ಮುಂಬೈ:ತೌಕ್ತೆ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿರುವ ಬಾರ್ಜ್ ಪಿ -305 ನಲ್ಲಿದ್ದ 200 ಕ್ಕೂ ಹೆಚ್ಚು ಮಂದಿ ಪ್ರಾಣಕ್ಕೆ ಕುತ್ತು ಬಂದಿತ್ತು. ಇದಕ್ಕೆ ಕಾರಣ ಏನೆಂದು ಬಾರ್ಜ್‌ನಲ್ಲಿ ಕೆಲಸ ಮಾಡುವ ನೌಕರರು ತಿಳಿಸಿದ್ದಾರೆ.
ಬಾರ್ಜ್ ಪಿ -305 ದುರಂತಕ್ಕೆ ಕಾರಣ ಏನೂ ಗೊತ್ತಾ ಈ ಬಗ್ಗೆ ಬಾರ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಅವದ್ ಮತ್ತು ವಿಶಾಲ್ ಕೇದಾರ್ ಎಂಬುವವರು ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಚಂಡಮಾರುತದಿಂದ ಮುಂಬೈನ ದಿಕ್ಕಿನಲ್ಲಿ ಹಿಂತಿರುಗಲು ಆದೇಶ ಬಂದಿತ್ತು. ಆದರೆ, ಕ್ಯಾಪ್ಟನ್ ಗಂಭೀರವಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ 270 ಜನರ ಪ್ರಾಣಕ್ಕೆ ಅಪಾಯವಾಗಿದೆ. 60-70 ಜನರು ಕಾಣೆಯಾಗಿದ್ದಾರೆ ಎಂಬ ಮಾಹಿತಿಯನ್ನ ಬಹಿರಂಗ ಮಾಡಿದ್ದಾರೆ.
ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬಾರ್ಜ್ ಪಿ 305 ನೌಕೆ ದುರಂತಕ್ಕೀಡಾಗಿತ್ತು. ಸಂಕಷ್ಟಕ್ಕೆ ಸಿಲುಕಿದ ಒಂದು ದಿನದ ಬಳಿಕ ನೌಕಾ ಪಡೆ ಇದರ ರಕ್ಷಣೆ ಧಾವಿಸಿತ್ತು. ಸದ್ಯ ದುರಂತದಲ್ಲಿ 188 ಮಂದಿಯನ್ನು ರಕ್ಷಿಸಲಾಗಿದ್ದು, 49 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಸಹ ಮುಂದುವರೆದಿದೆ.
ಓದಿ:ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಿಸುವ ಅಗತ್ಯವಿದೆ: ಹೈಕೋರ್ಟ್