ಪ್ರಯಾಗರಾಜ್ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಹಳ್ಳಿವೊಂದರಲ್ಲಿ ಶೇಕಡಾ 80ರಷ್ಟು ಜನರು ಜನವರಿ 1ರಂದೇ ಹುಟ್ಟಿದ್ದಾರಂತೆ!. ಹಾಗಂತ ಹೇಳುತ್ತಿರುವುದು ಅವರವರ ಆಧಾರ್ ಕಾರ್ಡ್. ಪ್ರಯಾಗರಾಜ್ನ ಬಾರಾ ತೆಹಲ್ಸಿ ಗ್ರಾಮಸ್ಥರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಈ ಅಚ್ಚರಿಯ ಮಾಹಿತಿ ಗೊತ್ತಾಗಿದೆ.
ಗ್ರಾಮಸ್ಥರೆಲ್ಲರೂ ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದೇ ಜನಿಸಿರುವ ಬಗ್ಗೆ ಆಧಾರ್ ಕಾರ್ಡ್ಗಳು ಹೇಳುತ್ತವೆ. ಒಂದು ಕುಟುಂಬದ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಕುಟುಂಬದ ತಂದೆ, ತಾಯಿ, ಪುತ್ರರು, ಮಗಳು, ಸೊಸೆ ಮತ್ತು ಇತರರು ಸೇರಿದಂತೆ ಹತ್ತು ಸದಸ್ಯರು ಹೊಸ ವರ್ಷದಂದು ಜನಿಸಿದ್ದು, ಈಟಿವಿ ಭಾರತ ಈ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದಾಗ ಸತ್ಯ ಗೊತ್ತಾಗಿದೆ.