ಕರ್ನಾಟಕ

karnataka

ETV Bharat / bharat

ಗುಜರಾತ್​ನಲ್ಲಿ ದೇಶದ ಮೊದಲ ತ್ರಿಪಥ ಮೇಲ್ಸೇತುವೆ ರಸ್ತೆ ನಾಳೆ ಉದ್ಘಾಟನೆ

ದೇಶದಲ್ಲಿಯೇ ಮೊದಲ ತ್ರಿಪಥ ಮೇಲ್ಸೇತುವೆ ರಸ್ತೆ ಗುಜರಾತ್​ನ ಸೂರತ್​ನಲ್ಲಿ ನಾಳೆ ಉದ್ಘಾಟನೆ ಕಾಣಲಿದೆ..

ಗುಜರಾತ್​ನಲ್ಲಿ ದೇಶದ ಮೊದಲ ತ್ರಿಪಥ ಮೇಲ್ಸೇತುವೆ ರಸ್ತೆ ನಾಳೆ ಉದ್ಘಾಟನೆ
ಗುಜರಾತ್​ನಲ್ಲಿ ದೇಶದ ಮೊದಲ ತ್ರಿಪಥ ಮೇಲ್ಸೇತುವೆ ರಸ್ತೆ ನಾಳೆ ಉದ್ಘಾಟನೆ

By

Published : Jun 18, 2022, 8:27 PM IST

ಸೂರತ್​(ಗುಜರಾತ್​) :ಸೂರತ್​ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ದೇಶದಲ್ಲಿಯೇ ಮೊದಲ ಮೂರು ಪಥದ ಫ್ಲೈಓವರ್​ ಮತ್ತು ರೈಲ್​ರೋಡ್​ ಓವರ್​ ಬ್ರಿಡ್ಜ್​ ಕಾಮಗಾರಿ ಪೂರ್ಣಗೊಂಡಿದೆ. ನಾಳೆ (ಜೂನ್‌ 19) ಉದ್ಘಾಟನೆಯಾಗಲಿದೆ. ಈ ಮೂಲಕ ಜನರ ಸೇವೆಗೆ ಲಭ್ಯವಾಗಲಿದೆ.

ಗುಜರಾತ್​ನಲ್ಲಿ ದೇಶದ ಮೊದಲ ತ್ರಿಪಥ ಮೇಲ್ಸೇತುವೆ ರಸ್ತೆ ನಾಳೆ ಉದ್ಘಾಟನೆ..

ಈ ವಿಶೇಷ ಮೇಲ್ಸೇತುವೆಯನ್ನು 133 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಹಾರಾ ಗೇಟ್ ಅನ್ನು ದಾಟುವ ಬಹುಪಥದ ಮೇಲ್ಸೇತುವೆ ರಸ್ತೆ, ರಿಂಗ್​ ರೋಡ್​ ಕೂಡ ಪೂರ್ಣಗೊಂಡಿದೆ. ಈ ಮೂರು ಏಕಕಾಲಕ್ಕೆ ಉದ್ಘಾಟನೆ ಕಾಣಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್​. ಪಾಟೀಲ್​, ನಗರಾಭಿವೃದ್ಧಿ ಸಚಿವ ವಿನು ಮೋರ್ದಿಯಾ, ಸಚಿವರಾದ ದರ್ಶನಾ ಜಾರ್ದೋಶ್​ ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಎರಡು ಮೇಲ್ಸೇತುವೆ ರಸ್ತೆಗಳು ಪೂರ್ಣಗೊಂಡ ನಂತರ ಸುಮಾರು 1.5 ಮಿಲಿಯನ್ ಜನರು ನಿರಾಳರಾಗಲಿದ್ದಾರೆ. ರಿಂಗ್ ರೋಡ್ ಸೇತುವೆಯನ್ನು 25 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಅಂದಿನಿಂದ ಅತಿ ಹೆಚ್ಚು ಕಾರುಗಳು ಮತ್ತು ಜವಳಿ ಮಾರುಕಟ್ಟೆಗಳ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ದಟ್ಟಣೆಯು ಹೆಚ್ಚಾಗಿದೆ. ಹೀಗಾಗಿ, ಬಹುಪಥದ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಓದಿ:ಧೈರ್ಯಶಾಲಿ ಬಾಲೆ : ಬಲಾತ್ಕಾರಕ್ಕೆ ಯತ್ನಿಸಿದ ಕಾಮುಕನನ್ನ ಹಿಮ್ಮೆಟ್ಟಿಸಿದ ಎಂಟು ವರ್ಷದ ಬಾಲಕಿ!

For All Latest Updates

TAGGED:

ABOUT THE AUTHOR

...view details