ಭಿಂಡ್(ಮಧ್ಯಪ್ರದೇಶ):ವ್ಯಕ್ತಿವೋರ್ವ ಪೊಲೀಸ್ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಪ್ರಕರಣ ನಗರದಲ್ಲಿ ನಡೆದಿದೆ. ನಗರದ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಕಮಲೇಶ್ ಕಠಾರಿ ಮನೆಯಲ್ಲಿ ಕಳ್ಳತನವಾಗಿದ್ದು, ಆ ಜಾಗದಲ್ಲಿ ಪತ್ರವೊಂದು ದೊರೆತಿದೆ. ಕದ್ದ ಹಣವನ್ನು ಆದಷ್ಟು ಬೇಗ ವಾಪಸ್ ನೀಡುವುದಾಗಿ ಅಧಿಕಾರಿಗೆ ಕಳ್ಳ ಭರವಸೆ ನೀಡಿದ್ದಾನೆ.
ಪೊಲೀಸ್ ಅಧಿಕಾರಿ ಕಮಲೇಶ್ ಕಠಾರಿ ಕಳೆದ ಬುಧವಾರದಂದು ತಮ್ಮ ಹೆಂಡ್ತಿ, ಮಕ್ಕಳನೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಸೋಮವಾರ ರಾತ್ರಿ ತಮ್ಮ ಮನೆಗೆ ಹಿಂದುರಿಗಿದ್ದಾರೆ. ಈ ವೇಳೆ ಬಾಗಿಲು ತೆಗೆದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಠಾರಿ ಮನೆಯ ಬಾಗಿಲು ತೆಗೆದು ನೋಡಿದಾಗ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಪಕ್ಕದಲ್ಲೇ ಪತ್ರವೊಂದು ದೊರೆತಿದೆ. ಪತ್ರ ಓದಿದಾಗ.. ‘ಸಾರಿ ಫ್ರೆಂಡ್.. ನನ್ನನ್ನು ಕ್ಷಮಿಸು. ಇದೆಲ್ಲ ಪರಿಸ್ಥಿತಿ ಕಾರಣದಿಂದ ಮಾಡಲಾಯಿತು. ನನ್ನ ಸ್ನೇಹಿತನ ಪ್ರಾಣವನ್ನು ಕಾಪಾಡುವ ಸಲುವಾಗಿ ನಾನು ಈ ಕಳ್ಳತನ ಮಾಡಬೇಕಾಯಿತು. ಮತ್ತೆ ನನಗೆ ಹಣ ಬಂದಾಕ್ಷಣ ನಿನ್ನ ಬಳಿ ಕಳ್ಳತನ ಮಾಡಿದ್ದನ್ನು ವಾಪಸ್ ನೀಡುತ್ತೇನೆ’ ಎಂದು ಬರೆದಿದ್ದಾನೆ. ಈ ಪತ್ರ ನೋಡಿದ ಕಠಾರಿಗೆ ಅಚ್ಚರಿಯಾಗಿದೆ.
ಈ ಕಳ್ಳತನ ಪ್ರಕರಣ ಭಿಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಕಠಾರಿಯ ಸಮೀಪ ಬಂಧುಗಳೇ ಕಳ್ಳತನ ಮಾಡಿರಬಹುದೆಂದು ಅನುಮಾನಿಸುತ್ತಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಮನೆಯ ಹೊರಭಾಗವನ್ನು ಲಾಕ್ ಮಾಡಲಾಗಿದೆ. ಆದರೆ ಕೋಣೆಯ ಬೀಗ ಮುರಿದುಹೋಗಿದೆ, ಮತ್ತು ಅವಳ ಸೂಟ್‌ಕೇಸ್‌ನಿಂದ ಎರಡು ಚಿನ್ನದ ಉಂಗುರಗಳು, ಒಂದು ಬಿಸಾರ್, ಬಂದಾನ, ಕಿವಿಯೋಲೆ, ಮತ್ತು 3 ಜೋಡಿ ಬೆಳ್ಳಿ ಕಣಕಾಲುಗಳು, ಕವಚ, 3 ಈ ಜೋಡಿ ಗಿಡ, ಮತ್ತು ಮಕ್ಕಳ ದಾರವನ್ನು ಕಳವು ಮಾಡಲಾಗಿದೆ. ಸಂತ್ರಸ್ತೆ ಕೂಡಲೇ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಎಫ್‌ಐಆರ್ ದಾಖಲಿಸಿದ್ದಾರೆ.