ಶಿರಡಿ(ಮಹಾರಾಷ್ಟ್ರ):ಕೊರೊನಾ ಮಹಾಮಾರಿಯಿಂದಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡಿದ್ದ ದೇವಾಲಯಗಳು ಮತ್ತು ಇತರ ಧಾರ್ಮಿಕ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಬಹುದು ಎಂದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಹೇಳಿದೆ. ಹಾಗಾಗಿ, ಇಂದಿನಿಂದ ಶಿರಡಿಯಲ್ಲಿನ ಸಾಯಿಬಾಬಾ ದೇವಸ್ಥಾನವನ್ನು ಮತ್ತೆ ಭಕ್ತರಿಗಾಗಿ ತೆರೆಯಲಾಗ್ತಿದೆ.
ವರದಿಯ ಪ್ರಕಾರ, ಭಕ್ತರು ಸೋಮವಾರ ಕಾಕಡ್ ಆರತಿ ನಂತರ ಸಾಯಿಬಾಬಾರಿಂದ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತದೆ. ಆದರೂ, ಕೋವಿಡ್-19 ಕಾರಣದಿಂದಾಗಿ, ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ದಿನಕ್ಕೆ 6,000 ಭಕ್ತರಿಗೆ ಮತ್ತು ಗಂಟೆಗೆ 900 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಿದೆ.