ಹೈದರಾಬಾದ್ (ತೆಲಂಗಾಣ): ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ ಇನ್ನೋವಾ ಕಾರನ್ನೇ ಕಳ್ಳರು ಕದ್ದಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಸೂರ್ಯಪೇಟ್ನ ಹೊಸ ಬಸ್ ನಿಲ್ದಾಣ ಸಮೀಪದ ಟಿಎಸ್ 09 ಪಿಎ 0658 ಸಂಖ್ಯೆಯ ಇನ್ನೋವಾ ಕಾರನ್ನು ಪೊಲೀಸರು ನಿಲ್ಲಿಸಿದ್ದರು. ಆಗ ಯಾರೋ ಕಾರನ್ನು ಕಳ್ಳತನ ಮಾಡಿದ್ದಾರೆ. ಆಗ ತಕ್ಷಣವೇ ಎಚ್ಚರಗೊಂಡ ಪೊಲೀಸರು ಕಾರಿಗಾಗಿ ಹುಡುಕಾಟ ನಡೆಸಿದಾಗ ಕೊನೆಗೆ ಕೊಡಾಬಾ ಎಂಬಲ್ಲಿ ಕಾರು ಪತ್ತೆಯಾಗಿದೆ.