ಮುಂಬೈ: ಕೊರೊನಾ ಮಹಾಮಾರಿಯ ಅವಧಿಯಲ್ಲಿ ಮುಂಬೈನ ಜನತೆಗೆ ನೀಡಿದ ವಿಶೇಷ ಸೇವೆಗಾಗಿ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಅವರಿಗೆ "ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್" ಪ್ರಶಸ್ತಿ ಲಭಿಸಿದೆ.
'ನಾವು ಕಿಶೋರಿಯವರ ಕೆಲಸದ ಬಗ್ಗೆ ಹೆಮ್ಮೆ ಪಡುತ್ತೇವೆ. ಅವರು ಎಲ್ಲ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ. ಕೊರೊನಾ ಅವಧಿಯಲ್ಲಿ ಅವರ ಕೆಲಸದ ನೀತಿ ಮತ್ತು ಉತ್ಸಾಹದಿಂದ ನಾವು ಪ್ರೇರಿತರಾಗಿದ್ದೇವೆ ಮತ್ತು ಅವರ ಕೆಲಸವನ್ನು ಗುರುತಿಸಲು ನಮಗೆ ಸಂತಸವಿದೆ' ಎಂದು ಫರಾ ಸುಲ್ತಾನ್ ಅಹ್ಮದ್ ಹೇಳಿದರು. ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಅಲಿ ಅಕ್ಬರ್ ಅಲಿ ಅಬ್ಬಾಸ್ ಉಪಸ್ಥಿತರಿದ್ದರು.
ಮುಂಬೈ ಮೇಯರ್‌ಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ಗೌರವ ಮೇಯರ್ ಕರ್ತವ್ಯ ನಿಷ್ಠೆ:
ಶಿವಸೇನೆ ಕಾರ್ಪೋರೇಟರ್ ಕಿಶೋರಿ ಪೆಡ್ನೇಕರ್ ಅವರನ್ನು ಮೇಯರ್ ಆಗಿ ನೇಮಿಸಿದ ಸ್ವಲ್ಪ ಸಮಯದ ನಂತರ, ಕೊರೊನಾ ಹಾವಳಿ ಶುರುವಾಯಿತು. ಕೊರೊನಾ ಹರಡುವುದನ್ನು ತಡೆಗಟ್ಟಲು, ಪಿಪಿಇ ಕಿಟ್‌ಗಳನ್ನು ಧರಿಸಿ ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆಯೇ ಎಂಬುದನ್ನು ಅರಿಯಲು ಖುದ್ದು ಮೇಯರ್ ಕಿಶೋರಿ ಫೀಲ್ಡಿಗಿಳಿಯುತ್ತಿದ್ದರು.
ಆಸ್ಪತ್ರೆಯ ದಾದಿಯರು ಮತ್ತು ಇತರ ಸಿಬ್ಬಂದಿಯ ಮನೋಸ್ಥೈರ್ಯವನ್ನು ಹೆಚ್ಚಿಸಲು ಮೇಯರ್ ನರ್ಸ್ ಸಮವಸ್ತ್ರ ಧರಿಸಿದ್ದರು. ರೋಗಿಗಳು ಮತ್ತು ನಾಗರಿಕರನ್ನು ನೋಡಿಕೊಳ್ಳಲು ಮೇಯರ್ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರು.
ಆದರೆ ಹೀಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಮೇಯರ್ ಕಿಶೋರಿ ಅವರಿಗೆ ಕೊರೊನಾ ಮಹಾಮಾರಿ ವಕ್ಕರಿಸಿತು. ಇದರಿಂದ ಎದೆಗುಂದದ ಕಿಶೋರಿ ಕೋವಿಡ್ನಿಂದ ಗುಣಮುಖರಾದ ಬಳಿಕ ಪುನಃ ತಮ್ಮ ಕೆಲಸ ಮುಂದುವರೆಸಿದ್ದರು. ಮೇಯರ್ ಒಬ್ಬರ ಈ ಸರಳತನ ಮತ್ತು ಕರ್ತವ್ಯನಿಷ್ಠೆ ಮುಂಬೈ ನಗರದ ಜನರ ಮೆಚ್ಚುಗೆಗೆ ಮಾತ್ರವಲ್ಲದೇ ಇಡೀ ದೇಶವೇ ಕೊಂಡಾಡುವಂತೆ ಮಾಡಿತು.