ಕರ್ನಾಟಕ

karnataka

ETV Bharat / bharat

1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಕರಾಚಿಯಲ್ಲಿ ಹೃದಯಾಘಾತದಿಂದ ಸಾವು - ಬಾಂಬ್ ಸ್ಫೋಟದ ಆರೋಪಿ ಹೃದಯಾಘಾತದಿಂದ ಸಾವು

ಕಳೆದ ಹಲವು ದಿನಗಳಿಂದ ಅಧಿಕ ರಕ್ತದೊತ್ತಡ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಮುಂಬೈ ಸ್ಫೋಟದ ಆರೋಪಿ ಶನಿವಾರ ಸಾವಿಗೀಡಾಗಿದ್ದಾನೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಸಲೀಂ ಘಾಜಿ, ಛೋಟಾ ಶಕೀಲ್, ದಾವೂದ್ ಇಬ್ರಾಹಿಂ, ಟೈಗರ್ ಮೆನನ್ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

Saleem Ghazi accused of bomb blast
Saleem Ghazi accused of bomb blast

By

Published : Jan 16, 2022, 8:59 PM IST

ಮುಂಬೈ: ಮುಂಬೈ 1993 ರ ಬಾಂಬ್ ಸ್ಫೋಟದ ಆರೋಪಿ ಸಲೀಂ ಗಾಜಿ ಕರಾಚಿಯಲ್ಲಿ ನಿಧನವಾಗಿದ್ದಾನೆ ಎಂದು ತಿಳಿದುಬಂದಿದೆ. ಡಾನ್ ಛೋಟಾ ಶಕೀಲ್‌ಗೆ ಆಪ್ತ ಎನ್ನಲಾದ ಸಲೀಂ ಘಾಜಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಈಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ದಾಳಿಯ ನಂತರ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರರೊಂದಿಗೆ ಈತ ತಪ್ಪಿಸಿಕೊಂಡಿದ್ದ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದನು. ಆ ವೇಳೆ ದುಬೈನಲ್ಲೂ ವಾಸವಾಗಿದ್ದು, ನಂತರ ಪಾಕಿಸ್ತಾನದಲ್ಲಿ ಛೋಟಾ ಶಕೀಲ್ ನ ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ.

ಕಳೆದ ಹಲವು ದಿನಗಳಿಂದ ಅಧಿಕ ರಕ್ತದೊತ್ತಡ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಈತ ಶನಿವಾರ ಸಾವಿಗೀಡಾಗಿದ್ದಾನೆ. ಮುಂಬೈ ಸ್ಫೋಟದಲ್ಲಿ ಸಲೀಂ ಘಾಜಿ, ಛೋಟಾ ಶಕೀಲ್, ದಾವೂದ್ ಇಬ್ರಾಹಿಂ, ಟೈಗರ್ ಮೆನನ್ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ:ಕಾಶ್ಮೀರ ಪ್ರೆಸ್ ಕ್ಲಬ್‌ ಸ್ವಾಧೀನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್

ದಾಳಿಯಲ್ಲಿ ಸುಮಾರು 250 ಜನರು ಸಾವನ್ನಪ್ಪಿದ್ದರು ಮತ್ತು 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಲೀಂ ಘಾಜಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ಇಂಟರ್‌ಪೋಲ್ ಆತನನ್ನು ಬಂಧಿಸಲು ಪ್ರಯತ್ನಿಸಿತ್ತು. ಆದರೆ, ಅವನು ತನ್ನ ಸ್ಥಳಗಳನ್ನು ಬದಲಾಯಿಸುತ್ತಿದ್ದರಿಂದ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಇವನ ಇತರ ಸಹಚರರು ಸಹ ಇದೇ ತಂತ್ರದಿಂದ ತಲೆಮರೆಸಿಕೊಂಡಿದ್ದಾರೆ.

ABOUT THE AUTHOR

...view details