ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಅವರು ಯಾವುದೇ ಪಾರ್ಟಿಗಳ ಜೊತೆ ಅಲಯನ್ಸ್ ಇಲ್ಲ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಫ್ಯಾಸಿಸಂ ವಿರುದ್ಧ ಯಾರೂ ಹೋರಾಡದಂತೆ ದೃಢವಾದ ಪರ್ಯಾಯ ಮಾರ್ಗವನ್ನು ರೂಪಿಸಬೇಕಿದೆ. ಶರದ್ ಜಿ ಹಿರಿಯ ನಾಯಕ. ಹೀಗಾಗಿ, ಅವರ ಜೊತೆ ನಾನು ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಶರದ್ ಜೀ ಏನು ಹೇಳಿದರೂ ನಾನು ಒಪ್ಪುತ್ತೇನೆ. ಆದರೆ, ಯಾವುದೇ ಅಲಯನ್ಸ್ ಇಲ್ಲ ಎಂದು ಪುನರುಚ್ಚರಿಸಿದರು.
ಬ್ಯಾನರ್ಜಿ ಅವರೊಂದಿಗಿನ ಭೇಟಿಯ ನಂತರ ಮಾತನಾಡಿದ ಪವಾರ್, ಸಹೋದ್ಯೋಗಿಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದೆವು. ಅವರ ಉದ್ದೇಶವೆಂದರೆ, ಇಂದಿನ ಪರಿಸ್ಥಿತಿಯಲ್ಲಿ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಗ್ಗೂಡಬೇಕು ಮತ್ತು ಸಾಮೂಹಿಕ ನಾಯಕತ್ವವನ್ನು ಸ್ಥಾಪಿಸಬೇಕು ಎಂಬುದಾಗಿದೆ ಎಂದು ಹೇಳಿದರು.
ನಾವು ನಾಯಕತ್ವಕ್ಕೆ ಬಲವಾದ ಪರ್ಯಾಯವನ್ನು ಒದಗಿಸಬೇಕಾಗಿದೆ. ನಮ್ಮ ಚಿಂತನೆಯು ಇವತ್ತಿನದಲ್ಲ. ಇದನ್ನು ಸ್ಥಾಪಿಸಬೇಕು ಮತ್ತು ಆ ಉದ್ದೇಶದಿಂದ ಎಲ್ಲರೂ ಒಗ್ಗೂಡಬೇಕು. ಅವರು ನಮ್ಮೆಲ್ಲರನ್ನು ಭೇಟಿ ಮಾಡಿ ನಮ್ಮೆಲ್ಲರೊಂದಿಗೆ ಅತ್ಯಂತ ಸಕಾರಾತ್ಮಕ ಚರ್ಚೆ ನಡೆಸಿದ್ದಾರೆ ಎಂದು ಪವಾರ್ ತಿಳಿಸಿದರು.