ಕರ್ನಾಟಕ

karnataka

ETV Bharat / bharat

ಜಮೀನಿನಲ್ಲಿ ತರಬೇತಿ ವಿಮಾನ ಪತನ.. ಯುವ ಮಹಿಳಾ ಪೈಲಟ್​ಗೆ ಗಾಯ - ಮಹಾರಾಷ್ಟ್ರ ವಿಮಾನ ಪತನ ಸುದ್ದಿ

ಜಮೀನಿನಲ್ಲಿ ತರಬೇತಿ ವಿಮಾನ ಪತನ- ಮಹಿಳಾ ಪೈಲಟ್​​ಗೆ ಗಾಯ- ಪುಣೆ ಜಿಲ್ಲೆಯಲ್ಲಿ ದುರ್ಘಟನೆ

The plane crashed in Indapur, The plane crashed in Maharashtra, Maharashtra plane crashed news, Maharashtra news, ಇಂದಾಪುರದಲ್ಲಿ ವಿಮಾನ ಪತನ, ಮಹಾರಾಷ್ಟ್ರದಲ್ಲಿ ವಿಮಾನ ಪತನ, ಮಹಾರಾಷ್ಟ್ರ ವಿಮಾನ ಪತನ ಸುದ್ದಿ, ಮಹಾರಾಷ್ಟ್ರ ಸುದ್ದಿ,
ಯಂಗ್​ ಲೇಡಿ ಪೈಲಟ್​ಗೆ ಗಾಯ

By

Published : Jul 25, 2022, 1:43 PM IST

Updated : Jul 25, 2022, 2:27 PM IST

ಪುಣೆ(ಮಹಾರಾಷ್ಟ್ರ): ಬಾರಾಮತಿ ವಿಮಾನ ನಿಲ್ದಾಣದಿಂದ ಬೆಳಗ್ಗೆ ಟೇಕಾಫ್ ಆಗಿದ್ದ ತರಬೇತಿ ವಿಮಾನ ಇಂದಾಪುರ ತಾಲೂಕಿನ ಕಡಬನವಾಡಿ ಬಳಿ ಪತನಗೊಂಡಿದೆ. ವಿಮಾನ ಪತನಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬಾರಾಮತಿಯಲ್ಲಿ ಕಾರ್ವರ್ ಏವಿಯೇಷನ್ ​​ಮೂಲಕ ಮಹಿಳಾ ಪೈಲಟ್​ಗೆ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಜಮೀನಿನಲ್ಲಿ ಪತನಗೊಂಡ ವಿಮಾನ

ಇಂದು ಬೆಳಗ್ಗೆ ಬಾರಾಮತಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನವು ಕಡಬನವಾಡಿಯ ರೈತ ಬರ್ಹಟೆ ಎಂಬುವರ ಹೊಲದಲ್ಲಿ ಹಠಾತ್ತನೆ ಪತನಗೊಂಡಿದೆ. ಘಟನೆಯ ಮಾಹಿತಿ ತಿಳಿದ ನೆರೆಯ ಪೊಂಡಾಕುಲೆ ಬಡಾವಣೆಯ ಯುವಕರು ಸ್ಥಳಕ್ಕಾಗಮಿಸಿ ಮಹಿಳಾ ಪೈಲಟ್‌ ಅವರನ್ನು ರಕ್ಷಿಸಿದ್ದಾರೆ. ಮಹಿಳಾ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನದ ಉಳಿದ ಭಾಗಕ್ಕೆ ಹಾನಿಯಾಗಿದೆ. ಸುದ್ದಿ ತಿಳಿದಾಕ್ಷಣ ಅಧಿಕಾರಿಗಳು ಮತ್ತು ನೌಕರರ ತಂಡ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಓದಿ:ಶಿವ ಭಕ್ತರ ಮೇಲೆ ಪುಷ್ಪವೃಷ್ಟಿಯಿಂದ ಸ್ವಾಗತ: ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ

Last Updated : Jul 25, 2022, 2:27 PM IST

ABOUT THE AUTHOR

...view details