ಕರ್ನಾಟಕ

karnataka

ETV Bharat / bharat

ಸೇನಾಪಡೆಗಳಿಗೆ ಹೊಸ ರೂಪ ನೀಡುವ 'ಅಗ್ನಿಪಥ್' ಯೋಜನೆ ಘೋಷಣೆ.. ಅದರ ಪೂರ್ಣ ಮಾಹಿತಿ ಇಲ್ಲಿದೆ - rajnath singh

ಭಾರತದ ಮೂರೂ ಪಡೆಯ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ.

The scheme was announced by the chiefs of the three services
ಅಗ್ನಿಪಥ್ ಯೋಜನೆ ಅನಾವರಣಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

By

Published : Jun 14, 2022, 1:23 PM IST

Updated : Jun 14, 2022, 7:45 PM IST

ನವದೆಹಲಿ: ಯುವಕರನ್ನು ಸಶಸ್ತ್ರ ಪಡೆಗಳ ಭಾಗವನ್ನಾಗಿ ಮಾಡುವ ವಿನೂತನ ಯೋಜನೆಯಾದ 'ಅಗ್ನಿಪಥ್​ ಯೋಜನೆ'ಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಯೋಜನೆಯಡಿ ಸೇನೆ ಸೇರುವ ಯುವಕರನ್ನು 'ಅಗ್ನಿವೀರ್​' ಎಂದು ಕರೆದು ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಇದೊಂದು ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದ್ದು, ಬಹುದಿನಗಳ ಚರ್ಚೆಯ ಬಳಿಕ ಘೋಷಿಸಲಾಗಿದೆ.

ಈ ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ಆಯ್ಕೆಯಾಗುವ ಯುವಕರು 4 ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರಿಗೆ ಆಕರ್ಷಕ ಸಂಬಳ, ಭತ್ಯೆಯನ್ನು ನೀಡಲಾಗುತ್ತದೆ. ಅವರ ನಿರ್ಗಮನದ ಬಳಿಕ ಪಿಂಚಣಿ ಸೌಲಭ್ಯವನ್ನೂ ಪಡೆಯಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮಾಹಿತಿ ನೀಡಿದರು.

ಏನಿದು ಅಗ್ನಿಪತ್ ಯೋಜನೆ?:ಅಗ್ನಿಪತ್ ಎನ್ನುವುದು ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನೌಕಾಪಡೆಗೆ ಪ್ರವೇಶ ಪಡೆಯುವ ಬೃಹತ್​ ನೇಮಕಾತಿ ಯೋಜನೆಯಾಗಿದೆ. ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರ್‌ಗಳಲ್ಲಿ ಸೇವೆ ಸಲ್ಲಿಸಲು ಯುವಜನರಿಗೆ ಇದು ಅವಕಾಶ ಕಲ್ಪಿಸಲಿದೆ.

ಅರ್ಹತೆ ಏನು?:ಮಿಲಿಟರಿ ವ್ಯವಹಾರಗಳ ಇಲಾಖೆಯು ಯೋಜಿಸಿರುವ ಈ ಯೋಜನೆಯಡಿ ಸೇವೆ ಸಲ್ಲಿಸಲು ಬಯಸುವ ಯುವಕರು 17.5 ವರ್ಷದಿಂದ 21 ವರ್ಷದೊಳಗಿನವರಾಗಿರಬೇಕು. 4 ವರ್ಷಗಳವರೆಗಿನ ಅವಧಿಗೆ ಮಾತ್ರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು.

ಅಗ್ನಿಪಥ್ ಯೋಜನೆ ಅನಾವರಣಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯೋಧರನ್ನು 'ಅಗ್ನಿವೀರ್​' ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಅಗ್ನಿವೀರರಿಗೆ ತರಬೇತಿ ಸೇರಿದಂತೆ 4 ವರ್ಷಗಳವರೆಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. ಅವಧಿ ಪೂರ್ಣ ಬಳಿಕ ಹೊಸದಾಗಿ ನೇಮಿಸಿಕೊಳ್ಳುವ ಸೈನಿಕರ ಪೈಕಿ ಕೇವಲ ಶೇ.25ರಷ್ಟು ಸೈನಿಕರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಆ ಉಳಿದ ಸೈನಿಕರು ಸಾಮಾನ್ಯ ಕೇಡರ್‌ನಲ್ಲಿ 15 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಅಧಿಕಾರಿಯೇತರ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ನಿವೃತ್ತಿಯಾದ ಶೇ.75 ರಷ್ಟು ಸೈನಿಕರಿಗೆ 11-12 ಲಕ್ಷ ರೂಪಾಯಿ 'ಸೇವಾ ನಿಧಿ'ಯಾಗಿ ನೀಡಲಾಗುತ್ತದೆ. ಇದರೊಂದಿಗೆ ಕೌಶಲ ಪ್ರಮಾಣಪತ್ರ ಮತ್ತು ಅವರ ಮುಂದಿನ ಜೀವನಕ್ಕಾಗಿ ನೆರವಾಗಲು ಬ್ಯಾಂಕ್​ ಸಾಲಗಳನ್ನೂ ಕೂಡ ನೀಡಲಾಗುತ್ತದೆ.

ವೇತನ ಎಷ್ಟು:4 ವರ್ಷಗಳ ಅವಧಿಗೆ ನೇಮಕವಾಗು ಅಗ್ನಿವೀರರಿಗೆ ಆರಂಭಿಕವಾಗಿ 30 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದು ಕೊನೆಗೆ 40 ಸಾವಿರ ತಲುಪಲಿದೆ. ನಿವೃತ್ತಿ ನಿಧಿಯಾಗಿ 5 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಸೇವಾವಧಿಯಲ್ಲಿ ಅಂಗವೈಕಲ್ಯ ಉಂಟಾದರೆ 48 ಲಕ್ಷ ಜೀವವಿಮೆ, ಸಾವನ್ನಪ್ಪಿದಲ್ಲಿ ಹೆಚ್ಚುವರಿಯಾಗಿ ಎಕ್ಸ್​ಗ್ರೇಷಿಯಾ 44 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದಾರೆ.

ಯೋಜನೆಗೆ ವಿಮರ್ಶಕರ ಟೀಕೆ:ಅಗ್ನಿಪಥ್​ ಐತಿಹಾಸಿಕ, ಮಹತ್ವಾಕಾಂಕ್ಷಿ ಯೋಜನೆಯಾಗಿದ್ದರೂ, ಹಲವು ಟೀಕೆಗಳೂ ಇವೆ. ಸಶಸ್ತ್ರ ಪಡೆಗಳಿಗೆ ಸೇರಿದ ಸೈನಿಕರಿಗೆ ಕನಿಷ್ಠ 8 ವರ್ಷಗಳ ತರಬೇತಿ ಬಳಿಕ ಪೂರ್ಣ ಪ್ರಮಾಣದಲ್ಲಿ ಅವರು ಸಜ್ಜಾಗಲಿದ್ದರೆ. ಈ ಯೋಜನೆಯಡಿ ನೇಮಕ ಮಾಡಿಕೊಳ್ಳುವ ಸೈನಿಕರ ಸೇವಾವಧಿ 4 ವರ್ಷ ಮಾತ್ರ. ಹೀಗಾಗಿ ಇದು ಅಸಮರ್ಪಕ ಯೋಜನೆ ಎಂದು ವಿಮರ್ಶಕರು ಟೀಕಿಸಿದ್ದಾರೆ.

ಇದನ್ನೂ ಓದಿ:ಲೆಟರ್ ಬಾಕ್ಸ್​ ಪೋಸ್ಟ್ ಆಫೀಸ್​ ನೋಡಿದ್ದೀರಾ? ಇದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ!

Last Updated : Jun 14, 2022, 7:45 PM IST

ABOUT THE AUTHOR

...view details