ಕರ್ನಾಟಕ

karnataka

ETV Bharat / bharat

ಕೌಟುಂಬಿಕ ಕಲಹ : ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ನೇಣು ಬಿಗಿದುಕೊಂಡ ವ್ಯಕ್ತಿ - ಈಟಿವಿ ಭಾರತ ಕನ್ನಡ

ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​ನ ಭಾಮಿಯಾನ್​ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ವ್ಯಕ್ತಿ ತನ್ನ ಸಾವಿಗೆ ಅತ್ತೆ ಮನೆಯವರೇ ಕಾರಣ ಎಂದು ದೂರಿದ್ದಾರೆ.

the-person-hanged-himself-accused-on-a-in-laws-in-video-made-before-suicide-in-ludhiana
ಕೌಟುಂಬಿಕ ಕಲಹ : ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ನೇಣುಬಿಗಿದುಕೊಂಡ ವ್ಯಕ್ತಿ

By

Published : Oct 5, 2022, 5:47 PM IST

ಲೂಧಿಯಾನ (ಪಂಜಾಬ್​): ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲೂಧಿಯಾನದ ಭಾಮಿಯಾನ್​ನಲ್ಲಿ ನಡೆದಿದೆ. ದೀಪಕ್​ ಜೇಕಬ್​ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಅತ್ತೆಯ ಮನೆಯವರೇ ಕಾರಣ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆಗೆ ಆತ್ಮಹತ್ಯೆಗೂ ಮುನ್ನ ಡೆತ್​ ನೋಟ್​ ಬರೆದಿರುವುದು ಪತ್ತೆಯಾಗಿದೆ.

ಡೆತ್​ ನೋಟ್​

ದೀಪಕ್​ ಮಾಡಿರುವ ವಿಡಿಯೋದಲ್ಲಿ ಇದರಲ್ಲಿ ನನ್ನ ಕುಟುಂಬದವರದ್ದೂ ಏನೂ ತಪ್ಪಿಲ್ಲ. ನನ್ನ ಅತ್ತೆ ಮನೆಯವರು ನನ್ನಿಂದ ನನ್ನ ಮಗಳನ್ನು ಕಿತ್ತುಕೊಂಡಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೆತ್​ ನೋಟ್​ನಲ್ಲಿ, ನನ್ನ ಸಾವಿಗೆ ಪತ್ನಿ, ಅತ್ತೆ ಮತ್ತು ಇನ್ನೊಬ್ಬ ವ್ಯಕ್ತಿ ಕಾರಣ ಎಂದು ಬರೆದಿದ್ದಾನೆ. ಈ ಆತ್ಮಹತ್ಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು , ಆತ್ಮಹತ್ಯೆಗೆ ಮುನ್ನ ಮಾಡಿರುವ ವಿಡಿಯೋ ಹಾಗೂ ಡೆತ್​ನೋಟ್​ನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತ ದೀಪಕ್​ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೂಧಿಯಾನ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ದೀಪಕ್ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ, ಅವನ ಹೆಂಡತಿ ಸುಮನ್ ತನ್ನ ಮಗಳನ್ನು ಅವಳ ಹೆತ್ತವರ ಮನೆಗೆ ಮದುವೆ ಮಾಡಿಕೊಟ್ಟಿದ್ದು, ಇದರಿಂದ ಅವನು ತುಂಬಾ ವಿಚಲಿತನಾಗಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಕಾಶ್ಮೀರದಲ್ಲಿ ಆಜಾನ್‌ ಕೇಳಿ ಭಾಷಣ ನಿಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ABOUT THE AUTHOR

...view details