ಮಧುರೈ(ತಮಿಳುನಾಡು): ಕಾರ್ತಿಗೈ ದೀಪಂ, ಮುಹೂರ್ತಂ ಹಬ್ಬಗಳು ಬರುತ್ತಿದ್ದು, ದಿಂಡಿಗಲ್ ಮತ್ತು ಮಧುರೈ ಮಟ್ಟುತಾವಣಿ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಬೆಲೆ ಏರಿಕೆಯಾಗಿದೆ.
ಪೆರಾರಿಂಜರ್ ಅಣ್ಣಾ ಮಾರುಕಟ್ಟೆಯು ದಿಂಡಿಗಲ್ ನಗರದಲ್ಲಿದ್ದು, ಇಲ್ಲಿಗೆ ರೈತರು ದಿಂಡಿಗಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ವೆಲ್ಲೋಡು, ನರಸಿಂಗಪುರ, ಕಲ್ಲುಪಟ್ಟಿ, ರೆಡ್ಯಾರ್ಛತ್ರಂ, ಮುತಾನಂ ಪಟ್ಟಿಗಳಲ್ಲಿ ಬೆಳೆದ ಹೂಗಳನ್ನು ತರುತ್ತಾರೆ. ಮಧುರೈ ಮಟ್ಟುತಾವಣಿ ಹೂವಿನ ಮಾರುಕಟ್ಟೆಯಲ್ಲಿ 50 ಟನ್‌ಗೂ ಹೆಚ್ಚು ಮಲ್ಲಿಗೆಗಳು ಮಾರಾಟವಾಗುತ್ತಿದೆ. ಇಲ್ಲಿಗೆ ಮಧುರೈ ಸೇರಿದಂತೆ ರಾಮನಾಥಪುರಂ, ದಿಂಡಿಗಲ್, ಥೇಣಿ, ವಿರುದುನಗರ ಮತ್ತು ಶಿವಗಂಗಾದಿಂದ ಹೂವುಗಳು ಬರುತ್ತವೆ.
ಆದರೆ, ಕೆಲವು ದಿನಗಳಿಂದ ದಿಂಡಿಗಲ್ ಮತ್ತು ಮಧುರೈ ಜಿಲ್ಲೆಗಳಲ್ಲಿ ಹೆಚ್ಚು ಮಂಜಿನಿಂದಾಗಿ ಮಲ್ಲಿಗೆ ಹೂವುಗಳ ಇಳುವರಿಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಹೀಗಾಗಿ ಹೂವಿನ ಮಾರುಕಟ್ಟೆಗೆ ಮಲ್ಲಿಗೆ ಹೂವು ಬರುವುದು ಕಡಿಮೆಯಾಗಿದೆ. ಹಬ್ಬದ ನಿಮಿತ್ತವೂ ಮಧುರೈ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಬೆಲೆ 3500 ರೂಪಾಯಿಯಾಗಿದ್ದು, ದಿಂಡಿಗಲ್ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವು 5000 ರೂ.ಗೆ ಮಾರಾಟವಾಗುತ್ತಿದೆ.
ಅಲ್ಲದೇ ಜಾಜಿ ಮಲ್ಲಿಗೆ ರೂ.1,500, ದುಂಡು ಮಲ್ಲಿಗೆ ರೂ.1500, ಸುಗಂಧರಾಜ ರೂ.300, ಚೆಂಡು ಮಲ್ಲಿಗೆ ರೂ.80, ಬಟನ್ ರೋಸ್ ರೂ.250 ಸೇರಿದಂತೆ ಇತರೆ ಹೂವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮುಂದಿನ ಕೆಲ ದಿನಗಳ ಕಾಲ ಇದೇ ಬೆಲೆ ಮುಂದುವರೆಯಲಿದೆ.
ಇದನ್ನೂ ಓದಿ:ಮೂವರು ಹೆಣ್ಮಕ್ಕಳು ವಿದ್ಯಾಭ್ಯಾಸದಲ್ಲಿ ಟಾಪರ್.. ಕಡು ಬಡತನಕ್ಕೆ ನಲುಗಿದ ಅಕ್ಕ- ತಂಗಿಯರು!