ಕರ್ನಾಟಕ

karnataka

ETV Bharat / bharat

2021ರಲ್ಲಿ ಅತಿ ಹೆಚ್ಚು ಬಳಸಿದ ಎಮೋಜಿ ಯಾವುದು ಗೊತ್ತಾ?

ಯೂನಿಕೋಡ್ ಕನ್ಸೋರ್ಟಿಯಮ್​ ಎಂಬ ಸಂಸ್ಥೆಯು 2021ರ ಅತ್ಯಂತ ಜನಪ್ರಿಯ ಎಮೋಜಿಗಳ ಕುರಿತಾದ ಡೇಟಾವನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, 2021 ರಲ್ಲಿ ಸಾಮಾನ್ಯವಾಗಿ ಸಂತೋಷದ ಕಣ್ಣೀರಿನ ಮುಖ ಹೊಂದಿರುವ ಎಮೋಜಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದು, ಅತಿ ಹೆಚ್ಚು ಬಳಸಿದ ಎಮೋಜಿ ಎಂದು ಹೇಳಿದೆ.

ಎಮೋಜಿ
ಎಮೋಜಿ

By

Published : Dec 8, 2021, 11:34 AM IST

ನವದೆಹಲಿ: ಡಿಜಿಟಲ್‌ ಯುಗದಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಅನೇಕ ಆಯ್ಕೆಗಳಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಹಾಗೂ ಮೆಸೆಂಜರ್, ವಾಟ್ಸಾಪ್‌​ ಸೇರಿದಂತೆ ಇತರೆ ಅಪ್ಲಿಕೇಶನ್‌ನಲ್ಲಿ ಎಮೋಜಿಗಳ ಪಾತ್ರ ದೊಡ್ಡದಾಗಿದೆ.

ಇದೀಗ ಯೂನಿಕೋಡ್ ಕನ್ಸೋರ್ಟಿಯಮ್​ ಎಂಬ ಸಂಸ್ಥೆಯೊಂದು 2021ರ ಅತ್ಯಂತ ಜನಪ್ರಿಯ ಎಮೋಜಿಗಳ ಕುರಿತಾದ ದತ್ತಾಂಶ ಬಿಡುಗಡೆ ಮಾಡಿದೆ.

ಸಂತೋಷದ ಕಣ್ಣೀರಿನ ಎಮೋಜಿಗೆ ಮೊದಲ ಸ್ಥಾನ

ಯೂನಿಕೋಡ್ ಕನ್ಸೋರ್ಟಿಯಮ್​ ಎಂಬ ಸಂಸ್ಥೆಯು ಇಂಟರ್ನ್ಯಾಷನಲ್ ಬೈ ಡೈರೆಕ್ಷನ್ ಅಲ್ಗಾರಿದಮ್ ಫಾರ್ ಲ್ಯಾಂಗ್ವೇಜ್ (BEL) ಕೋಡಿಂಗ್ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ನಿಭಾಯಿಸುತ್ತಿದೆ. ಈ ಸಂಸ್ಥೆ ಇದೀಗ 2021 ರ ಅತ್ಯಂತ ಜನಪ್ರಿಯ ಎಮೋಜಿಗಳ ಕುರಿತು ಡೇಟಾವನ್ನು ಬಿಡುಗಡೆ ಮಾಡಿದ್ದು, ವರದಿಯ ಪ್ರಕಾರ, 2021 ರಲ್ಲಿ ಸಾಮಾನ್ಯವಾಗಿ ಸಂತೋಷದ ಕಣ್ಣೀರಿನ ಮುಖ ಹೊಂದಿರುವ ಎಮೋಜಿ ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದೆ.

ಹೃದಯದ ಎಮೋಜಿಗೆ ಎರಡನೇ ಸ್ಥಾನ

Face with tears of joy emoji: ಸಂದೇಶಗಳಿಗಿಂತ ಎಮೋಜಿಗಳಲ್ಲಿ ಅತೀ ವೇಗವಾಗಿ ಭಾವನೆಗಳನ್ನು ವ್ಯಕ್ತಪಡಿಸಬಹುದು. ಒಂದರಿಂದ ಹತ್ತರವರೆಗಿನ ಶ್ರೇಯಾಂಕದಲ್ಲಿ 'ಸಂತೋಷದ ಕಣ್ಣೀರಿನ ಮುಖ'ದ ಎಮೋಜಿ ಮೊದಲನೇ ಸ್ಥಾನದಲ್ಲಿದ್ದರೆ, 'ಹೃದಯದ ಎಮೋಜಿ' ಎರಡನೇ ಸ್ಥಾನದಲ್ಲಿದೆ. ನೆಲದ ಮೇಲೆ ನಗುತ್ತಾ ಉರುಳುತ್ತಿರುವುದು, ಹೆಬ್ಬೆರಳುಗಳು, ಜೋರಾಗಿ ಅಳುವ ಮುಖ, ನಮಸ್ತೆ, ಮುತ್ತು ನೀಡುತ್ತಿರುವ ಸಂತೋಷದ ಮುಖ, ಹೃದಯದಿಂದ ನಗುತ್ತಿರುವ ಮುಖ, ನಗುತ್ತಿರುವ ಮುಖದ ಜೊತೆಗೆ ಹೃದಯ ಕಣ್ಣುಗಳು ಮತ್ತು ನಗುತ್ತಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ ಹೊಂದಿರುವ ಎಮೋಜಿಗಳು ಟಾಪ್‌ 10 ಸ್ಥಾನ ಪಡೆದುಕೊಂಡಿವೆ.

'ಪ್ರಾಣಿಗಳು ಮತ್ತು ಪ್ರಕೃತಿ' ವಿಭಾಗದ ಎಮೋಜಿಗಳು ಸಹ ಪ್ರಾಬಲ್ಯ ಹೊಂದಿವೆ. ಸಸ್ಯ ಮತ್ತು ಹೂವಿನ ವರ್ಗದಲ್ಲಿ 'ಪುಷ್ಪಗುಚ್ಛ' ವನ್ನು ಹೆಚ್ಚಾಗಿ ಬಳಸಲಾಗಿದೆ. ಮತ್ತು ಪ್ರಾಣಿಗಳ ಎಮೋಜಿಗಳಲ್ಲಿ 'ಚಿಟ್ಟೆ' ಎಮೋಜಿಯನ್ನು ಹೆಚ್ಚು ಬಳಸಲಾಗಿದೆ. ಬಳಕೆದಾರರು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಈ ಎಮೋಜಿಗಳನ್ನು ಬಳಸಿದ್ದಾರೆ. ಬರ್ತ್‌ಡೇ ಕೇಕ್, ಬಲೂನ್ ಎಮೋಜಿಗಳನ್ನು ಸಹ ಹೆಚ್ಚು ಬಳಕೆ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಬಳಕೆದಾರರು ಚಾಟ್ ಮಾಡುವಾಗ ಅಥವಾ ಸಂದೇಶ ಕಳುಹಿಸುವಾಗ ಎಮೋಜಿಯನ್ನು ಬಳಸುವುದರಿಂದ ತಮ್ಮ ಭಾವನೆಗಳನ್ನು ನಿಖರವಾಗಿ ತೋರಿಸಲಿವೆ ಅನ್ನೊದು ಎಲ್ಲರ ನಂಬಿಕೆ. ಇದೇ ಕಾರಣಕ್ಕೆ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಮ್ಮದೇ ಆದ ವಿವಿಧ ಅಭಿವ್ಯಕ್ತಿಗಳನ್ನು ಚಿತ್ರಿಸುವ ಹಲವಾರು ಎಮೋಜಿಗಳನ್ನು ಒದಗಿಸುತ್ತವೆ.

ABOUT THE AUTHOR

...view details