ಜೈಪುರ (ರಾಜಸ್ಥಾನ): ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಜೋಧ್‌ಪುರದಲ್ಲಿ ನಡೆದ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂಗನಾ, ಗಲಭೆಗಳನ್ನು ನಿಯಂತ್ರಿಸುವ ಸರ್ಕಾರ ರಾಜ್ಯದಲ್ಲಿ ಬರಬೇಕೆಂದು ಹೇಳಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಬದಲಾವಣೆ ತರಬೇಕಿದೆ. ಇಲ್ಲಿ ಬದಲಾವಣೆಯಾದರೆ ಕೋಮು ಗಲಭೆಗಳ ನಿಯಂತ್ರಿಸುವ ಸರ್ಕಾರವನ್ನು ತರಬಹುದು. ಅಗತ್ಯವಿದ್ದರೆ ನಾನೇ ನಿಮಗೆ (ರಾಜಸ್ಥಾನ ಸರ್ಕಾರಕ್ಕೆ) ಉತ್ತರ ಪ್ರದೇಶದಿಂದ ಬುಲ್ಡೋಜರ್‌ಗಳನ್ನು ಕಳುಹಿಸುತ್ತೇನೆ ಎಂದಿದ್ದಾರೆ.