ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೀರಾ? ಸಹ ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದರೆ ಅದರಲ್ಲೊಬ್ಬರು ಕೋವಿಡ್ ಸೋಂಕಿತರಿದ್ದರೆ ಅವರಿಂದ ಹೇಗೆ ವೈರಸ್ ಹರಡುತ್ತಿದೆ ಗೊತ್ತೇ? ಆಟೋ, ಬಸ್, ಎಸಿಯೇತರ ಕಾರು... ಈ ನಾಲ್ಕು ವಾಹನಗಳಲ್ಲಿ ಸಂಚಾರಕ್ಕೆ ಯೋಗ್ಯವಾದ ವಾಹನಗಳ ಬಗ್ಗೆ ಸಂಶೋಧನೆ ನಡೆಸಿದಾಗ ಇತರೆ ವಾಹನಗಳಿಗಿಂತ ಆಟೋದಲ್ಲಿ ಪ್ರಯಾಣಿಸಿದರೆ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಿವೆ ಅಧ್ಯಯನಗಳು.
ಹೌದು, ಅಮೆರಿಕಾದ ಪ್ರತಿಷ್ಠಿತ ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಬ್ಲೂಮ್ ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಕೇರ್ ಸಂಶೋಧನಾ ಸಂಸ್ಥೆ ಆಟೋದಲ್ಲಿ ವೈರಸ್ ಹರಡುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದೆ. ಇದಕ್ಕೆ ಕಾರಣವಾಗುವ ಅಂಶಗಳನ್ನು ನೀಡಿದೆ.
ಆರೋಗ್ಯ, ಇಂಜಿಯರಿಂಗ್ ವಿಭಾಗದಲ್ಲಿ ತಜ್ಞರಾದ ದರ್ಪಣ್ ದಾಸ್, ಗುರುಮೂರ್ತಿ ರಾಮಚಂದ್ರನ್ ಇವರು ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ರೀತಿಯ ವಾಹನಗಳಲ್ಲಿ ಪ್ರಯಾಣ ಎಷ್ಟು ಅಪಾಯಕಾರಿ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಇವರ ಸಂಶೋಧನೆಯ ಪತ್ರವನ್ನು ಎನ್ವಿರಾನ್ಮೆಂಟ್ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಬಿಗ್ ಶಾಕಿಂಗ್! ದೇಶದಲ್ಲಿ ಒಂದೇ ದಿನ 6,148 ಜನರು ಕೊರೊನಾಗೆ ಬಲಿ, ವಿಶ್ವದಲ್ಲೇ ಮೊದಲು
ಸಹ ಪ್ರಯಾಣಿಕರಲ್ಲಿ ಓರ್ವ ಕೋವಿಡ್ ರೋಗಿ ಇದ್ದರೆ ಆಟೋದಲ್ಲಿ ಹೋಗುವುದಕ್ಕಿಂತ ಎಸಿ(ಹವಾ ನಿಯಂತ್ರಿತ) ಕಾರಿನಲ್ಲಿ ಹೋದಾಗ ವೈರಸ್ ತಗುಲುವ ಸಾಧ್ಯತೆ ಶೇ 300 ರಷ್ಟು ಇರುತ್ತದೆ ಎಂದು ಈ ಅಧ್ಯಯನ ಎಚ್ಚರಿಸುತ್ತದೆ.
ಅಧ್ಯಯನ ಹೇಗೆ?
ಪರಿಶೀಲನೆ ನಡೆಸಿದ ವಾಹನಗಳು:
ಆಟೋ, ನಾನ್ ಎಸಿ ಕಾರು, ಎಸಿ ಕಾರು ಹಾಗು ಬಸ್ಸು
ಯಾವ ವಾಹನದಲ್ಲಿ ಎಷ್ಟು ಜನ?: