ಕರ್ನಾಟಕ

karnataka

ETV Bharat / bharat

ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​: ಸ್ಪೀಕರ್ ಎಚ್ಚರಿಕೆ ಹೀಗಿತ್ತು!

ಖ್ಯಾತ ಉದ್ಯಮಿ ಗೌತಮ್​ ಅದಾನಿ ಬಗ್ಗೆ ಸಂಸತ್ತಿನಲ್ಲಿ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಪ್ರಸ್ತಾಪಿಸಿ, ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದರು. ಇದೇ ವೇಳೆ ಪೋಸ್ಟರ್​ ಪ್ರದರ್ಶನಕ್ಕೆ ಮುಂದಾದ ರಾಹುಲ್​ಗೆ ಸ್ಪೀಕರ್ ಎಚ್ಚರಿಕೆ ನೀಡಿದರು.

ಇದು ಮೋದಿ - ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​
ಇದು ಮೋದಿ - ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​

By

Published : Feb 7, 2023, 10:39 PM IST

ಇದು ಮೋದಿ - ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​

ನವದೆಹಲಿ: ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್​ ವರದಿ ನಂತರ ಭಾರತದ ಖ್ಯಾತ ಉದ್ಯಮಿ ಗೌತಮ್​ ಅದಾನಿ ಸಮೂಹದ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಇದೇ ವಿಷಯವಾಗಿ ಜಗತ್ತಿನಾದ್ಯಂತ ಅದಾನಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಲೋಕಸಭೆಯಲ್ಲಿ ಅದಾನಿ ಬಗ್ಗೆ ಪ್ರಸ್ತಾಪಿಸಿ, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ಅದಾನಿಯ ವ್ಯಾಪಾರ ಮತ್ತು ವೈಯಕ್ತಿಕ ಸಂಪತ್ತಿನ ಭಾರಿ ಏರಿಕೆಗೆ ಮೋದಿ ಸರ್ಕಾರವನ್ನು ರಾಹುಲ್​ ಗಾಂಧಿ ತಳುಕು ಹಾಕಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ 2014ರಿಂದ 2022ರವರೆಗೆ ಅದಾನಿ ವ್ಯಾಪಾರ ವಾಹಿವಾಟು 8 ಶತಕೋಟಿಯಿಂದ 140 ಶತಕೋಟಿಗೆ ಏರಿದೆ. 2014ರಲ್ಲಿ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ 609ನೇ ಸ್ಥಾನದಲ್ಲಿದ್ದರು. ಈಗ ಎಂಟು ವರ್ಷಗಳ ಅವಧಿಯಲ್ಲಿ ಅವರು ಎರಡನೇ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದ್ದಾರೆ. ರಕ್ಷಣಾ ವಲಯ, ವಿದ್ಯುತ್‌, ವಿಮಾನ ನಿಲ್ದಾಣ, ಹಡಗುಗಳ ನಿರ್ವಹಣೆಯವರೆಗೆ ಅದಾನಿ ಯಾವಾಗಲೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೃಪೆಗೆ ಪಾತ್ರರಾಗಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪಿಸಿದರು.

ಇದನ್ನೂ ಓದಿ:'ಜನರಿಗೆ ಬಜೆಟ್‌ ಅಂಶಗಳನ್ನು ತಲುಪಿಸಿ': ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ

ವಿಮಾನ ನಿಲ್ದಾಣಗಳ ಅಭಿವೃದ್ಧಿ ಪಡಿಸುವ ವಿಚಾರ ಬಂದಾಗ ಸರ್ಕಾರವು, ಯಾವುದೇ ಅನುಭವವಿಲ್ಲದ ಕಂಪನಿಗಳಿಗೆ ವಿಮಾನ ನಿಲ್ದಾಣಗಳ ಅಭಿವೃದ್ಧಿಪಡಿಸಲು ಅನುಮತಿ ನೀಡುವುದಿಲ್ಲ ಎಂದು ತನ್ನದೇ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ನಿಯಮವನ್ನು ಬದಲಾಯಿಸಿ, ಅದಾನಿಗೆ ಆರು ವಿಮಾನ ನಿಲ್ದಾಣಗಳ ನೀಡಿದ್ದಾರೆ ಎಂದು ದೂರಿದರು.

ಅಷ್ಟೇ ಅಲ್ಲ, ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವಾದ ಮುಂಬೈ ವಿಮಾನ ನಿಲ್ದಾಣವನ್ನು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜಿವಿಕೆ ಸಂಸ್ಥೆಯಿಂದ ಹೈಜಾಕ್ ಮಾಡಿ ಅದಾನಿಗೆ ಹಸ್ತಾಂತರಿಸಲಾಯಿತು. ಈ ವಿಮಾನ ನಿಲ್ದಾಣದಿಂದ ಶೇ.24ರಷ್ಟು ವಿಮಾನ ಸಂಚಾರ ಮತ್ತು ಶೇ.31ರಷ್ಟು ಏರ್ ಫ್ರೀಟ್ ಬರುತ್ತದೆ. ಜೊತೆಗೆ ರಕ್ಷಣಾ ವಲಯದಲ್ಲೂ ಯಾವುದೇ ಅನುಭವವಿಲ್ಲದ ಅದಾನಿ ನಾಲ್ಕು ಪ್ರಮುಖ ರಕ್ಷಣಾ ಘಟಕಗಳನ್ನು ಪಡೆಯುವ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ. ಅಲ್ಲದೇ, ಪ್ರಧಾನಿ ಇಸ್ರೇಲ್‌ಗೆ ಹೋಗಾದ ಅದಾನಿ ಭಾರತೀಯ ಸೇನೆಗೆ ಡ್ರೋನ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದಿದ್ದಾರೆ' ಎಂದು ಹೇಳಿದರು.

ಮೋದಿ-ಅದಾನಿ ಫೋಟೋ ಪ್ರದರ್ಶನ: ಇದೇ ವೇಳೆ ರಾಹುಲ್​ ಗಾಂಧಿ ತನ್ನ ಭಾಷಣ ವೇಳೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಅದಾನಿಯೊಂದಿಗೆ ಸಂಬಂಧ ಹೊಂದಿದ್ದು, ಇದರ ಲಾಭವನ್ನೂ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಮೋದಿ ಮತ್ತು ಅದಾನಿ ಅವರ ಸಂಬಂಧವಿದು ಎಂದು ರಾಹುಲ್​, ಮೋದಿ ಮತ್ತು ಅದಾನಿ ಒಟ್ಟಿಗೆ ಇರುವ ಫೋಟೋ ಪ್ರದರ್ಶನ ಮಾಡಿದರು. ಆಗ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಅಲ್ಲದೇ, ಈ ಹಿಂದೆ ಮೋದಿ ತಮ್ಮ ಪ್ರಯಾಣಕ್ಕೆ ಅದಾನಿ ಏರ್​ಕ್ರಾಫ್ಟ್​ನಲ್ಲಿ ಬಳಕೆ ಮಾಡುತ್ತಿದ್ದರು. ಈಗ ಅದಾನಿ ವಿಮಾನದಲ್ಲಿ ಮೋದಿ ಪ್ರಯಾಣಿಸುತ್ತಿದ್ದಾರೆ. ಆಗ ಗುಜರಾತ್​ಗೆ ಸಮೀತವಾಗಿದ್ದ ಇದು ನಂತರ ದೇಶಕ್ಕೆ ವಿಸ್ತರಿಸಿತ್ತು. ಈಗ ಇದು ಅಂತಾರಾಷ್ಟ್ರೀಯ ವಿಷಯವಾಗಿದೆ. ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ಎಷ್ಟು ಹಣವನ್ನು ನೀಡಿದ್ದಾರೆ ಎಂದು ರಾಹುಲ್​ ಪ್ರಶ್ನಿಸಿದರು. ಮತ್ತೊಂದೆಡೆ, ಸ್ಪೀಕರ್​ ಓಂ ಬಿರ್ಲಾ ರಾಹುಲ್​ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, 'ಸದನದಲ್ಲಿ ಪೋಸ್ಟರ್​ಗಳನ್ನು ತೋರಿಸಬೇಡಿ' ಎಂದು ತಾಕೀತು ಮಾಡಿದರು. ಆದರೆ, ರಾಹುಲ್​, 'ಇದು ಪೋಸ್ಟರ್​ ಅಲ್ಲ, ಫೋಟೋ. ಇದು ಪ್ರಧಾನಿ ಅವರ ಫೋಟೋ ಸರ್​ ಎಂದು ಹೇಳಿದರು.

ಮುಂದುವರೆಗೆ ಸ್ಪೀಕರ್ ಓಂ ಬಿರ್ಲಾ ಅವರು ಪೋಸ್ಟರ್ ಪ್ರದರ್ಶನಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಇದು ಸದನದ ನಿಯಮಗಳಿಗೆ ವಿರುದ್ಧವಾಗಿದೆ. ನೀವು ಹಿರಿಯ ನಾಯಕರಾಗಿ ಈಗ ಪೋಸ್ಟರ್‌ಗಳನ್ನು ಎತ್ತಿ ತೋರಿದರೆ, ಇನ್ನೊಂದು ಕಡೆಯವರು ರಾಜಸ್ಥಾನದ ಮುಖ್ಯಮಂತ್ರಿ ಜೊತೆಗಿನ ಪೋಸ್ಟರ್‌ಗಳನ್ನು ಪ್ರದರ್ಶಿಸಬಹುದು. ಪೋಸ್ಟರ್​ ಬಾಜಿಕ್ಕಾಗಿ ಈ ಸದನವಿಲ್ಲ ಎಂದು ರಾಹುಲ್​ಗೆ ಸ್ಪೀಕರ್ ಎಚ್ಚರಿಸಿದರು.

ಇದನ್ನೂ ಓದಿ:ಚೀನಾ ಸೇನೆಯ ಆಕ್ರಮಣ ಯತ್ನಗಳಿಗೆ ತಕ್ಕ ಪ್ರತ್ಯುತ್ತರ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ABOUT THE AUTHOR

...view details