ವಾಷಿಂಗ್ಟನ್(ಅಮೆರಿಕ):AI173 ವಿಮಾನದ ಎಂಜಿನ್ ದೋಷವನ್ನು ಸರಿಪಡಿಸಿದ ನಂತರ 232 ಪ್ರಯಾಣಿಕರೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋಗೆ ಎಐ173 ಏರ್ ಇಂಡಿಯಾ ವಿಮಾನವು ಗುರುವಾರ ಹೊರಟಿದೆ. ಎಲ್ಲ ಪ್ರಯಾಣಿಕರು ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿದ ನಂತರ ಕ್ಲಿಯರೆನ್ಸ್ ಫಾರ್ಮಾಲಿಟಿಗಳನ್ನು ಕೈಗೊಳ್ಳಲು ಏರ್ ಇಂಡಿಯಾ ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಹೆಚ್ಚುವರಿ ಆನ್ ಗ್ರೌಂಡ್ ಬೆಂಬಲವನ್ನು ಸಜ್ಜುಗೊಳಿಸಿದೆ. ಸ್ಯಾನ್ ಫ್ರಾನ್ಸಿಸ್ಕೋನಲ್ಲಿನ ತಂಡವು ಪ್ರಯಾಣಿಕರಿಗೆ ವೈದ್ಯಕೀಯ ಸೇವೆ ಜೊತೆಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ.
50 ಕ್ಕಿಂತ ಕಡಿಮೆ ಅಮೆರಿಕ ನಾಗರಿಕ ಪ್ರಯಾಣಿಕರು:ಬುಧವಾರ ತಾಂತ್ರಿಕ ದೋಷದ ಕಾರಣದಿಂದ ರಷ್ಯಾದ ಮಗದನ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನದಲ್ಲಿ 50 ಕ್ಕಿಂತ ಕಡಿಮೆ ಅಮೆರಿಕ ನಾಗರಿಕ ಪ್ರಯಾಣಿಕರಿದ್ದರು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ. ಇನ್ನು ಅಮೆರಿಕ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಬೋಯಿಂಗ್ AI173 ವಿಮಾನದಲ್ಲಿ ಕಾಣಿಸಿಕೊಂಡ ಇಂಜಿನ್ ದೋಷದಿಂದಾಗಿ 777-200 LR ವಿಮಾನವನ್ನು ಮಗದನ್‌ಗೆ ಕಳುಹಿಸಲಾಯಿತು. ಮತ್ತು ಎಲ್ಲ ಪ್ರಯಾಣಿಕರು ಅವರು ಹೋಗಬೇಕಿದ್ದ ಕಡೆಗೆ ಪ್ರಯಾಣಿಸಲಿದ್ದಾರೆ ಎಂದು ನಿನ್ನೆಯ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನೂ ಓದಿ:ಸರ್ಕಾರದ ಮಧ್ಯಪ್ರವೇಶದಿಂದ ವಿಮಾನದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ
ಆದರೆ ಇಂದು ಮಂಗಳವಾರ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವೊಂದು ಎಂಜಿನ್ನಲ್ಲಿನ ತಾಂತ್ರಿಕ ತೊಂದರೆಯ ಕಾರಣದಿಂದ ರಷ್ಯಾದ ಮಗದನ್ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಹೀಗಾಗಿ ಆ ವಿಮಾನದಲ್ಲಿನ ಪ್ರಯಾಣಿಕರು ಬೇರೆ ವ್ಯವಸ್ಥೆ ಆಗುವವರೆಗೆ ಮಗದನ್ ಏರ್ಪೋರ್ಟ್ನಲ್ಲಿಯೇ ತಿಂಡಿ, ಊಟ, ನಿದ್ದೆ ಮಾಡಿದ್ದಾರೆ.