ಕರ್ನಾಟಕ

karnataka

ETV Bharat / bharat

ವೇಗದ ಇಂಟರ್​​ನೆಟ್​​ ಸೌಲಭ್ಯದಿಂದ ಹಳ್ಳಿಗಳು ಈಗಲೂ ದೂರ: ಭಾರತ್​ ನೆಟ್​ ಯೋಜನೆ ಜಾರಿಗೆ ಮುಂದಾದ ಸರ್ಕಾರ - ಹೈಸ್ಪೀಡ್ ಇಂಟರ್ನೆಟ್

ದೇಶದ ಸಾಕಷ್ಟು ಗ್ರಾಮಗಳು ಹೆಚ್ಚಿನ ವೇಗದ 3ಜಿ / 4ಜಿ ಮೊಬೈಲ್ ಸಂಪರ್ಕ ಪಡೆದುಕೊಂಡಿಲ್ಲ ಹಾಗೂ ಕೆಲ ರಾಜ್ಯಗಳ ಗ್ರಾಮಗಳಲ್ಲಿ ಅಧಿಕ ವೇಗದ ಮೊಬೈಲ್ ನೆಟರ್​ವರ್ಕ್ ಸೇವೆ ಲಭ್ಯವಿಲ್ಲ.

the-villages-are-still-a-long-way-from-the-fastest-internet
ಅತೀ ವೇಗದ ಇಂಟರ್​​ನೆಟ್​​ ಸೌಲಭ್ಯದಿಂದ ಈಗಲೂ ಹಳ್ಳಿಗಳು ದೂರ: ಇಲ್ಲಿದೆ ಮಾಹಿತಿ...

By

Published : Feb 4, 2021, 9:46 PM IST

ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ವೇಗವನ್ನು ಸುಧಾರಿಸಲು, ದೇಶದ ಬ್ರಾಡ್ಬ್ಯಾಂಡ್ / ಹೈಸ್ಪೀಡ್ ಇಂಟರ್​ನೆಟ್​​ ಮೂಲ ಸೌಕರ್ಯದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು (ಜಿಪಿಗಳು) (ಅಂದಾಜು 2.5 ಲಕ್ಷ) ಸಂಪರ್ಕಿಸಲು ಭಾರತ್​​ ನೆಟ್​​​ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

3ಜಿ / 4ಜಿ ಮೊಬೈಲ್ ಸಂಪರ್ಕದ ಮೂಲಕ ಮತ್ತು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಸಂಪರ್ಕದ ಮೂಲಕ ಸರ್ಕಾರ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಂದ (ಟಿಎಸ್‌ಪಿ) ಗ್ರಾಮೀಣ ಪ್ರದೇಶಗಳಲ್ಲಿ ಹೈಸ್ಪೀಡ್ ಇಂಟರ್​ನೆಟ್​ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ದೇಶದ ಸಾಕಷ್ಟು ಗ್ರಾಮಗಳು ಹೆಚ್ಚಿನ ವೇಗದ 3ಜಿ / 4ಜಿ ಮೊಬೈಲ್ ಸಂಪರ್ಕ ಪಡೆದುಕೊಂಡಿಲ್ಲ ಹಾಗೂ ಕೆಲ ರಾಜ್ಯಗಳ ಗ್ರಾಮಗಳಲ್ಲಿ ಅಧಿಕ ವೇಗದ ಮೊಬೈಲ್ ನೆಟರ್​ವರ್ಕ್ ಸೇವೆ ಲಭ್ಯವಿಲ್ಲ.

ವೇಗದ ಇಂಟರ್​ನೆಟ್ ಸೇವೆಯಿಂದ ವಂಚಿತವಾಗಿರುವ ಹಳ್ಳಿಗಳ ವಿವರ

ಕ್ರ.ಸಂ ರಾಜ್ಯ/ ಕೇಂ.ಪ್ರದೇಶ 2011ರ ಜನಗತಿಯಂತೆ ಹಳ್ಳಿಗಳ ಸಂಖ್ಯೆ ವೇಗದ ಇಂಟರ್​​ನೆಟ್ ಹೊಂದಿರದ ಹಳ್ಳಿಗಳ ಸಂಖ್ಯೆ
1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 396 311
2 ಆಂಧ್ರ ಪ್ರದೇಶ 16158 2095
3 ಅರುಣಾಚಲ ಪ್ರದೇಶ 5258 3343
4 ಅಸ್ಸೋಂ 25372 1231
5 ಬಿಹಾರ್ 39073 321
6 ಚಂಡೀಗಢ 5 0
7 ಚತ್ತೀಸ್​​​ಗಢ 19567 2793
8 ದಾದ್ರ ನಗರ ಹವೇಲಿ 84 11
9 ದೆಹಲಿ 103 0
10 ಗೋವಾ 320 21
11 ಗುಜರಾತ್​ 17843 775
12 ಹರಿಯಾಣ 6642 1
13 ಹಿಮಾಚಲ ಪ್ರದೇಶ 17882 974
14 ಜಮ್ಮು ಮತ್ತು ಕಾಶ್ಮೀರ 6101 388
15 ಜಾರ್ಖಂಡ್ 29492 2069
16 ಕರ್ನಾಟಕ 27397 608
17 ಕೇರಳ 1017 0
18 ಲಡಾಖ್​ 236 155
19 ಲಕ್ಷದ್ವೀಪ 6 0
20 ಮಧ್ಯಪ್ರದೇಶ 51929 2450
21 ಮಹಾರಾಷ್ಟ್ರ 40959 2014
22 ಮನಿಪುರ 2515 806
23 ಮೆಘಾಲಯ 6459 2418
24 ಮಿಜೋರಾಂ 704 296
25 ನಾಗಾಲ್ಯಾಂಡ್​ 1400 378
26 ಒಡಿಶಾ 47677 8947
27 ಪಂಜಾಬ್​ 12168 1
28 ಪುದುಚೆರಿ 90 0
29 ರಾಜಸ್ಥಾನ್ 43264 1453
30 ಸಿಕ್ಕಿಂ 425 16
31 ತಮಿಳುನಾಡು 15049 74
32 ತೆಲಂಗಾಣ 10128 375
33 ತ್ರಿಪುರ 863 60
34 ಉತ್ತರಾಖಂಡ್​ 15745 2410
35 ಉತ್ತರ ಪ್ರದೇಶ 97813 620
36 ಪಶ್ವಿಮ ಬಂಗಾಳ 37478 25
ಒಟ್ಟು 5,97,618 37439

ABOUT THE AUTHOR

...view details