ದಿಯು:1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ಜಲಾಂತರ್ಗಾಮಿ ದಾಳಿಯಿಂದ ಭಾರತೀಯ ಸೇನೆಯ ಐಎನ್‌ಎಸ್ ಖುಕ್ರಿ ಯುದ್ಧನೌಕೆ ಮುಳುಗಡೆಯಾಗಿತ್ತು. ಬಳಿಕ ಅದನ್ನು ಪತ್ತೆ ಹಚ್ಚಿದ್ದ ನೌಕಾದಳ ಬಳಿಕ ಅದನ್ನು ದುರಸ್ತಿ ಮಾಡಿತ್ತು. ಇದೀಗ ಆ ನೌಕೆಯನ್ನು ಸ್ಮಾರಕ ರೂಪದಲ್ಲಿ ಇರಿಸಲು ನಿರ್ಧರಿಸಿದೆ. ಈ ಮೂಲಕ ಜನರು ಹಡಗಿನ ಅದ್ಭುತ ಇತಿಹಾಸ ಹಾಗೂ ಈ ಯುದ್ಧ ನೌಕೆಯ ವೀರ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
1971ರ ಭಾರತ-ಪಾಕಿಸ್ತಾನ ಯುದ್ಧ ಪುನರ್ ನಿರ್ಮಾಣಗೊಂಡಿರುವ ಐಎನ್‌ಎಸ್ ಖುಕ್ರಿ ಯುದ್ಧನೌಕೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಈ ಐತಿಹಾಸಿಕ ಯುದ್ಧ ಹಡಗು ಇದೀಗ ವಿಶಾಖಪಟ್ಟಣದಿಂದ ದಿಯು ತಲುಪಿದೆ. ದಿಯು ಚಕ್ರತೀರ್ಥ ಕಡಲತೀರದಲ್ಲಿ ಈ ಯುದ್ಧನೌಕೆಯನ್ನು ಇರಿಸಲಾಗುವುದು. ಜನವರಿ 26 ರಂದು ದಿಯು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಲೋನಿ ರೈ ತಿಳಿಸಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧ ಓದಿ:ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು
1971ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ 2 INS ಖುಕ್ರಿ ನೌಕೆಗಳು ಯುದ್ಧದಲ್ಲಿ ಭಾಗವಹಿಸಲು ಮುಂಬೈ ಮತ್ತು ವಿಶಾಖಪಟ್ಟಣಂನಿಂದ ದಿಯುಗೆ ತೆರಳುತ್ತಿದ್ದವು. ಇವುಗಳಲ್ಲಿ ಮುಂಬೈನಿಂದ ದಿಯುಗೆ ಬರುತ್ತಿದ್ದ ಖುಕ್ರಿ ಯುದ್ಧನೌಕೆಯನ್ನು ಪಾಕಿಸ್ತಾನ ಜಲಾಂತರ್ಗಾಮಿಯಿಂದ ಉಡಾಯಿಸಿತ್ತು. ಇದರಲ್ಲಿ 171 ಕ್ಕೂ ಹೆಚ್ಚು ಜನರು ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದರು.
1971ರ ಭಾರತ-ಪಾಕಿಸ್ತಾನ ಯುದ್ಧ ಹೀಗೆ ದೇಶದ ರಕ್ಷಣೆಗಾಗಿ ಹೋರಾಡಿದ್ದ ಐಎನ್‌ಎಸ್ ಖುಕ್ರಿಯನ್ನು ಈಗ ಸ್ಮಾರಕವನ್ನಾಗಿಸಲಾಗಿದೆ. ಈ ಸ್ಮಾರಕವನ್ನು ಜನವರಿ 26 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಇದರಿಂದ ದಿಯುಗೆ ಭೇಟಿ ನೀಡುವ ಪ್ರವಾಸಿಗರು 171 ಅಧಿಕಾರಿಗಳು ಮತ್ತು ಧೀರ ಸೈನಿಕರೊಂದಿಗೆ ಯುದ್ಧನೌಕೆ ಖುಕ್ರಿಯ ಶೌರ್ಯ ಮತ್ತು ನಿರ್ಭೀತ ಕಥೆ ವೀಕ್ಷಿಸಬಹುದಾಗಿದೆ.