ಕರ್ನಾಟಕ

karnataka

ETV Bharat / bharat

ದುಬೈಗೆ ಹೋಗಬೇಕೆಂದಿದ್ದ ವ್ಯಕ್ತಿ.. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರಿಗೆ ಮೆಣಸಿನಪುಡಿ ಎರಚಿದ.. ಯಾಕೆ? - ಈಟಿವಿ ಭಾರತ ಕನ್ನಡ ನ್ಯೂಸ್​​​

ಶಂಶಾಬಾದ್‌ ವಿಮಾನ ನಿಲ್ದಾಣದ ಅಧಿಕಾರಿಗಳು ಪಾಸ್‌ಪೋರ್ಟ್‌ ಸರಿಯಿಲ್ಲ ಎಂದು ವಾಪಸ್‌ ಕಳುಹಿಸಿದ್ದಕ್ಕೆ ಬೇಸರಗೊಂಡ ರಾಂಬಾಬು, ಪ್ರಯಾಣಿಕರ ಮೇಲೆ ಮೆಣಸಿನ ಪುಡಿ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

the-man-who-threw-chilli-powder-on-passengers
ದುಬೈಗೆ ಹೋಗಬೇಕೆಂದಿದ್ದ ವ್ಯಕ್ತಿ.. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರಿಗೆ ಮೆಣಸಿನಪುಡಿ ಎರಚಿದ

By

Published : Oct 10, 2022, 5:44 PM IST

ಹೈದರಾಬಾದ್​ : ಹೈದರಾಬಾದ್‌ನಿಂದ ರಾಜುಗೆ ಬಸ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಸಹ ಪ್ರಯಾಣಿಕರಿಗೆ ಮೆಣಸಿನ ಪುಡಿ ಎರಚಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಉಂಡಾಲ ರಾಂಬಾಬು ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವರದಿ ಪ್ರಕಾರ, ಪಶ್ಚಿಮ ಗೋದಾವರಿ ಜಿಲ್ಲೆಯ ಅಯೋಧ್ಯಾಲಂಕಾ ನಿವಾಸಿ ಉಂಡಾಲ ರಾಂಬಾಬು ಎಂಬ ವ್ಯಕ್ತಿ ದುಬೈಗೆ ತೆರಳಲು ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಅಧಿಕಾರಿಗಳು ನಿಮ್ಮ ಪಾಸ್‌ಪೋರ್ಟ್ ಮಾನ್ಯವಾಗಿಲ್ಲ ಎಂದು ವಾಪಾಸ್​ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅಲ್ಲಿಂದ ಹಿಂದಿರುಗಿ ಹೈದರಾಬಾದ್‌ನಿಂದ ಹೊರಟಿದ್ದ ಬಸ್​ನಲ್ಲಿ ವಾಪಸ್​ ಆಗಿದ್ದಾನೆ.

ಈ ವೇಳೆ ಬಸ್​ ಪಾಲಕೊಳ್ಳು ಪೇಟೆ ತಲುಪುತ್ತಿದ್ದಂತೆ ರಾಂಬಾಬು ಪ್ರಯಾಣಿಕರ ಮೇಲೆ ಮೆಣಸಿನ ಪುಡಿ ಎರಚಿದ್ದಾನೆ. ಇದರಿಂದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ರಾಂಬಾಬುವನ್ನು ಬಂಧಿಸಿದ್ದಾರೆ. ಶಂಶಾಬಾದ್‌ ವಿಮಾನ ನಿಲ್ದಾಣದ ಅಧಿಕಾರಿಗಳು ಪಾಸ್‌ಪೋರ್ಟ್‌ ಸರಿಯಿಲ್ಲ ಎಂದು ವಾಪಸ್‌ ಕಳುಹಿಸಿದ್ದಕ್ಕೆ ಬೇಸರಗೊಂಡ ರಾಂಬಾಬು, ಪ್ರಯಾಣಿಕರ ಮೇಲೆ ಮೆಣಸಿನ ಪುಡಿ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಡಿಫೆನ್ಸ್​ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು: 28 ಜನರ ವಿರುದ್ಧ ದೂರು

ABOUT THE AUTHOR

...view details