ನವದೆಹಲಿ:ಮೇ1 ರಿಂದ ಕೋವಿಡ್ ವ್ಯಾಕ್ಸಿನೇಷನ್ಗೆ ಅರ್ಹರಾಗಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಶನಿವಾರ (ಏಪ್ರಿಲ್ 24) ರಿಂದ ಕೋವಿನ್ ಪ್ಲಾಟ್ಫಾರ್ಮ್ನಲ್ಲಿ ಅಥವಾ ಆರೋಗ್ಯಾ ಸೇತು ಆ್ಯಪ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಭಾರತದಲ್ಲಿ ಅತ್ಯಂತ ಕಠಿಣ ಕೋವಿಡ್ ಪರಿಸ್ಥಿತಿ ಎದುರಿಸುತ್ತಿದ್ದು, ಮೇ 1 ರಿಂದ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಈವರೆಗೆ ಅರ್ಹರು ಎಂದು ಘೋಷಿಸಲ್ಪಟ್ಟ ಕೋವಿಡ್ ವಿರುದ್ಧದ ಮುಂಚೂಣಿ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೂಡ ಲಸಿಕೆ ನೀಡುವುದನ್ನು ಕೇಂದ್ರ ಸರ್ಕಾರ ಮುಂದುವರಿಸಲಿದೆ.
ಕೋವಿನ್ (CoWin)ನಲ್ಲಿ ನೋಂದಣಿ ಹೇಗೆ?
ಮುಂದಿನ 48 ಗಂಟೆಗಳಲ್ಲಿ ಸರ್ಕಾರದ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಆರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟವರು ಇಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
- ಕೋವಿನ್ ವೆಬ್ಸೈಟ್ಗೆ ಹೋಗಿ, 'ರಿಜಿಸ್ಟರ್ ಅಥವಾ ಸೈನ್ ಇನ್' ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, 'ಗೆಟ್ ಒಟಿಪಿ' ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಬಂದ ಒಟಿಪಿ ನಮೂದಿಸಿ. ಬಳಿಕ 'ಪರಿಶೀಲಿಸಿ' (Verify) ಎಂಬುದರ ಮೇಲೆ ಕ್ಲಿಕ್ ಮಾಡಿ.
- ವ್ಯಾಕ್ಸಿನೇಷನ್ ಫಾರ್ ರಿಜಿಸ್ಟರ್ ಪುಟದಲ್ಲಿ, ಫೋಟೋ ಐಡಿ ಪ್ರೂಫ್, ಹೆಸರು, ಲಿಂಗ ಮತ್ತು ಹುಟ್ಟಿದ ವರ್ಷ ಸೇರಿದಂತೆ ಎಲ್ಲಾ ವಿವರಗಳನ್ನು ನಮೂದಿಸಿ. 'ರಿಜಿಸ್ಟರ್' (Register) ಮೇಲೆ ಕ್ಲಿಕ್ ಮಾಡಿ.
- ನೋಂದಾಯಿಸಿದ ನಂತರ, ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ, ನೋಂದಾಯಿತ ವ್ಯಕ್ತಿಯ ಹೆಸರಿನ ಪಕ್ಕದಲ್ಲಿರುವ 'ವೇಳಾಪಟ್ಟಿ' (Schedule) ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪಿನ್ ಕೋಡ್ ನಮೂದಿಸಿ ಮತ್ತು 'ಹುಡುಕಾಟ' (Search) ಮೇಲೆ ಕ್ಲಿಕ್ ಮಾಡಿ. ಪಿನ್ ಕೋಡ್ನಲ್ಲಿರುವ ಕೇಂದ್ರಗಳು ಕಾಣಿಸಿಕೊಳ್ಳುತ್ತವೆ, ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ ಮತ್ತು 'ದೃಢೀಕರಿಸಿ' (Confirm) ಮೇಲೆ ಕ್ಲಿಕ್ ಮಾಡಿ.
- ಒಂದು ಲಾಗಿನ್ ಮೂಲಕ ನೀವು ನಾಲ್ಕು ಸದಸ್ಯರನ್ನು ಸೇರಿಸಬಹುದು. ಇದೇ ಪ್ರಕ್ರಿಯೆ ಬಳಸಿ ನಿಮ್ಮ ನೇಮಕಾತಿಯನ್ನು ಮರು ನಿಗದಿಪಡಿಸಬಹುದು.
ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಪ್ರಕ್ರಿಯೆ
- ಆರೋಗ್ಯ ಸೇತು ಅಪ್ಲಿಕೇಶನ್ಗೆ ಹೋಗಿ - ಕೋವಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ವ್ಯಾಕ್ಸಿನೇಷನ್ ನೋಂದಣಿ ಆಯ್ಕೆ ಮಾಡಿ - ಫೋನ್ ಸಂಖ್ಯೆಯನ್ನು ನಮೂದಿಸಿ - ಒಟಿಪಿ ನಮೂದಿಸಿ
- ಪರಿಶೀಲನೆ (Verify) ಮೇಲೆ ಕ್ಲಿಕ್ ಮಾಡಿದಾಗ ವ್ಯಾಕ್ಸಿನೇಷನ್ ಪುಟ ತೆರೆದುಕೊಳ್ಳುತ್ತದೆ
- ಬಳಿಕ 'ಕೋವಿನ್' ಪೋರ್ಟಲ್ನಂತೆಯೇ ಪ್ರಕ್ರಿಯೆಯ ಹಂತಗಳನ್ನು ಅನುಸರಿಸಿ
ಪ್ರತಿ ನಾಗರಿಕರು ಲಸಿಕೆಯ ಎರಡು ಡೋಸ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋವ್ಯಾಕ್ಸಿನ್ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ 28 ದಿನಗಳಿಂದ 42 ದಿನಗಳ ನಡುವೆ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ 28 ದಿನಗಳಿಂದ 56 ದಿನಗಳೊಳಗಾಗಿ ತೆಗೆದುಕೊಳ್ಳಬೇಕು.