ಕರ್ನೂಲು(ಆಂಧ್ರಪ್ರದೇಶ): ಜಿಲ್ಲೆಯ ಶ್ರೀಶೈಲ ಮಹಾಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ತಿಕ ಮಾಸದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಚ್ಚರಿ ಸಂಗತಿಯೆಂದ್ರೆ ಈ ಕಾರ್ತಿಕ ಮಾಸದಲ್ಲಿ ದೇವಾಲಯದಲ್ಲಿ 30 ಕೋಟಿಗೂ ಅಧಿಕ ಆದಾಯ ಬಂದಿದೆ.
ಶ್ರೀಶೈಲ ದೇವಸ್ಥಾನಕ್ಕೆ ರೂ.30,89,27,503 ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ 11.02 ಕೋಟಿ ರೂ.ಗಳ ಆದಾಯ ಹೆಚ್ಚಿಗೆ ಬಂದಿದೆ ಎಂದು ದೇವಸ್ಥಾನದ ಇಒ ಎಸ್ ಲವಣ್ಣ ತಿಳಿಸಿದ್ದಾರೆ.