ಕರ್ನಾಟಕ

karnataka

ETV Bharat / bharat

ತಾಲಿಬಾನ್ ​​: ಅದರ ಇತಿಹಾಸ, ಸಿದ್ಧಾಂತದ ಜತೆಗೆ ಮತ್ತಷ್ಟು ಮಾಹಿತಿ - ತಾಲಿಬಾನ್​ ಸರ್ಕಾರ

ಸಾವಿರಾರು ಅಮೆರಿಕನ್ನರನ್ನು ಕೊಂದ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಅವನ ಅಲ್ ಖೈದಾ ಸಂಘಟನೆಯ ಸಹಚರರನ್ನು ನಿರ್ನಾಮಗೊಳಿಸಲು ಅಮೆರಿಕ ಸೇನೆ ಅಪ್ಘಾನಿಸ್ತಾನಕ್ಕೆ 2001ರಲ್ಲಿ ಬಂದಿತ್ತು. ಆದರೆ, ಲಾಡೆನ್ ನನ್ನು ಹುಡುಕಿ ಕೊಲ್ಲಲು ಅದಕ್ಕೆ ಬರೋಬ್ಬರಿ ಒಂದು ದಶಕ ಬೇಕಾಯಿತು. ಕಳೆದ ವರ್ಷ ತಾಲಿಬಾನಿ ಸಂಘಟನೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ಸು ಕರೆಸಿಕೊಂಡಿದೆ..

Taliban
ತಾಲಿಬಾನ್​

By

Published : Sep 4, 2021, 4:25 PM IST

ಕಾಬೂಲ್ ​:ಅಮೆರಿಕ ಸೇನೆ ಹಿಂತೆಗೆತ ಮತ್ತು ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ಬಾಚಿಕೊಂಡ ತಾಲಿಬಾನ್ ಸರ್ಕಾರ ರಚಿಸಲು ಸಿದ್ಧವಾಗಿದೆ. ತಾಲಿಬಾನ್ ಎಂದರೆ ಪಾಷ್ಟೋ ಭಾಷೆಯಲ್ಲಿ "ವಿದ್ಯಾರ್ಥಿಗಳು" ಎಂದರ್ಥ.

ಸರ್ಕಾರ ರಚಿಸಲಿರುವ ತಾಲಿಬಾನ್

ಈ ತಾಲಿಬಾನ್ 1994ರಲ್ಲಿ ದಕ್ಷಿಣ ಅಫ್ಘಾನ್​​ ನಗರ ಕಂದಹಾರ್ ಸುತ್ತಲೂ ಹುಟ್ಟಿಕೊಂಡಿತು. ಸೋವಿಯತ್ ರಷ್ಯಾ ಒಕ್ಕೂಟದ ವಾಪಸಾತಿ ಮತ್ತು ನಂತರದ ಸರ್ಕಾರದ ಪತನದ ನಂತರ ದೇಶದ ನಿಯಂತ್ರಣಕ್ಕಾಗಿ ಅಂತರ್ಯುದ್ಧ ನಡೆಸಿದ ಬಣಗಳಲ್ಲಿ ಇದೂ ಒಂದು. ಅಫ್ಘಾನ್​ನಲ್ಲಿ ತಾಲಿಬಾನ್​ ನೆಲೆ ಅದು ಹುಟ್ಟು ಹಾಕಿದ ಅರಾಜಕತೆ, ಹೇರಿದ ನಿರ್ಬಂಧ, ವಿಧಿಸಿದ ಕಾನೂನೂ, ಸೃಷ್ಟಿಸಿದ ಸಾವು-ನೋವುಗಳು ಊಹಿಸಲಾಧ್ಯ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಇಡೀ ದೇಶದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮತ್ತೆ 20 ವರ್ಷ ಹಿಂದಿನಂತೆ ತಾಲಿಬಾನ್ ಅಧಿಕಾರ ಹಿಡಿಯಲು ಮುಂದಾಗಿದೆ. ಚುನಾಯಿತ ಸರ್ಕಾರವನ್ನೇ ತಾಲಿಬಾನ್ ಕಿತ್ತೊಗೆದಿದೆ. ​ಇದರಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕಾ ದೊಡ್ಡ ಸೋಲು ಕಂಡಂತಾಗಿದೆ.

ಇದನ್ನೂ ಓದಿ:ಪಾಕಿಸ್ತಾನವು ತಾಲಿಬಾನ್​ಗೆ ಬೆಂಬಲಿಸಿ, ಪೋಷಿಸಿದೆ: ಹರ್ಷ ವಿ.ಶೃಂಗ್ಲಾ

ಅಮೆರಿಕಾ ಮಾಡಿದ ಯಡವಟ್ಟು, ಪಾಕಿಸ್ತಾನದ ಹುನ್ನಾರ.. ಅಫ್ಘಾನಿಸ್ತಾನದ ಜನಸಾಮಾನ್ಯರಿಗೆ ಪೆಟ್ಟು ಕೊಟ್ಟ ನೀತಿಗಳು ಇಂದಿನ ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆಗೆ ಕಾರಣ ಎನ್ನಲಾಗ್ತಿದೆ. ಅಫ್ಘಾನಿಸ್ತಾನದಲ್ಲಿ ಬಾಂಬ್​ ಸ್ಫೋಟ ಮುಂದುವರೆದ್ರೂ ಮಾತುಕತೆ ನಡೆದಿತ್ತು. ಶಾಂತಿಗೆ ಒಪ್ಪದ ತಾಲಿಬಾನಿಗಳ ಜೊತೆ ನಿರಂತರ ಚರ್ಚೆ ನಡೆಯುತ್ತಲೇ ಇತ್ತು.

ಸರಿಯಾದ ಒಪ್ಪಂದ ಆಗುವ ಮೊದಲೇ ಅಮೆರಿಕಾ ಅಫ್ಘಾನಿಸ್ತಾನದಿಂದ ಕಾಲ್ಕಿತ್ತಿತ್ತು. ಇನ್ನು, ಅಮೆರಿಕಾ ಗುಪ್ತಚರ ಇಲಾಖೆಯೂ ಸಹ ಸಂಪೂರ್ಣ ವಿಫಲವಾದ್ದರಿಂದ ತಾಲಿಬಾನ್​ ಬಲವನ್ನ ಗುರ್ತಿಸುವಲ್ಲಿ ಅಮೆರಿಕಾ ವಿಫಲಗೊಂಡಿತ್ತು. ಪಾಕಿಸ್ತಾನದ ಬೆಂಬಲ ತಾಲಿಬಾನ್​​ಗೆ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

ಸಾವಿರಾರು ಅಮೆರಿಕನ್ನರನ್ನು ಕೊಂದ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಅವನ ಅಲ್ ಖೈದಾ ಸಂಘಟನೆಯ ಸಹಚರರನ್ನು ನಿರ್ನಾಮಗೊಳಿಸಲು ಅಮೆರಿಕ ಸೇನೆ ಅಪ್ಘಾನಿಸ್ತಾನಕ್ಕೆ 2001ರಲ್ಲಿ ಬಂದಿತ್ತು. ಆದರೆ, ಲಾಡೆನ್ ನನ್ನು ಹುಡುಕಿ ಕೊಲ್ಲಲು ಅದಕ್ಕೆ ಬರೋಬ್ಬರಿ ಒಂದು ದಶಕ ಬೇಕಾಯಿತು. ಕಳೆದ ವರ್ಷ ತಾಲಿಬಾನಿ ಸಂಘಟನೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ಸು ಕರೆಸಿಕೊಂಡಿದೆ.

ಇದನ್ನೂ ಓದಿ:ಪಾಕ್​ ರಾಯಭಾರಿ ಭೇಟಿ ಮಾಡಿದ Taliban​.. ಈ ವಿಚಾರಗಳ ಕುರಿತಂತೆ ಚರ್ಚೆ

ಇತ್ತ ತಾಲಿಬಾನ್​ ನ ಮನಸ್ಥಿತಿ ತಿಳಿದುಕೊಳ್ಳುವಲ್ಲಿ ನ್ಯಾಟೋ ಸಹ ಸಂಪೂರ್ಣ ವಿಫಲವಾಗಿತ್ತು. ಮಾಹಿತಿ ಕೊರತೆ, ಸಮಸ್ಯೆ ಗುರ್ತಿಸಲೂ ಅಮೆರಿಕಾ ವಿಫಲವಾಗಿತ್ತು. ಇದೆಲ್ಲದರ ಪರಿಣಾಮ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಜೀವ ಉಳಿಸಿಕೊಳ್ಳಲು ತಾಲಿಬಾನ್​ ವಿರೋಧಿಗಳು ಹರಸಾಹಸ ಪಡುತ್ತಿದ್ದಾರೆ. ದೇಶ ಬಿಟ್ಟು ಓಡಿಹೋಗಲು ಸಾವಿರಾರು ಜನ ಯತ್ನಿಸುತ್ತಿದ್ದಾರೆ. ಈ ಮಧ್ಯೆ ತಾಲಿಬಾನ್​​ ಉಗ್ರ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ.

ABOUT THE AUTHOR

...view details