ಚೆನ್ನೈ: ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಪಕ್ಷದ ತತ್ವ, ಉದ್ದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಹಾಗೂ ಪಕ್ಷದ ಘನತೆಗೆ ಚ್ಯುತಿ ತರುವಂತೆ ನಡೆದುಕೊಂಡ 18 ಮಂದಿಯನ್ನು ತೆಗೆದುಹಾಕಲಾಗಿದೆ ಎಂದು ಈ ಮೂಲಕ ಘೋಷಿಸಿದ್ದಾರೆ.
18 ಪಕ್ಷದ ಪದಾಧಿಕಾರಿಗಳಲ್ಲಿ ಓ ಪನ್ನೀರಸೆಲ್ವಂ ಅವರ ಪುತ್ರರಾದ ಎಐಎಡಿಎಂಕೆಯ ಏಕೈಕ ಲೋಕಸಭಾ ಸಂಸದ ಒ ಪಿ ರವೀಂದ್ರನಾಥ್ ಮತ್ತು ಐವರು ಜಿಲ್ಲಾ ಕಾರ್ಯದರ್ಶಿಗಳು ಸೇರಿದ್ದಾರೆ.
ಪನ್ನೀರಸೆಲ್ವಂ ಅವರ ಕಿರಿಯ ಪುತ್ರ ವಿ ಪಿ ಜಯಪ್ರದೀಪ್, ಓ ಪನ್ನೀರಸೆಲ್ವಂ ಅವರ ಆಪ್ತ ಸಯ್ಯದ್ ಖಾನ್, ಥೇಣಿ ಜಿಲ್ಲಾ ಎಐಎಡಿಎಂಕೆ ಕಾರ್ಯದರ್ಶಿ, ಮಾಜಿ ಸಚಿವ ವೆಲ್ಲಮಂಡಿ ಎನ್ ನಟರಾಜನ್, ಪೆರಂಬಲೂರು ಜಿಲ್ಲಾ ಕಾರ್ಯದರ್ಶಿ ಆರ್‌ಟಿ ರಾಮಚಂದ್ರನ್ ಅವರು ಪಕ್ಷದಿಂದ ಉಚ್ಛಾಟಿತರಾದ ಪ್ರಮುಖರು ಎಲ್ಲಾ 18 ನಾಯಕರು ಜುಲೈ 11 ರಂದು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ಪನ್ನೀರಸೆಲ್ವಂ ಅವರ ಸಕ್ರಿಯ ಬೆಂಬಲಿಗರಾಗಿದ್ದಾರೆ.
ಪಕ್ಷದ ಗುರಿಗಳು ಮತ್ತು ನೀತಿಗಳಿಗೆ ವಿರುದ್ಧವಾಗಿ ವರ್ತಿಸುವುದಕ್ಕಾಗಿ ಇವರನ್ನು ಎಐಎಡಿಎಂಕೆಯ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗುತ್ತಿದೆ. ಅವರು ಎಐಎಡಿಎಂಕೆಗೆ ಅಪಖ್ಯಾತಿಯನ್ನೂ ತಂದಿದ್ದಾರೆ ಎಂದು ಪಳನಿಸ್ವಾಮಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಉಚ್ಚಾಟಿತ ಪದಾಧಿಕಾರಿಗಳೊಂದಿಗೆ ಪಕ್ಷದ ಕಾರ್ಯಕರ್ತರು ಸಂಪರ್ಕದಲ್ಲಿರಬಾರದು ಎಂದು ಸೂಚನೆ ನೀಡಲಾಗಿದೆ.
ಇದನ್ನು ಓದಿ :ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 12 ಮಂದಿಗೆ ಗಾಯ