ನವದೆಹಲಿ: ದೆಹಲಿಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದ್ದು, ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯವೀಗ ಎಲ್ಲೆಡೆ ವೈರಲ್ ಆಗಿದೆ. ಮೇ.31ರ ನಡುರಾತ್ರಿ ಖಜುರಿ ಖಾಸ್ ಏರಿಯಾದ ಸುರೇಂದರ್ ಸಿಂಗ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನದ ಸರ, ಉಂಗುರ, ಮೊಬೈಲ್ ಎಗರಿಸಿ ಕಳ್ಳ ಪರಾರಿಯಾಗಿದ್ದಾನೆ.
2 ಗಂಟೆ 17 ನಿಮಿಷದ ಹೊತ್ತಿಗೆ ಮನೆಯ ಗೇಟ್ ಮೂಲಕ ಕಳ್ಳ ಎಸ್ಕೇಪ್ ಆಗಿದ್ದನ್ನು ನೋಡಿದೆ ಎಂದು ಮನೆ ಮಾಲೀಕ ಸುರೇಂದರ್ ಸಿಂಗ್ ತಿಳಿಸಿದ್ದಾರೆ. ವಿದ್ಯುತ್ ವೈಯರ್ ಹಿಡಿದು 'ಸ್ಪೈಡರ್ ಮ್ಯಾನ್' ಶೈಲಿಯಲ್ಲಿ ಗೋಡೆ ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.