ಕರ್ನಾಟಕ

karnataka

ETV Bharat / bharat

ವೀರ ವರ್ಮ ಪರಶಿರಾಜರ ಕಹಾನಿ.. ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಇವರದ್ದೊಂದು ಶೌರ್ಯದ ಅಧ್ಯಾಯ.. - The riots in Kerala's Wayanad under the leadership of Pazhassiraja

ಕೇರಳದ ಮಲಬಾರ್ ಪ್ರದೇಶದಲ್ಲಿ ಸ್ವಾತಂತ್ರ್ಯ ಕ್ರಾಂತಿಯನ್ನು ಮುನ್ನಡೆಸಿದ ಕೆಚ್ಚೆದೆಯ ಯೋಧ ಕೇರಳದ ವರ್ಮ ಪರಶಿರಾಜ(Pazhassiraja) ಆಂಗ್ಲರ ನಿದ್ದೆಗೆಡಿಸಿದ್ದರು. ಅವರ ಹೋರಾಟಗಳನ್ನು ಗುರುತಿಸಲು ವೀರ ಪರಶಿರಾಜರ ಎರಡು ಸ್ಮಾರಕಗಳು ವಯನಾಡಿನಲ್ಲಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪರಶಿರಾಜರ ಕೆಚ್ಚೆದೆಯ ಹೋರಾಟ ಮಾತ್ರ ಎಂದೆಂದಿಗೂ ಅಜಾರಾಮರ..

ವೀರ ವರ್ಮ ಪರಶಿರಾಜರ ಕಹಾ
ವೀರ ವರ್ಮ ಪರಶಿರಾಜರ ಕಹಾ

By

Published : Sep 25, 2021, 6:10 AM IST

ಬ್ರಿಟಿಷ್ ಪ್ರಾಬಲ್ಯದಿಂದ ತಾಯ್ನಾಡನ್ನು ಮುಕ್ತಗೊಳಿಸಲು ಯುದ್ಧ ಮಾಡಿದ ಆಡಳಿತಗಾರರು ಮತ್ತು ಹೋರಾಟಗಾರರ ಸಾಹಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೇರಳದ ಮಲಬಾರ್ ಪ್ರದೇಶದಲ್ಲಿ ಸ್ವಾತಂತ್ರ್ಯ ಕ್ರಾಂತಿಯನ್ನು ಮುನ್ನಡೆಸಿದ ಕೆಚ್ಚೆದೆಯ ಯೋಧ ಕೇರಳದ ವರ್ಮ ಪರಶಿರಾಜ(Pazhassiraja) ಆಂಗ್ಲರ ನಿದ್ದೆಗೆಡಿಸಿದ್ದರು. ಕೇರಳದ ವಯನಾಡಿನಲ್ಲಿ ಪರಶಿರಾಜ(Pazhassiraja)ರ ನೇತೃತ್ವದಲ್ಲಿ ನಡೆದ ಹೋರಾಟಗಳು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದಲ್ಲಿ ಒಂದು ಶೌರ್ಯ ಅಧ್ಯಾಯವಾಗಿದೆ.

ಅವರ ಹೋರಾಟಗಳನ್ನು ಗುರುತಿಸಲು ವೀರ ಪರಶಿರಾಜರ ಎರಡು ಸ್ಮಾರಕಗಳು ವಯನಾಡಿನಲ್ಲಿವೆ. ಪರಶಿರಾಜ ಹುತಾತ್ಮರಾದ ಪುಲ್ಪಳ್ಳಿ ಮಾವಿಲಮತ್ತೋಡು ದಡದಲ್ಲಿರುವ ಸ್ಮಾರಕ ಸ್ತೂಪ ಮತ್ತು ಮಾನಂತವಾಡಿಯಲ್ಲಿರುವ ಸಮಾಧಿಯು ಅವರ ಅಪ್ರತಿಮ ಹೋರಾಟದ ಕಥೆಗಳನ್ನು ನೆನಪಿಸುತ್ತವೆ.

ವೀರ ವರ್ಮ ಪರಶಿರಾಜರ ಕಹಾ

ನಾಯರ್ ಸೈನಿಕರು ಮತ್ತು ಕುರಿಚ್ಯಾ ಸೈನಿಕರ ಸಹಾಯದಿಂದ ಪರಶಿರಾಜ ನಡೆಸಿದ ಗೆರಿಲ್ಲಾ ಯುದ್ಧ ಸ್ವಾತಂತ್ರ್ಯ ಸಮರದ ಮರೆಯದ ಅಧ್ಯಾಯವಾಗಿದೆ. ಕನ್ನವಂ ಮತ್ತು ವಯನಾಡಿನ ಕಾಡುಗಳು ಬ್ರಿಟಿಷರ ವಿರುದ್ಧದ ಈ ಪ್ರತಿರೋಧಕ್ಕೆ ಸಾಕ್ಷಿಯಾದವು. ಬ್ರಿಟಿಷ್ ಸೈನ್ಯದ ಬಂದೂಕುಗಳು ಮತ್ತು ಮದ್ದುಗುಂಡುಗಳ ಎದುರಿಗೆ ಉಗ್ರ ಹೋರಾಟ ನಡೆಸಿದರು ವೀರ ಪರಶಿರಾಜ.

1805 ರಲ್ಲಿ ಕೇರಳ-ಕರ್ನಾಟಕ ಗಡಿ ಸಮೀಪದ ಮಾವಿಲಮತ್ತೋಡು ನದಿಯ ದಡದಲ್ಲಿ ಪರಶಿರಾಜ ಅಸುನೀಗಿದರು. ಆದರೆ, ಅವರ ಸಾವಿನ ಬಗ್ಗೆ ಕೇರಳದಲ್ಲಿ ಎರಡು ಕಥೆಗಳಿವೆ. ಬ್ರಿಟಿಷ್ ಸೇನೆಗೆ ಸೆರೆಯಾಗಬಾರದೆಂಬ ಉದ್ದೇಶದಿಂದ ಅವರು ವಜ್ರದ ಉಂಗುರವನ್ನು ನುಂಗಿ ಪ್ರಾಣತ್ಯಾಗ ಮಾಡಿದರು ಎಂದು ಒಂದು ಗುಂಪು ಹೇಳಿಕೊಂಡಿದೆ. ಇನ್ನೂ ಸ್ವಲ್ಪ ಜನ ಅವರನ್ನು ಬ್ರಿಟಿಷರು ಗುಂಡಿಟ್ಟು ಕೊಂದರು ಎಂದು ಹೇಳುತ್ತಾರೆ.

ಪರಶಿರಾಜ(Pazhassiraja)ರ ಸೇನಾಧಿಪತಿಗಳಾದ ತಳಕ್ಕಲ್ ಚಂತು ಮತ್ತು ಎಡಚೇನ ಕುಂಕನ್ ಅವರ ಸ್ಮಾರಕಗಳು ಇನ್ನೂ ನಿರ್ಮಾಣಗೊಂಡಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪರಶಿರಾಜರ ಕೆಚ್ಚೆದೆಯ ಹೋರಾಟ ಮಾತ್ರ ಎಂದೆಂದಿಗೂ ಅಜಾರಾಮರ.

ABOUT THE AUTHOR

...view details