ಕರ್ನಾಟಕ

karnataka

ETV Bharat / bharat

Job Skills: ಭಾರತದಲ್ಲಿ ಕೋವಿಡ್​ ಬಳಿಕ IT ಅಲ್ಲ, ಈ ಉದ್ಯೋಗಗಳಿಗೆ ಭಾರಿ ಡಿಮ್ಯಾಂಡ್​! - ಚೇತರಿಕೆ ಹಾದಿ ಹಿಡಿದಿದೆ

ಉದ್ಯೋಗ ಕ್ಷೇತ್ರದಲ್ಲಿ ಪರಿಸ್ಥಿತಿಗನುಗುಣವಾಗಿ ಕೆಲವು ಹುದ್ದೆಗಳು ಬೇಡಿಕೆ ಪಡೆಯುತ್ತವೆ.

these jobs are high requirement after covid
these jobs are high requirement after covid

By

Published : Jul 5, 2023, 11:36 AM IST

ಬೆಂಗಳೂರು: ಕೋವಿಡ್​ ಸಮಯದಲ್ಲಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಇದಾಗಿ ಮೂರು ವರ್ಷಗಳ ಬಳಿಕ ನಿಧಾನವಾಗಿ ಉದ್ಯೋಗ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಯುವಜನತೆಗೆ ಹೊಸ ಹೊಸ ಅವಕಾಶಗಳು ಲಭ್ಯವಾಗುತ್ತಿವೆ.

ಕೋವಿಡೋತ್ತರ ಕಾಲದಲ್ಲಿ ಸಂಸ್ಥೆಗಳಲ್ಲಿ ಹುದ್ದೆಗಳ ಸ್ವರೂಪವೂ ಕೊಂಚ ಬದಲಾವಣೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಯುವ ಜನತೆ ಕೌಶಲ್ಯ ಹೊಂದಬೇಕಿದೆ. ಸದ್ಯ ಮಾರುಕಟ್ಟೆಯಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಡಿಕೆ ಇದೆ ಎಂಬ ಮಾಹಿತಿಯನ್ನು ವೃತ್ತಿಪರ ನೆಟ್​ವರ್ಕಿಂಗ್​ ಫ್ಲಾಟ್​ಫಾರ್ಮ್​ ಆಗಿರುವ 'ಲಿಂಕ್ಡಿನ್'​ ಹಂಚಿಕೊಂಡಿದೆ.

ಕೋವಿಡ್​ ಬಳಿಕ ಸವಾಲುಗಳನ್ನು ಎದುರಿಸುವಂತಹ ರಿಸ್ಕ್​​ ಕನ್ಸ್​ಲ್ಟೆಂಟ್​, ಇನ್ವೆಸ್ಟ್​​ ಮ್ಯಾನೇಜರ್​ ಮತ್ತು ಫೈನಾನ್ಸ್​ ಅಡ್ಮಿನಿಸ್ಟ್ರೇಷನ್​ ಹುದ್ದೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಹೆಚ್ಚು ಬೇಡಿಕೆ ಹೊಂದಿವೆ. ಪದವೀಧರ ಅಭ್ಯರ್ಥಿಗಳಿಗೆ ಇವು ಅತ್ಯಂತ ಸೂಕ್ತ ಹುದ್ದೆಗಳಾಗಿ ರೂಪುಗೊಂಡಿವೆ ಎಂದು ವರದಿ ಹೇಳುತ್ತದೆ.

ಇದರ ಜೊತೆಗೆ ವೃತ್ತಿಯ ಆರಂಭದಲ್ಲೇ ಅನಾಲಿಟಿಕ್ಸ್​ ಮತ್ತು ಜಾವಾ ಸ್ಕ್ರಿಪ್ಟ್​ ಕಲಿಕೆ ಅವಶ್ಯವಾಗಿದ್ದು, ಇದು ಕೂಡಾ ಬಹುಬೇಡಿಕೆ ಹೊಂದಿರುವ ಪ್ರಮುಖ ಕೌಶಲ್ಯ. ಎಂಬಿಎ ಪದವೀಧರರು ಟೆಕ್ನಾಲಜಿ ಅಸೋಸಿಯೇಟ್​, ಕ್ಯಾಟಲಾಗ್​ ಸ್ಪೆಷಲಿಸ್ಟ್​ ಮತ್ತು ಬ್ಯುಸಿನೆಸ್​ ಇಂಟಿಗ್ರೇಷನ್​ ಅನಾಲಿಸ್ಟ್​ನಂತಹ ಹುದ್ದೆಗಳ ಅವಕಾಶ ದಕ್ಕಿಸಿಕೊಳ್ಳಬಹುದು. ಪದವಿ ಇಲ್ಲ ಎನ್ನುವವರಿಗೂ ಕೂಡ ಭರಪೂರ ಅವಕಾಶಗಳಿದ್ದು, ಪ್ಲೇಸ್​ಮೆಟ್​ ಕೊರ್ಡಿನೇಟರ್​, ಯೂಸರ್​ ಇಂಟರ್​ಫೇಸ್​ ಡಿಸೈನರ್​ ಮತ್ತು ಅಪ್ಲಿಕೇಷನ್​ ಇಂಜಿನಿಯರ್‌ನಂತಹ ಹುದ್ದೆಗಳು ಬೇಡಿಕೆ ಪಡೆದಿವೆ ಎಂದು ವರದಿ ತಿಳಿಸಿದೆ.

ಕಂಪನಿಗಳ ನಿಯಮಗಳಲ್ಲೂ ಬದಲಾವಣೆ: ಕಂಪನಿಗಳು ಕೂಡ ಉದ್ಯೋಗಿಗಳ ವಿಚಾರದಲ್ಲಿ ಸಾಕಷ್ಟು ನಿಯಮಗಳನ್ನು ಸರಾಗಗೊಳಿಸಿದೆ. 2022ಕ್ಕೆ ಹೋಲಿಕೆ ಮಾಡಿದಾಗ 2023ರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಆನ್​ಸೈಟ್​ ರೋಲ್​ಗಳು ಕಡಿಮೆಗೊಳ್ಳುತ್ತಿದೆ. ಉದ್ಯೋಗದ ಆರಂಭಿಕ ಹಂತದಲ್ಲೇ ಕಚೇರಿಯಲ್ಲಿ ಕೆಲಸ ಮಾಡುವ ನಿಯಮ ಶೇ 10ರಷ್ಟು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ ಹೈಬ್ರಿಡ್​ ಹುದ್ದೆಗಳು ಶೇ 60ರಷ್ಟು ಹೆಚ್ಚಿವೆ.

ಫ್ರೆಶರ್​ಗಳಿಗೂ ಉದ್ಯೋಗ ವಲಯದಲ್ಲಿ ಸಾಕಷ್ಟು ಮತ್ತು ವ್ಯಾಪಕ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಭಾರತದ ಉನ್ನತ ಕೈಗಾರಿಕೆಗಳು ಕೂಡ ಹಣಕಾಸು ಸೇವೆ, ಆಡಳಿತಾತ್ಮಕ ಮತ್ತು ಬೆಂಬಲ ಸೇವೆ, ತಂತ್ರಜ್ಞಾನ, ಮಾಹಿತಿ ಮತ್ತು ಮಾಧ್ಯಮ ಮತ್ತು ಸೌಲಭ್ಯಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡುತ್ತಿವೆ. ಯಾವುದೇ ಆರ್ಥಿಕ ಸವಾಲುಗಳ ಹೊರತಾಗಿಯೂ ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ವೃತ್ತಿಪರರಿಗೆ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳು ಸಿಗುತ್ತಿವೆ. ಅಭ್ಯರ್ಥಿಗಳು ತಮ್ಮ ಧೈರ್ಯ, ಸರಳ ನಿಯಮ ಮತ್ತು ಸ್ಥಿತಿಸ್ಥಾಪಕತ್ವದೊಂದಿಗೆ ಉದ್ಯೋಗ ಹುಡುಕಾಟ ನಡೆಸಬಹುದು. ಅಲ್ಲದೇ, ಅವರ ವೃತ್ತಿಪರ ಪ್ರಯಾಣಕ್ಕೆ ಹೊಸ ಭರವಸೆಯ ಆರಂಭಕ್ಕೆ ವೇದಿಕೆಯನ್ನು ಒದಗಿಸಲಾಗುತ್ತಿದೆ ಎಂದು ಲಿಂಕ್ಡಿನ್​ ಕೆರಿಯರ್​ ಎಕ್ಸ್​ಪರ್ಟ್, ಭಾರತದ ಹಿರಿಯ ಮ್ಯಾನೇಜಿಂಗ್​ ಎಡಿಟರ್​​​​ ನಿರಾಜಿತಾ ಬ್ಯಾನರ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ: Railway Recruitment: ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗದಲ್ಲಿದೆ 904 ಅಪ್ರೆಂಟಿಸ್​ ಹುದ್ದೆ

ABOUT THE AUTHOR

...view details