ಪತ್ತನಂತಿಟ್ಟ (ಕೇರಳ) :ದೇವರ ನಾಡು ಕೇರಳದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಅಂತ್ಯಸಂಸ್ಕಾರ ಮಾಡಲಾಗಿದ್ದ ವ್ಯಕ್ತಿಯೋರ್ವ ಮರಳಿ ಬಂದಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಲಾಹ ಮಂಜತೋಟಿಲ್ನ ಆದಿವಾಸಿ ಕಾಲೋನಿ ನಿವಾಸಿ ರಮನ್ಬಾಬು ಮನೆಗೆ ಮರಳಿ ಬಂದ ವ್ಯಕ್ತಿ. ರಮನ್ ಬಾಬುವನ್ನು ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ರಮನ್ ಬಾಬು ಮಂಜಲತೋಟಿಲ್ನ ನಿವಾಸಿಯಾಗಿದ್ದು, ತನ್ನ ಪುತ್ರನೊಂದಿಗೆ ವಾಸಿಸುತ್ತಿದ್ದನು. ರಮನ್ ಬಾಬು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ರಮನ್ ಊರು ಬಿಟ್ಟರೆ ಹಲವು ದಿನಗಳ ಬಳಿಕ ಮರಳಿ ಊರಿಗೆ ಬರುತ್ತಿದ್ದ. ಈ ವೇಳೆ ಡಿಸೆಂಬರ್ 30ರಂದು ನಿಲಕ್ಕಲ್ ಎಂಬಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹವು ಶಬರಿಮಲೆ ಯಾತ್ರಿಕರು ಸಂಚರಿಸುವ ಇಲುವುಂಗಲ್ ಮತ್ತು ನಿಲಕ್ಕಲ್ ರಸ್ತೆ ಬದಿಯಲ್ಲಿ ಕಂಡುಬಂದಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿತ್ತು.
ಈ ಮೃತದೇಹವನ್ನು ರಮನ್ ಬಾಬು ಅವರದ್ದು ಎಂಬುದಾಗಿ ಶಂಕಿಸಿ, ಇವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ರೋಡಿನಲ್ಲಿ ಪತ್ತೆಯಾದ ಶವ ಮತ್ತು ಅದರ ಮೇಲಿನ ಬಟ್ಟೆಯನ್ನು ಕಂಡ ಸಂಬಂಧಿಕರು ಇದು ರಮನ್ ಮೃತದೇಹ ಎಂದು ದೃಢಪಡಿಸಿದ್ದರು. ಅಲ್ಲದೆ ರಮನ್ ಬಾಬು ಮಗ ಮೃತದೇಹವನ್ನು ಗುರುತಿಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಿಂತಿರುಗಿಸಲಾಗಿತ್ತು. ಬಳಿಕ ಈ ಮೃತದೇಹವನ್ನು ಮನೆಯಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗಿತ್ತು.