ಕರ್ನಾಟಕ

karnataka

ETV Bharat / bharat

ಹೆತ್ತವಳನ್ನು ಹುಡುಕಿಕೊಂಡು ಭಾರತಕ್ಕೆ ಬಂದ ಥಾಮಸ್​ ಕುಮಾರ್​ ಜಾನ್ಸನ್ - ಥಾಮಸ್​ ಕುಮಾರ್​ ಜಾನ್ಸನ್

ಸಾಕಿದ ತಂದೆ ಇವರು ತನ್ನ ಹೆತ್ತವರನ್ನು ಹುಡುಕಲು ಹೊರಟಾಗ ಪ್ರೋತ್ಸಾಹಿಸಿದ್ದರು. ಭಾರತಕ್ಕೆ ಹೋಗಿ ಹುಡುಕಲು ಜಾನ್ಸನ್​ ಹಾಗೂ ಅವರ ಸಹೋದರಿಗೆ ಫ್ಲೈಟ್​ ಟಿಕೆಟ್​ಗಳನ್ನೂ ಬುಕ್​ ಮಾಡಿಕೊಟ್ಟಿದ್ದರು. ತನ್ನ ನಿಜವಾದ ಹೆತ್ತವರೊಂದಿಗೆ ಒಂದಾಗುವ ಬಗ್ಗೆ ಹೆಚ್ಚು ಭರವಸೆ ಹೊಂದಿದ್ದಾರೆ..

Thomas Kumar Johnson
ಥಾಮಸ್​ ಕುಮಾರ್​ ಜಾನ್ಸನ್

By

Published : Apr 8, 2022, 1:12 PM IST

ತಿರುಚ್ಚಿ (ತಮಿಳುನಾಡು) :1990ರಲ್ಲಿ ಅಮೆರಿಕಾದ ದಂಪತಿಯೊಂದು ತಿರುಚಿರಾಪಳ್ಳಿಯಿಂದ ಒಂದು ವಷರ್ದ ಮಗುವೊಂದನ್ನು ದತ್ತು ಪಡೆದು ತಮ್ಮ ನಾಡಿಗೆ ಕರೆದೊಯ್ದಿದ್ದರು. ತಮ್ಮ ಸ್ವಂತ ಮಗನಂತೆಯೇ ಪ್ರೀತಿ ನೀಡಿ, ಸಾಕಿ ಬೆಳೆಸಿದ್ದರು. ಆ ಹುಡುಗ ಬೆಳೆದಂತೆ ದತ್ತು ಪಡೆದ ಪೋಷಕರಲ್ಲಿ ತಮ್ಮ ಮೂಲದ ಬಗ್ಗೆ ಪ್ರಶ್ನೆ ಮಾಡಲು ಪ್ರಾರಂಭಿಸಿದ್ದಾರೆ. ಸಾಕಿದ ತಂದೆ-ತಾಯಿಯಿಂದ ಮಾಹಿತಿ ತಿಳಿದುಕೊಂಡ 32 ವರ್ಷದ ಥಾಮಸ್​ ಕುಮಾರ್​ ಜಾನ್ಸನ್​ ಇದೀಗ ತನ್ನ ಹೆತ್ತವರನ್ನು ಅದರಲ್ಲೂ ತಾಯಿಯ ಹುಡುಕಾಟದಲ್ಲಿದ್ದಾರೆ.

ತಮ್ಮ ಹೆತ್ತವರನ್ನು ಹುಡುಕುವ ಸಲುವಾಗಿ ಕಳೆದ ಹತ್ತು ವರ್ಷಗಳಲ್ಲಿ ಇದು ನಾಲ್ಕನೇ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಒಮ್ಮೆಯಾದರೂ ತಮ್ಮ ನಿಜವಾದ ತಾಯಿಯನ್ನು ಭೇಟಿ ಮಾಡಬೇಕು ಎನ್ನುವ ಆಸೆ ಇವರದು. ತಾಯಿಯನ್ನು ಭೇಟಿಯಾಗಿ ಒಮ್ಮೆ ಗಟ್ಟಿಯಾಗಿ ತಬ್ಬಿಕೊಂಡು, ನಾನು ಜೀವಂತವಾಗಿದ್ದೇನೆ, ಚೆನ್ನಾಗಿದ್ದೇನೆ ಎಂದು ಅವಳಿಗೆ ಹೇಳಬೇಕು.

ಅವಳು ಆರೋಗ್ಯವಾಗಿದ್ದಾಳೆಯೇ? ನನಗೆ ಯಾರಾದರೂ ಸಹೋದರ- ಸಹೋದರಿಯರು, ಸಂಬಂಧಿಕರು ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ನನ್ನ ತಂದೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ನನಗಿದೆ. ಆ ಕಾರಣಕ್ಕಾದರೂ ತಾಯಿಯನ್ನು ಹುಡುಕಬೇಕು ಎಂದು ಜಾನ್ಸನ್​ ಈಟಿವಿ ಭಾರತಕ್ಕೆ ಭಾವುಕರಾಗಿ ಹೇಳಿದ್ದಾರೆ.

ನನ್ನ ದತ್ತು ದಾಖಲೆಯಲ್ಲಿ ತಾಯಿಯ ಹೆಸರು ಮೇರಿ ಎಂದಿರುವುದನ್ನು ನೋಡಿದ ಮೇಲೆ, ನನಗೆ ಮಾತ್ರ ನನ್ನ ನಿಜವಾದ ತಾಯಿಯನ್ನು ನೋಡುವ ಆಸೆ ಹೆಚ್ಚಿದೆ. 1989ರ ಏಪ್ರಿಲ್​ 18ರಂದು ನಾನು ಹುಟ್ಟಿದ್ದು, ನಾನು ಒಂದು ವರ್ಷದ ಮಗುವಾಗಿದ್ದಾಗಲೇ ನನ್ನನ್ನು ದತ್ತು ನೀಡಲಾಗಿತ್ತು. ಸಮಾಜ ಕಲ್ಯಾಣ ಸಂಸ್ಥೆ ನನ್ನನ್ನು ದತ್ತು ನೀಡುವಲ್ಲಿ ಸಹಾಯ ಮಾಡಿತ್ತು. ಹತ್ತು ವರ್ಷಗಳಿಂದ ನಾನು ನನ್ನ ಹೆತ್ತವರಿಗಾಗಿ ಹುಡುಕಾಡುತ್ತಿದ್ದೇನೆ. ಇದು ನಾಲ್ಕನೇ ಬಾರಿ ಅವಳನ್ನು ಹುಡುಕಲು ಬಂದಿದ್ದೇನೆ. ಅವಳು ಚೆನ್ನಾಗಿದ್ದಾಳೆ ಎಂದೇ ನಾನು ಭಾವಿಸುತ್ತೇನೆ. ಯಾರಿಗಾದರೂ ನನ್ನ ತಾಯಿಯ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ನನ್ನೊಂದಿಗೆ ಹಂಚಿಕೊಳ್ಳಿ ಎಂದು ಜಾನ್ಸನ್​ ಮನವಿ ಮಾಡಿಕೊಂಡಿದ್ದಾರೆ.

ಅವರ ನಿಜವಾದ ತಂದೆ-ತಾಯಿ ಅವರಿಗಿಟ್ಟ ಹೆಸರು ಸಂಪತ್​ ಕುಮಾರ್​. ಪುದುಕೊಟ್ಟೈ ನಗರದ ಮುತರಸನಲ್ಲೂರಿನಲ್ಲಿ ಇವರ ಹೆತ್ತವರು ವಾಸಿಸುತ್ತಿದ್ದರು ಎಂಬ ಮಾಹಿತಿ ಅವರಿಗೆ ದೊರೆತಿದೆ. ಹೆಸರು ಮಾತ್ರವಲ್ಲದೆ ಓಹಿಯೋದಲ್ಲಿ ಬೆಳೆದ ಕಾರಣ ಭಾರತೀಯ ಸಂಸ್ಕೃತಿ, ಭಾಷೆಯಿಂದಲೂ ಜಾನ್ಸನ್​ ದೂರವಾಗಿದ್ದಾರೆ. ಇವರನ್ನು ದತ್ತು ಪಡೆದ ಮೇರಿಕನ್​ ತಾಯಿ ವಿಜ್ಞಾನಿ, ಅಕಾಡೆಮಿಕ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಅವರ ತಂದೆ 2008ರಲ್ಲಿ ನಿಧನರಾದರು.

ಸಾಕಿದ ತಂದೆ ಇವರು ತನ್ನ ಹೆತ್ತವರನ್ನು ಹುಡುಕಲು ಹೊರಟಾಗ ಪ್ರೋತ್ಸಾಹಿಸಿದ್ದರು. ಭಾರತಕ್ಕೆ ಹೋಗಿ ಹುಡುಕಲು ಜಾನ್ಸನ್​ ಹಾಗೂ ಅವರ ಸಹೋದರಿಗೆ ಫ್ಲೈಟ್​ ಟಿಕೆಟ್​ಗಳನ್ನೂ ಬುಕ್​ ಮಾಡಿಕೊಟ್ಟಿದ್ದರು. ತನ್ನ ನಿಜವಾದ ಹೆತ್ತವರೊಂದಿಗೆ ಒಂದಾಗುವ ಬಗ್ಗೆ ಹೆಚ್ಚು ಭರವಸೆ ಹೊಂದಿದ್ದಾರೆ.

ಈ ವಿಷಯದಲ್ಲಿ ಸಹಾಯ ಮಾಡುತ್ತಿರುವ ವಕೀಲೆ, ಮಕ್ಕಳ ಕಳ್ಳಸಾಗಣೆಯ ವಿರುದ್ಧ ಕೆಲಸ ಮಾಡುವ ಸಂಸ್ಥೆಯ ಅಂಜಲಿ ಪವಾರ್​ ಮಗುವನ್ನು ದತ್ತು ತೆಗೆದುಕೊಳ್ಳುವ ಸಮಸಯದಲ್ಲಿ ಮೇರಿ ಅವರಿಗೆ 21 ವರ್ಷವಾಗಿತ್ತು. ಈಗ 50ರ ಆಸುಪಾಸಿನಲ್ಲಿರಬಹುದು. ನಾವು ಮುತರಸನಲ್ಲೂರು ಮತ್ತು ಪುದುಕೊಟ್ಟೈನ ಕೆಲವು ಚರ್ಚ್​ಗಳಿಗೆ ಭೇಟಿ ನೀಡಿ ವಿಚಾರಿಸಿದ್ದೇವೆ. ಕೆಲವೊಂದು ಸಕಾರಾತ್ಮಕ ಮಾಹಿತಿಗಳು ದೊರೆತಿವೆ. ಹಾಗಾಗಿ, ಅವರನ್ನು ಅವರ ನಿಜವಾದ ತಂದೆ-ತಾಯಿ ಬಳಿ ಸೇರಿಸುವ ಭರವಸೆ ಹೆಚ್ಚಾಗಿದೆ ಎಂದು ತಿಳಿಸಿದರು.

ABOUT THE AUTHOR

...view details