ಕರ್ನಾಟಕ

karnataka

By

Published : Dec 11, 2021, 1:37 PM IST

ETV Bharat / bharat

ಅನಿಲ್ ದೇಶಮುಖ್ ವಿರುದ್ಧ ನೂರು ಕೋಟಿ ರೂ. ವಂಚನೆ ಆರೋಪ: 7 ಪೊಲೀಸರ ಹೇಳಿಕೆ ದಾಖಲಿಸಿದ ಸಿಬಿಐ

ನೂರು ಕೋಟಿ ರೂಪಾಯಿ ವಸೂಲಿ ಆರೋಪ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಏಳು ಮಂದಿ ಪೊಲೀಸರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

-the-rs-100-crore-recovery-case-the-cbi-recorded-the-reply-of-7-police-personnel
ಅನಿಲ್ ದೇಶಮುಖ್ ವಿರುದ್ಧ ನೂರು ಕೋಟಿ ರೂ. ವಂಚನೆ ಆರೋಪ: 7 ಪೊಲೀಸರ ಹೇಳಿಕೆ ದಾಖಲಿಸಿದ ಸಿಬಿಐ

ಮುಂಬೈ(ಮಹಾರಾಷ್ಟ್ರ):ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧನೂರು ಕೋಟಿ ರೂಪಾಯಿ ವಸೂಲಿ ಆರೋಪ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಏಳು ಮಂದಿ ಪೊಲೀಸರ ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಅನಿಲ್ ದೇಶಮುಖ್ ಮಹಾರಾಷ್ಟ್ರದ ಗೃಹ ಸಚಿವರಾಗಿದ್ದ ವೇಳೆ ಬಾರ್ ಮತ್ತು ರೆಸ್ಟೋರೆಂಟ್​ಗಳಿಂದ ಸುಮಾರು ನೂರು ಕೋಟಿ ರೂಪಾಯಿಯನ್ನು ಸುಲಿಗೆ ಮಾಡಿದ್ದಾರೆಂದು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ.

ಪ್ರಸ್ತುತ ಅನಿಲ್ ದೇಶಮುಖ್ ಡಿಸೆಂಬರ್ 13ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದು, ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್ ಚಾಂಡಿವಾಲ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯ ಕೂಡಾ ವಿಚಾರಣೆ ನಡೆಸುತ್ತಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್​ 2ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಅನಿಲ್ ದೇಶಮುಖ್​ ಅವರ ವಿಚಾರಣೆಯನ್ನು ಸಿಬಿಐ ಮುಂದುವರೆಸಿದೆ.

ಇದನ್ನೂ ಓದಿ:ಮುಂಬೈನಲ್ಲಿ ಎನ್​ಸಿಬಿ ದಾಳಿ : ಆಸ್ಟ್ರೇಲಿಯಾಗೆ ಕೋರಿಯರ್​​ನಲ್ಲಿ ರವಾನೆಯಾಗುತ್ತಿದ್ದ ಡ್ರಗ್ಸ್ ಜಪ್ತಿ

ABOUT THE AUTHOR

...view details