ಹೈದರಾಬಾದ್ (ತೆಲಂಗಾಣ):ಬಡತನದಿಂದ ಬಳಲುವ, ಕೌಟುಂಬಿಕ ದೌರ್ಜನ್ಯದಿಂದ ನರಳುವ, ಗಂಡನ ಕಳೆದುಕೊಂಡು ಅಸಹಾಯಕರಾಗುವ ಮಹಿಳೆಯವರಿಗೆ ಹೈದರಾಬಾದ್ನ ರುಬಿನಾ ಎಂಬ ಮಹಿಳೆ ಮಹಾ ಶಕ್ತಿಯಾಗಿ ನಿಂತಿದ್ದಾರೆ. ಜೀವನದಲ್ಲಿ ಬೆಂದ ಸಾವಿರಾರು ಮಹಿಳೆಯರಿಗೆ ಪಾಲಿಗೆ ಆಸರೆಯಾಗಿದ್ದಾರೆ. ಆ ಮಹಿಳೆಯರಿಗೆ ಉದ್ಯೋಗದ ತರಬೇತಿ ನೀಡಿ ಅವರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿರುವ ರುಬಿನಾ, ತಮ್ಮ ಅನುಭವಗಳನ್ನು 'ಈಟಿವಿ ಭಾರತ್' ಜೊತೆ ಹಂಚಿಕೊಂಡಿದ್ದಾರೆ.
ಯಾರು ಈ ರುಬಿನಾ?:ಒಬ್ಬ ಸೇನಾಧಿಕಾರಿಯಾದ ಪುತ್ರಿಯಾದ ರುಬಿನಾ, ದೇಶದ ಅನೇಕ ಭಾಗಗಳಲ್ಲಿ ಓದಿ ಬೆಳೆದರು. ಓದುವ ಸಮಯದಲ್ಲೇ ಬಡ ಮಹಿಳೆಯರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಇವರು, ನಂತರ ಪ್ರವಾಸೋದ್ಯಮ ಮತ್ತು ಪ್ರಯಾಣ ಹಾಗೂ ಸಾಮಾಜಿಕ ಉದ್ಯಮಶೀಲತೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಅಲ್ಲದೇ, ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದಲ್ಲಿ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿರುವ ರುಬಿನಾಗೆ ಯಾವುದೂ ತೃಪ್ತಿಕರವಾಗಿರಲಿಲ್ಲ. ಆದ್ದರಿಂದ ಅವರು ಭಾರತಕ್ಕೆ ಮರಳಿದರು. ಸ್ವಲ್ಪ ಸಮಯದ ನಂತರ ಅವರು ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು.
ಇದರ ಭಾಗವಾಗಿಯೇ ಅವರು ವಿಶೇಷವಾಗಿ ಅಲ್ಪಸಂಖ್ಯಾತ ಮಹಿಳೆಯರ ಸ್ಥಿತಿಯನ್ನು ಅಧ್ಯಯನ ಮಾಡಲು ಹೈದರಾಬಾದ್ನಲ್ಲಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಿದರು. ಕುಟುಂಬದವರು ಸೇರಿದಂತೆ ಹಲವರ ವಿರೋಧದ ನಡುವೆಯೂ ಮಹಿಳೆಯರ ಸಬಲೀಕರಣಕ್ಕಾಗಿ ಸಫಾ ಎಂಬ ಸಂಸ್ಥೆಯನ್ನು ಆರಂಭಿಸಿ ಮಹಿಳಾ ಸಬಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿದ್ದಾರೆ.
ಕಷ್ಟಗಳ ಮೇಲೆ ಕಷ್ಟಗಳು: ಅಶಕ್ತ ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಸಂಸ್ಥೆಯಾದ ಸಫಾ ಸ್ಥಾಪಿಸಿದೆ. ಸಫಾ ಎಂದರೆ ಶುದ್ಧತೆ, ಸ್ಥಿರತೆ ಎಂಬ ಅರ್ಥ. ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪಯತ್ನಿಸಿದಾಗ ಸಂಪ್ರದಾಯಗಳು ಮತ್ತು ವಿವಿಧ ನಿರ್ಬಂಧಗಳೇ ಅವರಿಗೆ ತೊಡಕಾಗಿದ್ದವು. ಕೆಲವು ಪುರುಷರು ಬಂದು ಜಗಳವಾಡುತ್ತಿದ್ದರು... ನಮ್ಮ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುವುದಾಗಿ ದೂರುತ್ತಿದ್ದರು ಎಂದು ರುಬಿಯಾ ಸ್ಮರಿಸಿದರು.