ಸೀರೆಯುಟ್ಟು ನಡೆಯುವುದೇ ಕಷ್ಟ ಅನ್ನೋ ಈ ಕಾಲದ ಹುಡುಗಿಯರಿಗೆ ಇಲ್ಲೊಬ್ಬ ಮಹಿಳೆಯ ಸಾಧನೆ ಸವಾಲೆಸೆದಿದೆ. ಪಾರುಲ್ ಅರೋರಾ ಎಂಬ ಮಹಿಳೆ ಸೀರೆಯುಟ್ಟು ಸ್ಟಂಟ್ಸ್ ಮಾಡಿದ್ದಾರೆ.
ಈ ಹಿಂದೆ ನೀಲಿ ಸೀರೆಯುಟ್ಟು ಅವರು ಮಾಡಿದ್ದ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿ, ಭಾರಿ ವೈರಲ್ ಆಗಿತ್ತು. ಬಳಿಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದ ಇವರು ವಿಭಿನ್ನವಾಗಿ ಸ್ಟಂಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸೀರೆಯಲ್ಲಿ ಡೇಂಜರಸ್ ಸ್ಟಂಟ್ ಎಂಬ ಟ್ಯಾಗ್ ಲೈನ್ ಅಡಿ ಅರೋರಾ ಕಳೆದ ತಿಂಗಳು ಈ ವಿಡಿಯೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅವರಿಗೆ 1 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡಿ ಬೆಂಬಲಿಸಿದ್ದರು.
ಅಪರ್ಣಾ ಜೈನ್ ಎಂಬುವವರು ಮತ್ತೆ ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ನಲ್ಲಿ ಹಂಚಿಕೊಂಡಿದ್ದು, ‘ಸೀರೆಯಲ್ಲಿ ಜಿಮ್ನಾಸ್ಟಿಕ್ ಮಾಡುವಾಗ ಸೀರೆಯು ಗುರುತ್ವಾಕರ್ಷಣೆಯನ್ನು ಹೇಗೆ ತಡೆಯುತ್ತದೆ ಎಂಬುದನ್ನು ನೋಡಲು ನಾನು ಈ ವಿಡಿಯೋವನ್ನು ಮೂರು ಬಾರಿ ನೋಡಿದೆ’ ಎಂದು ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮಿಲಿಯನ್ ಗೂ ಹೆಚ್ಚು ಜನರು ಈ ವಿಡಿಯೋ ನೋಡಿ ಪಾರುಲ್ ಅವರನ್ನು ಶ್ಲಾಘಿಸಿದ್ದಾರೆ.