ಮಹಾರಾಷ್ಟ್ರ: ಕೊರೊನಾ ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಗಳ ಶವಗಳನ್ನು ವಿಲೇವಾರಿ ಮಾಡಲು ಫಾಲ್ಟನ್ನಲ್ಲಿ ಕಾಯ್ದಿರಿಸಿದ ಸ್ಮಶಾನವಿದ್ದು ಇಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಅರ್ಧ ಸುಟ್ಟ ಶವ ತಿಂದಿದ್ದಾನೆ.
ಘಟನೆ ಸಂಬಂಧ ಸಂಜೆ ನಗರದ ಜಿಂಟಿ ನಾಕಾ ಪ್ರದೇಶದಿಂದ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತ ಹಿಂದಿ ಮಾತನಾಡುತ್ತಿದ್ದು, ಹೆಸರು ಅಥವಾ ಆತನ ಊರಿನ ಬಗ್ಗೆ ಮಾಹಿತಿ ಇಲ್ಲ. ಫಾಲ್ಟನ್ ಪುರಸಭೆಯ ನೌಕರರು ಆತನನ್ನು ಕಂಡು ಮನೋವೈದ್ಯರಿಗೆ ಒಪ್ಪಿಸಿದ್ದಾರೆ. ವೈದ್ಯಕೀಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾದಿಂದ ಸತ್ತ ವ್ಯಕ್ತಿಯ ಸುಟ್ಟ ಶವ ತಿಂದ ಮಾನಸಿಕ ಅಸ್ವಸ್ಥ ಆತ ಅರ್ಧ ಸುಟ್ಟ ಶವವನ್ನು ತಿನ್ನುತ್ತಿದ್ದ ಹಿನ್ನೆಲೆ ಈ ಸಂಬಂಧ ಫಲ್ತಾನ್ ಬಳಿಯ ಕೋಲಾಕಿ ಗ್ರಾಮ ಪಂಚಾಯಿತಿಯ ಈ ಸ್ಮಶಾನವನ್ನು ಮಹಾನಗರ ಪಾಲಿಕೆ ಸ್ವಾಧೀನಪಡಿಸಿಕೊಂಡಿದೆ. ತಾಲ್ಲೂಕಿನಲ್ಲಿರುವ ಕೊರೊನಾ ಸಂತ್ರಸ್ತರ ಶವಗಳನ್ನು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಶವ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.
ಘಟನೆ ಸಂಬಂಧ ಈಟಿವಿ ಭಾರತ ಜೊತೆ ಮಾತನಾಡಿದ ಫಲ್ತಾನ್ ಮಹಾನಗರ ಪಾಲಿಕೆಯ ಮುಖ್ಯಸ್ಥ ಪ್ರಸಾದ್ ಕಟ್ಕರ್, ವೈದ್ಯಕೀಯ ವರದಿಯನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅವನನ್ನು ಪತ್ತೆ ಹಚ್ಚಿ ಸಂಜೆ ಸೆರೆಹಿಡಿಯಲಾಗಿದೆ. ಆತನ ಚಿಕಿತ್ಸೆಗಾಗಿ ಫಾಲ್ಟನ್‌ನಲ್ಲಿರುವ ಮನೋವೈದ್ಯರ ಬಳಿ ಕಳುಹಿಸಲಾಗಿದೆ. ವೈದ್ಯಕೀಯ ವರದಿಯನ್ನು ಪಡೆದ ನಂತರ ಮತ್ತಷ್ಟು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.