ಕರ್ನಾಟಕ

karnataka

ETV Bharat / bharat

ಅಂಧಕಾರ ಹೋಗಲಾಡಿಸುವ ಹಣತೆ ಮಾಡುವುದೇ ಇವರ ಕಾಯಕ: ಕಣ್ಣಿಲ್ಲದಿದ್ದರೂ ಬತ್ತದ ಉತ್ಸಾಹ! - ಮಿರ್ಜಾಪುರ

ಉತ್ತರ ಪ್ರದೇಶದ ಮಿರ್ಜಾಪುರದ ಅಹರೋರಾ ಪಟ್ಟಣದ ಬಸಂತು ಕೊಹಾರ್ ಅಕಾ ಸುರ್ದಾಸ್ ಎಂಬ 73 ವರ್ಷದ ವಿಶೇಷ ವ್ಯಕ್ತಿ ಕಣ್ಣು ಕಾಣದೆ ಇದ್ದರು ಹಣತೆ ತಯಾರಿಸಿ ಜೀವನ ನಡೆಸುತ್ತಿದ್ದಾರೆ.

this-blind-potter-of-uttar-pradesh-light-ups-homes-despite-odds
ಅಂಧಕಾರ ಹೋಗಲಾಡಿಸುವ ಹಣತೆ ಮಾಡುವುದೇ ಇವರ ಕಾಯಕ

By

Published : Nov 14, 2020, 4:17 AM IST

ಮಿರ್ಜಾಪುರ: ಕಣ್ಣಿದ್ದೇ ನಾವು ಕೆಲಸ ಮಾಡಲು ಸೋಂಬೇರಿತನ ತೋರಿಸುತ್ತೇವೆ.ಆದರೆ, ಇಲ್ಲೋರ್ವ ವ್ಯಕ್ತಿ ವಯಸ್ಸಾಗಿದ್ದರೂ ಕೂಡ ಅದರಲ್ಲೂ ಕಣ್ಣು ಕಾಣಿಸದಿದ್ದರೂ ಹಣತೆಗಳನ್ನು ತಯಾರಿಸುತ್ತಾರೆ.

ಹೌದು, ಉತ್ತರ ಪ್ರದೇಶದ ಮಿರ್ಜಾಪುರದ ಅಹರೋರಾ ಪಟ್ಟಣದ ಬಸಂತು ಕೊಹಾರ್ ಅಕಾ ಸುರ್ದಾಸ್ ಎಂಬ 73 ವರ್ಷದ ವಿಶೇಷ ವ್ಯಕ್ತಿ ನಿಜವಾಗಿಯೂ ವಿಶಿಷ್ಟ ವ್ಯಕ್ತಿಯೇ ಹೌದು. ಸಂಪೂರ್ಣವಾಗಿ ಕುರುಡನಾಗಿದ್ದರೂ ತುಂಬಾ ಸುಂದರವಾಗಿ ಇವರು ಹಣತೆಗಳನ್ನು ತಯಾರಿಸುತ್ತಾರೆ. ಕಳೆದ 50 ವರ್ಷಗಳಿಂದ ಇವರು ಈ ಕಾಯಕ ಮಾಡಿಕೊಂಡು ಬರುತ್ತಿದ್ದಾರಂತೆ.

ಅಂಧಕಾರ ಹೋಗಲಾಡಿಸುವ ಹಣತೆ ಮಾಡುವುದೇ ಇವರ ಕಾಯಕ

ಈಟಿವಿ ಭಾರತ ಜೊತೆ ಮಾತನಾಡಿದ ಅವರು, ನಾನು ಬಾಲ್ಯದಲ್ಲಿ ನನ್ನ ಅಜ್ಜನಿಗೆ ಇದೇ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. ನಾನು ಕುರುಡನಾಗಿದ್ದರಿಂದ ಕೆಲಸವನ್ನು ನಿರ್ವಹಿಸುವುದು ಆರಂಭದಲ್ಲಿ ಕಷ್ಟಕರವಾಗಿತ್ತು. ಆದರೆ, ಈಗ ನಾನು ಎಲ್ಲವನ್ನೂ ಕಲಿತಿದ್ದೇನೆ ಎಂದು ಹೇಳಿದ್ದಾರೆ. ನಾನು ಬಣ್ಣಗಳನ್ನು ನೋಡಲು ಸಾಧ್ಯವಿಲ್ಲ.ಆದರೆ, ದೀಪಾವಳಿ ಬಂದರೆ ನನಗೆ ತುಂಬಾ ಸಂತಸದ ಸಂಗತಿ. ಕಾರಣ, ನಾನು ಮಣ್ಣಿನ ಆಟಿಕೆಗಳು ಮತ್ತು ಹಣತೆಗಳನ್ನು ಮಾರಾಟ ಮಾಡುವ ಮೂಲಕ ನಾಲ್ಕರಿಂದ ಐದು ಸಾವಿರ ರೂಪಾಯಿಗಳನ್ನು ಗಳಿಸುತ್ತೇನೆ ಎನ್ನುತ್ತಾರೆ ಸುರ್ದಾಸ್​.

ABOUT THE AUTHOR

...view details