಮಾಜಕ್ಕೆ ಉಪದ್ರವ ನೀಡುವವರು ಎಂಬ ಅರ್ಥವಿದೆ.
ಜನರು ಪ್ರಜಾಸತ್ತಾತ್ಮಕ ಸ್ವರೂಪದ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ಎಂದರೆ ಒಂದು ಸಮುದಾಯದ ಮೇಲೆ ಅಧಿಪತ್ಯ ಸಾಧಿಸುವವರಿಗೆ ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸುತ್ತಿರುತ್ತಾರೆ. ಅವರು ಜಿಹಾದಿಗಳಲ್ಲ, ಫಸಾದಿಗಳು ಎಂದು ಕೇರಳ ರಾಜ್ಯಪಾಲರು ಹೇಳಿದ್ದಾರೆ.
ಮದರಸಾದಲ್ಲಿನ ಬೋಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರೀಫ್ ಮೊಹಮದ್ ಖಾನ್ ಮತ್ತು ಇಂಥಹ ಪಠ್ಯಕ್ರಮವು ಯುವ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಾನು ಮದರಸಾಗಳ ಬಗ್ಗೆ ಮಾತನಾಡಿದ್ದೇನೆ, ಮದರಸಾಗಳಲ್ಲಿನ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ದೇವರನ್ನು ನಿರಾಕರಿಸುವಂತಿದ್ದರೆ, ಆತನನ್ನು ಕೊಲ್ಲು ಎಂದು ಕಲಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.