ಹೈದರಾಬಾದ್ (ತೆಲಂಗಾಣ):125 ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಕುಮುರಂ ಭೀಮ್ ಜಿಲ್ಲೆಯ ಗಿನ್ನೆಧಾರಿ ಪ್ರದೇಶದಲ್ಲಿ ಮಂಗಳವಾರ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 1897ರ ನಂತರ ಎರಡನೇ ಬಾರಿಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ.
1897 ರ ಡಿಸೆಂಬರ್ 17 ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ 4.4 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು. ಆ ಬಳಿಕ 2017ರ ಡಿಸೆಂಬರ್ 27ರಂದು ಆದಿಲಾಬಾದ್‌ನಲ್ಲಿ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆ ಬಳಿಕ ಇದೀಗ 2021ರ ಡಿಸೆಂಬರ್ 21ರಂದು 3.5 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಕುಮುರಂ ಭೀಮ್ ಜಿಲ್ಲೆಯ ಜನರು ನಲುಗಿದ್ದಾರೆ.