ಕರ್ನಾಟಕ

karnataka

ETV Bharat / bharat

ಹೀಗೆ ಎಸ್ಕೇಪ್ ಆಗ್ಬಿಟ್ಟೆ..ಜೈಲು ಕಂಬಿಗಳ ಮಧ್ಯೆ ನುಸುಳಿ ತಪ್ಪಿಸಿಕೊಂಡ ಕಳ್ಳ- ವಿಡಿಯೋ - ಜೈಲಿನಿಂದ ತಪ್ಪಿಸಿಕೊಂಡ ಕಳ್ಳ

ಕಳ್ಳತನ ಮಾಡಿ ಜೈಲು ಸೇರಿಕೊಂಡಿದ್ದ ಖದೀಮನೊಬ್ಬ ಯಾವ ಸಲಕರಣೆಗಳನ್ನೂ ಬಳಸದೇ ಜೈಲಿನಿಂದ ಸರಾಗವಾಗಿ ತಪ್ಪಿಸಿಕೊಂಡು ಬಂದು ಪೊಲೀಸರ ನಿದ್ದೆಗೆಡಿಸಿದ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.

thief-escaped
ಖತರ್ನಾಕ್​ ಖದೀಮ

By

Published : Mar 22, 2022, 10:30 PM IST

ಪುಣೆ(ಮಹಾರಾಷ್ಟ್ರ): ಜೈಲಿನಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ಖೈದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡುತ್ತಾರೆ ಗೊತ್ತೇ?. ಇಲ್ಲೊಬ್ಬ ಖೈದಿ ಜೈಲಿನ ಸರಳುಗಳಿಂದ ಅತಿ ಸುಲಭವಾಗಿ ತಪ್ಪಿಸಿಕೊಂಡು ಬಂದಿದ್ದಾನೆ. ಇದನ್ನು ಕಂಡ ಪೊಲೀಸರೇ ಅರೆಕ್ಷಣ ದಂಗಾಗಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ಪುಣೆ ಜೈಲಿನಲ್ಲಿ ನಡೆದಿದೆ. ಕಳ್ಳತನದ ಆರೋಪದ ಮೇಲೆ ಜೈಲು ಕಂಬಿ ಎಣಿಸುತ್ತಿದ್ದ ಖದೀಮನೊಬ್ಬ ಯಾವ ಸಲಕರಣೆಗಳನ್ನೂ ಬಳಸದೇ ಜೈಲು ಕಂಬಿಯೊಳಗಿಂದ ನುಸುಳಿ ಪರಾರಿಯಾಗಿದ್ದಾನೆ. ಬಳಿಕ ಮತ್ತೆ ಅವನನ್ನು ಹಿಡಿದ ಪೊಲೀಸರಿಗೆ ಮಾತ್ರ ಕಳ್ಳ ಹೇಗೆ ತಪ್ಪಿಸಿಕೊಂಡ ಎಂಬುದೇ ಯಕ್ಷ ಪ್ರಶ್ನೆಯಾಗಿತ್ತು.

ಇದನ್ನು ತಿಳಿಯಲು ಪೊಲೀಸರು ಮತ್ತೆ ಆ ಕಳ್ಳನನ್ನು ಅದೇ ಜೈಲು ಕೋಣೆಗೆ ಹಾಕಿ ತಪ್ಪಿಸಿಕೊಂಡ ಬಗ್ಗೆ ತೋರಿಸಲು ಪೊಲೀಸರು ಕೇಳಿದಾಗ ಆ ಕಳ್ಳ, ಜೈಲಿನ ಕಂಬಿಗಳ ಮಧ್ಯೆ ಸರಳವಾಗಿ ತೂರಿ ಬಂದಿದ್ದಾನೆ. ಇದನ್ನು ಪೊಲೀಸರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್​ ಆಗಿದೆ.

ಇಷ್ಟಾದ ಬಳಿಕ ಪೊಲೀಸರಿಗೆ ಜೈಲಿನ ಭದ್ರತೆಯ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿದೆ. ಕಳ್ಳರು ಗೋಡೆ ಕೊರೆದು, ಗುಂಡಿ ತೋಡಿಯೋ ಪರಾರಿಯಾಗಿದ್ದು ನೋಡಿದ ಪೊಲೀಸರಿಗೆ ಈ ಕಳ್ಳನ ಕರಾಮತ್ತು ಮತ್ತು ಭದ್ರತಾ ವೈಫಲ್ಯದ ಬಗ್ಗೆ ಚಿಂತೆ ಶುರುವಾಗಿದೆಯಂತೆ. ಸರಳುಗಳ ಮಧ್ಯೆಯೇ ತೂರಿ ಬಂದು ತಪ್ಪಿಸಿಕೊಂಡ ಬಳಿಕ ಆ ಜೈಲಿಗೆ ಭದ್ರತೆ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆಯಂತೆ.

ಇದನ್ನೂ ಓದಿ:ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್​​ನಲ್ಲಿ ಸಿಲುಕಿ ಮಹಿಳೆ ಸಾವು

ABOUT THE AUTHOR

...view details