ಮುಂಬೈ(ಮಹಾರಾಷ್ಟ್ರ):ಇಂದು ದೇಶಾದ್ಯಂತ ಗುರು ಪೌರ್ಣಿಮೆ ಆಚರಣೆ ಮಾಡಲಾಗ್ತಿದೆ. ಈ ಸಂದರ್ಭದಲ್ಲಿ ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಪಕ್ಷದ ಬಂಡಾಯ ಗುಂಪು ಗುರಿಯಾಗಿಸಿ ಮಾತನಾಡಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಾಳಾಸಾಹೇಬ್ ಠಾಕ್ರೆ ನಮ್ಮೆಲ್ಲರ ಗುರುಗಳು. ಶಿವಸೇನೆ ಅಥವಾ ಶಿವಸೈನಿಕರಿಗೆ ಮಾತ್ರವಲ್ಲ, ಶಿವಸೇನೆಯನ್ನ ಪ್ರೀತಿಸುವ ಮತ್ತು ಶಿವನಿಗೆ ನಿಷ್ಠರಾಗಿರುವ ಎಲ್ಲರಿಗೂ ಅವರು ಗುರು ಎಂದಿದ್ದಾರೆ.
ಬಾಳ್ಸಾಹೇಬ್ ಠಾಕ್ರೆ ಅವರು ದೇಶಕ್ಕೆ ದಿಕ್ಕು ತೋರಿಸಿದ್ದಾರೆ. ಇಂತಹ ಗುರುಗಳನ್ನ ಗುರು ಪೂರ್ಣಿಮೆಯ ದಿನ ಮಾತ್ರವಲ್ಲದೇ ಪ್ರತಿದಿನವೂ ಸ್ಮರಿಸಲಾಗುತ್ತದೆ. ಲಕ್ಷಾಂತರ ಜನರು ಅವರನ್ನ ಗುರುವೆಂದು ಪರಿಗಣಿಸಿ ಪೂಜಿಸುತ್ತಾರೆ. ಜೊತೆಗೆ ಅವರಿಗೆ ನಿಷ್ಠರಾಗಿರುತ್ತಾರೆ. ಇದು ನಿಜವಾದ ಗುರುದಕ್ಷಿಣೆ ಹಾಗೂ ಮನವಂದನೆ.
ಆದರೆ, ಕೆಲವರು ಪಕ್ಷಕ್ಕೆ ಮೋಸ ಮಾಡಿ, ಅವರ ಹೆಸರು ಪದೇ ಪದೇ ಬಳಕೆ ಮಾಡುತ್ತಿದ್ದಾರೆ. ಇದು ಅವರಿಗೆ ಮಾಡುತ್ತಿರುವ ದ್ರೋಹ ಎಂದು ಟೀಕೆ ವ್ಯಕ್ತಪಡಿಸಿದರು. ರಾಜಕೀಯವಾಗಿ ಶಿವಸೇನೆಗೆ ಮಹತ್ವದ ಸ್ಥಾನವಿದೆ.