ಕರ್ನಾಟಕ

karnataka

ETV Bharat / bharat

ಇದು ವೆಜಿಟೇರಿಯನ್ ಮಾಂಸ.. ಬಣ್ಣ, ರುಚಿ ಎಲ್ಲ ಸೇಮ್..!! - ವೆಜ್ ಮೀಟ್

ಬೀಯರ್ ತಯಾರಿಸುವಷ್ಟೇ ಸುಲಭವಾಗಿ ಈಗ ಪ್ರಯೋಗಾಲಯದಲ್ಲಿ ಮಾಂಸ ತಯಾರಿಸಬಹುದಾಗಿದೆ. ಇದನ್ನೇ ಕಲ್ಚರ್ಡ್ ಮೀಟ್ ಎಂದು ಕರೆಯುವುದು. ಇದನ್ನು ಮಾಂಸ ಕೃಷಿ ಎಂದೂ ಸರಳವಾಗಿ ನೀವು ಕರೆಯಬಹುದು. ಹೆಸರು ಏನಾದರೂ ಇರಲಿ ಬಿಡಿ.. ಉದ್ದೇಶ ಒಂದೇ.. ಪ್ರಾಣಿಗಳನ್ನು ಕೊಲ್ಲದೆ ಮಾಂಸ ತಯಾರಿಸುವುದು .. ಅಷ್ಟೇ.

This is vegetarian meat.. color, taste all the same
ಇದು ವೆಜಿಟೇರಿಯನ್ ಮಾಂಸ.. ಬಣ್ಣ, ರುಚಿ ಎಲ್ಲ ಸೇಮ್

By

Published : Aug 3, 2022, 12:01 PM IST

ಕೃಷಿಯ ಮೂಲಕ ಬೆಳೆ ಬೆಳೆಯುವುದು ನಮಗೆಲ್ಲ ಗೊತ್ತು. ಆದರೆ, ಅದರಂತೆಯೇ ಮಾಂಸ ಬೆಳೆಯುವುದು ಗೊತ್ತಿದೆಯೇ? ಗೊತ್ತಿಲ್ಲವಾದರೆ ಮುಂದೆ ಓದಿ. ತುಂಬಾ ಸ್ವಾರಸ್ಯಕರವಾಗಿದೆ ಈ ವೆಜಿಟೇರಿಯನ್ ಮಾಂಸದ ವಿಚಾರ. ಇದು ಮಾಂಸ ಆದರೂ ಮಾಂಸವಲ್ಲ, ಒಂಥರ ಸಸ್ಯಾಹಾರಿ ಮಾಂಸ.

ಪ್ರಯೋಗಾಲಯದಲ್ಲಿ ಮಾಂಸ ಬೆಳೆಸುವುದು:ಪ್ರಾಣಿಗಳ ಮಾಂಸದ ಬದಲಾಗಿ ಪ್ರಯೋಗಾಲಯದಲ್ಲಿ ಬೆಳೆಸಿದ ಮಾಂಸ ಸೇವನೆಯ ಬಗ್ಗೆ ಇತ್ತೀಚೆಗೆ ಜಾಗೃತಿ ಹೆಚ್ಚಾಗುತ್ತಿದೆ. ಬೃಹತ್ತಾದ ಸ್ಟೀಲ್ ಬಯೊ ರಿಯಾಕ್ಟರ್​ಗಳಲ್ಲಿ ಬೆಳೆಸಲಾದ ಮಾಂಸವನ್ನು ಇನ್ನು ಕೆಲ ದಿನಗಳಲ್ಲಿ ಎಲ್ಲರೂ ಸೇವಿಸಲಾರಂಭಿಸಬಹುದು. ಒಂದು ಕಾಲಕ್ಕೆ ಕೇವಲ ಕಲ್ಪನಾ ವಿಜ್ಞಾನದ ಕತೆಯಾಗಿದ್ದ ಈ ಐಡಿಯಾ ಈಗ ವಾಸ್ತವವಾಗುತ್ತಿದೆ.

ನಿಜವಾದ ಮಾಂಸದ ಥರವೇ ಇರುವ, ಅಷ್ಟೇ ಅಲ್ಲ.. ಅದಕ್ಕಿಂತಲೂ ಚೆನ್ನಾಗಿರುವ ವೆಜ್ ಮೀಟ್​ ಅನ್ನು ಪ್ರಯೋಗಾಲಯಲದಲ್ಲಿ ಬೆಳೆಸುವುದಲ್ಲಿ ನಿರತವಾಗಿವೆ ಹಲವಾರು ಸಂಸ್ಥೆಗಳು. ಈಗಾಗಲೇ ಕೆಲವೊಂದು ಕಂಪನಿಗಳು ವೆಜ್ ಮೀಟ್​ ಅನ್ನು ಮಾರುಕಟ್ಟೆಗೂ ಪರಿಚಯಿಸಿವೆ. ಈ ಮಾಂಸ ಮಾಂಸವಲ್ಲ. ಇದನ್ನು ಕೃತಕ ಮಾಂಸ ಎಂದು ಕರೆಯಬಹುದು. ಆದ್ರೆ ಹಾಗಂತ ಇದು ಸಂಪೂರ್ಣ ಕೃತಕವೂ ಅಲ್ಲ. ಹೀಗಾಗಿಯೇ ಪ್ರಯೋಗಾಲಯಲ್ಲಿ ಬೆಳೆದ ಮಾಂಸಕ್ಕೆ ಹಲವಾರು ಹೆಸರುಗಳಿವೆ. ಮೊದಲಿಗೆ ಇದನ್ನು ವ್ಯಾಟ್ ಮೀಟ್ (vat meat) ಎಂದು ಕರೆಯಲಾಗಿತ್ತು.

ಈ ಹೆಸರು ಜನರಿಗೆ ಅಷ್ಟೊಂದು ಇಷ್ಟ ಆಗಲಿಲ್ಲ. ನಂತರ ಲ್ಯಾಬ್ ಮೀಟ್ ಎಂದು ಹೇಳಲಾಯಿತು. ಈ ಹೆಸರು ಬಹುತೇಕರಿಗೆ ಓಕೆ ಅನಿಸಿತು. ಇನ್ನೂ ಮುಂದುವರೆದು ಇದನ್ನು ಕಲ್ಚರ್ಡ್​ ಮೀಟ್ (cultured meat) ಎಂದು ಕರೆದರು. ಈ ಹೆಸರು ಇನ್ನೂ ಉತ್ತಮವಾಗಿದೆ. ಬೀಯರ್ ತಯಾರಿಸುವಷ್ಟೇ ಸುಲಭವಾಗಿ ಈಗ ಪ್ರಯೋಗಾಲಯದಲ್ಲಿ ಮಾಂಸ ತಯಾರಿಸಬಹುದಾಗಿದೆ. ಇದನ್ನೇ ಕಲ್ಚರ್ಡ್ ಮೀಟ್ ಎಂದು ಕರೆಯುವುದು. ಇದನ್ನು ಮಾಂಸ ಕೃಷಿ ಎಂದೂ ಸರಳವಾಗಿ ನೀವು ಕರೆಯಬಹುದು. ಹೆಸರು ಏನಾದರೂ ಇರಲಿ ಬಿಡಿ.. ಉದ್ದೇಶ ಒಂದೇ.. ಪ್ರಾಣಿಗಳನ್ನು ಕೊಲ್ಲದೆ ಮಾಂಸ ತಯಾರಿಸುವುದು .. ಅಷ್ಟೇ.

ಭವಿಷ್ಯದ ದಿನಮಾನಗಳಲ್ಲಿ ಮಾನವಕುಲಕ್ಕೆ ಆಹಾರ ಭದ್ರತೆಯ ಸಮಸ್ಯೆ ಎದುರಾಗಬಹುದು ಎಂಬ ಆತಂಕಗಳಿವೆ. ಈ ಮಧ್ಯೆ ಮಾಂಸಕ್ಕಾಗಿ ಪಶುಸಂಗೋಪನೆಯು ನಿಸರ್ಗದ ಶತ್ರುವಾಗುತ್ತಿದೆ. ಹೀಗಾಗಿ ವೆಜ್ ಮೀಟ್​ ಭವಿಷ್ಯದ ಮಾಂಸಾಹಾರವಾದರೂ ಅಚ್ಚರಿಯಿಲ್ಲ.

ಹೇಗೆ ತಯಾರಾಗುತ್ತೆ ವೆಜ್ ಮೀಟ್?:ಸರಳವಾಗಿ ಹೇಳುವುದಾದರೆ ಇದೊಂದು ಟೆಸ್ಟ್​ ಟ್ಯೂಬ್​ನಿಂದ ಬಯೊರಿಯಾಕ್ಟರ್ ಪ್ರಕ್ರಿಯೆ. ​ಪುನರುತ್ಪಾದಕ ಔಷಧ ಸೂತ್ರವು ಈ ಮಾಂಸದ ಬೆಳವಣಿಗೆಯ ಮೂಲ ಪ್ರಕ್ರಿಯೆಯಾಗಿದೆ. ಪ್ರಾಣಿಗಳ ಜೀವಕೋಶಗಳನ್ನು ಸಂಗ್ರಹಿಸುವುದು ಈ ಪ್ರಕ್ರಿಯೆಯ ಮೊದಲ ಹಂತವಾಗಿದೆ. ಆಕ್ರಮಣಶೀಲವಲ್ಲದ ಬಯಾಪ್ಸಿ ವಿಧಾನದ ಮೂಲಕ ಇವುಗಳನ್ನು ಸಂಗ್ರಹಿಸಲಾಗುತ್ತದೆ.

ನಂತರ ಅದನ್ನು ಬೆಚ್ಚಗಿನ ಮತ್ತು ಸ್ವಚ್ಛವಾದ ಕಂಟೇನರ್​ಗಳಲ್ಲಿ ಹಾಕಲಾಗುತ್ತದೆ. ಈ ಪಾತ್ರೆಯು ಜೀವಕೋಶದ ಬೆಳವಣಿಗೆಗೆ ಅಗತ್ಯವಾದ ಲವಣಗಳು, ಪ್ರೋಟೀನ್​ಗಳು ಮತ್ತು ಕಾರ್ಬೋಹೈಡ್ರೇಟ್​ಗಳನ್ನು ಒಳಗೊಂಡಿರುವ ದ್ರಾವಣವನ್ನು ಹೊಂದಿರುತ್ತದೆ. ಇವುಗಳ ಸಹಾಯದಿಂದ ಜೀವಕೋಶಗಳು ವಿಭಜನೆಯಾಗುತ್ತವೆ. ಪ್ರತಿ 24 ಗಂಟೆಗಳಿಗೊಮ್ಮೆ ಜೀವಕೋಶಗಳು ದ್ವಿಗುಣಗೊಳ್ಳುತ್ತವೆ.

ಇದು ಥೇಟ್ ಮಾಂಸದಂತೆ ಇರುತ್ತದಾ?:ಜೀವಕೋಶಗಳಿಂದ ನೇರವಾಗಿ ಮಾಂಸದ ತುಂಡುಗಳಾಗಿ ಪ್ರಯೋಗಾಲಯದಲ್ಲಿ ಬೆಳೆಸಲು ಸಾಧ್ಯವಿಲ್ಲ. ಕೊಬ್ಬಿನ ಕೋಶಗಳನ್ನು ಬೆಳೆಸಲು ಸ್ನಾಯು ಕೋಶಗಳಿಗೆ ವಿಭಿನ್ನ ಪರಿಸ್ಥಿತಿಗಳು ಮತ್ತು ವಿಭಿನ್ನ ಪೋಷಕಾಂಶಗಳು ಬೇಕಾಗುತ್ತವೆ. ಆದ್ದರಿಂದ ಕೊಬ್ಬಿನ ಕೋಶಗಳನ್ನು ಪ್ರತ್ಯೇಕವಾಗಿ ಬೆಳೆಸಬೇಕಾಗುತ್ತದೆ. ಪ್ರಯೋಗಾಲಯದಲ್ಲಿ ಬೆಳೆದಾಗ ಮಾಂಸ ಅಥವಾ ಕೊಬ್ಬು ಯಾವುದೇ ರೂಪವನ್ನು ಹೊಂದಿರುವುದಿಲ್ಲ. ಇದು ಕೇವಲ ಮಾಂಸದ ಮುದ್ದೆಯಾಗಿರುತ್ತದೆ. ಅದಕ್ಕಾಗಿಯೇ ಮೊದಲ ಪ್ರಯೋಗಾಲಯದ ಮಾಂಸವನ್ನು ಬರ್ಗರ್ ಅಥವಾ ಚಿಕನ್ ನಗೆಟ್ಸ್​ ರೂಪದಲ್ಲಿ ತಿನ್ನಲು ನೀಡಲಾಗಿತ್ತು.

ಆದರೆ, ಇದರ ರುಚಿ ಮಾತ್ರ ಥೇಟ್ ಮಾಂಸದಂತೆಯೇ ಇತ್ತು. ಇದನ್ನು ಶುದ್ಧ ಪರಿಸರದಲ್ಲಿ ಬೆಳೆಯುವುದರಿಂದ ರೋಗ ಮತ್ತು ರಾಸಾಯನಿಕ ಮಾಲಿನ್ಯದ ಅಪಾಯ ಕಡಿಮೆಯಾಗಿರುತ್ತದೆ. ಸಾಂಪ್ರದಾಯಿಕ ಮಾಂಸಕ್ಕೆ ಹೋಲಿಸಿದರೆ ಇದು ಉತ್ತಮವಾಗಿದೆ. ಪ್ರಾಣಿಗಳನ್ನು ಕೊಂದು ಅವನ್ನು ನೆಲದ ಮೇಲೆ ಹಾಕಿದಾಗ ಸಾಲ್ಮೊನೆಲ್ಲಾ, ಇ.ಕೋಲಿ ಮತ್ತು ಪ್ರಾಣಿಗಳ ತ್ಯಾಜ್ಯದಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಿಂದ ಮಾಲಿನ್ಯದ ಅಪಾಯವಿರುತ್ತದೆ. ಈ ದೃಷ್ಟಿಕೋನದಿಂದ ನೋಡಿದಾಗ ಬೆಳೆಸಿದ ಮಾಂಸವು ಒಂದು ರೀತಿಯಲ್ಲಿ ಉತ್ತಮವೆನಿಸುತ್ತದೆ.

ಪೋಷಕಾಂಶಗಳು ಯಾವುವು?:ಬೆಳೆಸಿದ ಮಾಂಸದಲ್ಲಿನ ಪೋಷಕಾಂಶ ಮಟ್ಟವು ಪ್ರಾಣಿಗಳ ಮಾಂಸಕ್ಕೆ ಸಮನಾಗಿರುತ್ತದೆ. ಬಯಸಿದಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸಬಹುದು. ವ್ಯಕ್ತಿಯ ಆರೋಗ್ಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಬದಲಾಯಿಸಬಹುದು. ಆರೋಗ್ಯಕ್ಕೆ ಹಾನಿಕಾರಕವಾದ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಂಶಗಳನ್ನು ಬೇಕಾದರೆ ಕಡಿಮೆ ಮಾಡಬಹುದು.

ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಬಹುದು. ಉದಾಹರಣೆಗೆ - ನೀವು ಸಾಲ್ಮನ್‌ನಲ್ಲಿರುವ ಕೊಬ್ಬಿನಾಮ್ಲಗಳೊಂದಿಗೆ ಮಾಂಸವನ್ನು ತಯಾರಿಸುತ್ತೀರಿ ಎಂದು ಭಾವಿಸೋಣ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಲ್ಲದು. ಪ್ರಸ್ತುತ, ಕಲ್ಚರ್ಡ್ ಮಾಂಸ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಪೋಷಕಾಂಶಗಳ ಹೆಚ್ಚಿನ ವಿವರಗಳನ್ನು ನಮೂದಿಸಲಾಗಿಲ್ಲ. ಭವಿಷ್ಯದಲ್ಲಿ ಇವುಗಳು ವ್ಯಾಪಕವಾಗಿ ಲಭ್ಯವಾದಾಗ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದು.

ಇದನ್ನು ಓದಿ:ನೀವೂ ಮೊಟ್ಟೆ ತಿನ್ನುತ್ತೀರಾ? ಗುಣಮಟ್ಟದ ಮೊಟ್ಟೆಗಳಿಗೆ ಬಂದಿದೆ ಜಪಾನಿ ತಂತ್ರಜ್ಞಾನ!

ABOUT THE AUTHOR

...view details