ಕರ್ನಾಟಕ

karnataka

ETV Bharat / bharat

ಪರಕೀಯರ ಪಾಲಿನ ಸಿಂಹಸ್ವಪ್ನವಾಗಿದ್ದ ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್

ಬ್ರಿಟಿಷರು ಜಾಫರ್ ವಿರುದ್ಧ ದೇಶದ್ರೋಹ ಮತ್ತು ಕೊಲೆ ಆರೋಪಗಳನ್ನು ಹೊರಸಿದ್ದರು. 27ನೇ ಜನವರಿ 1858 ರಿಂದ 9 ಮಾರ್ಚ್, 1858 ರವರೆಗೆ 40 ದಿನಗಳ ಕಾಲ ವಿಚಾರಣೆ ನಡೆಯಿತು. ಆತನನ್ನು ಅಪರಾಧಿ ಎಂದು ಘೋಷಿಸಲಾಯಿತು. ಬಳಿಕ ರಂಗೂನ್​ಗೆ ಗಡಿಪಾರು ಮಾಡಲಾಯಿತು. ಇತಿಹಾಸಕಾರರು ಹೇಳುವ ಪ್ರಕಾರ, ಬ್ರಿಟಿಷರು ಬಹದ್ದೂರ್ ಷಾ ಜಾಫರ್ ದೇಶದಲ್ಲಿ ಮತ್ತೊಮ್ಮೆ ದಂಗೆಯ ಕೇಂದ್ರವಾಗಬಹುದೆಂದು ಹೆದರುತ್ತಿದ್ದರು.

By

Published : Sep 12, 2021, 7:04 AM IST

the last Mughal emperor  Bahadur Shah Zafar
ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್

ಭಾರತ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಇದು ಅಗಣಿತ ನಾಯಕರ ಪ್ರಾಣ ತ್ಯಾಗದ ಫಲ. ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ಸಹ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. 1857ರಲ್ಲಿ ನಡೆದ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಜತೆ ಈ ಕೊನೆಯ ಮೊಘಲ್ ದೊರೆಯ ನಂಟಿದೆ.

ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್

ಬಹದ್ದೂರ್ ಷಾ ಜಾಫರ್ ದೇಶದ ಹೆಸರಾಂತ ಆಡಳಿತಗಾರನಾಗಿದ್ದರೂ, ಸ್ವಾತಂತ್ರ್ಯ ಪಡೆಯುವ ಆಳವಾದ ಬಯಕೆ ಹೊಂದಿದ್ದ. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ವ್ಯಕ್ತಿಯಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದಿದ್ದನು.

ಈ ಬಹದ್ದೂರ್‌​ ಕಂಡ್ರೇ ಆಂಗ್ಲರು ನಡುಗುತ್ತಿದ್ದರು. ಆದರೆ, ಈ ದೊರೆಯ ಪುತ್ರರನ್ನು ಕೊಂದು ಈಗ ಮ್ಯಾನ್ಮಾರ್ ಎಂದು ಕರೆಯಲ್ಪಡುವ ಅಂದಿನ ಬರ್ಮಾಕ್ಕೆ ಗಡಿಪಾರು ಮಾಡಿದರು. ದುರಾದೃಷ್ಟವೆಂದರೆ ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆ ಕಡು ಬಡತನ ಮತ್ತು ಮಾನಸಿಕ ಹಿಂಸೆಯಲ್ಲಿಯೇ ತನ್ನ ಪ್ರಾಣಬಿಟ್ಟ. ದೆಹಲಿಯಲ್ಲಿ ಅಂತ್ಯಕ್ರಿಯೆ ಮಾಡಬೇಕೆಂಬ ಅವರ ಕೊನೆಯ ಆಸೆ ಸಹ ಈಡೇರಲಿಲ್ಲ.

1775 ಅಕ್ಟೋಬರ್ 24ರಂದು ಜನಿಸಿದ ಬಹದ್ದೂರ್ ಷಾ ಜಾಫರ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಬ್ರಿಟಿಷರೊಂದಿಗೆ ಹೋರಾಡುವ ಬಂಡಾಯ ಸೈನಿಕರ ನಾಯಕತ್ವವನ್ನು ಒಪ್ಪಿಕೊಂಡರು. ಅವರ ತಂದೆ 2ನೇ ಅಕ್ಬರ್ ಷಾ ಮತ್ತು ತಾಯಿ ಲಾಲ್ಬಾಯಿ. ಅವರ ತಂದೆಯ ಮರಣದ ನಂತರ, 18ನೇ ಸೆಪ್ಟೆಂಬರ್, 1837ರಂದು ಜಾಫರ್ ಮೊಘಲ್ ಚಕ್ರವರ್ತಿಯಾದ. ಆ ಹೊತ್ತಿಗೆ, ಮೊಘಲ್ ಚಕ್ರವರ್ತಿ ನಾಮಮಾತ್ರದ ಚಕ್ರವರ್ತಿಯಾಗಿ ಉಳಿದಿದ್ದರು.

ಮೀರತ್‌ನ ಸೈನಿಕರು ದಂಗೆಯ ನಂತರ ಆತನನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. ಆದಾಗ್ಯೂ, ಬ್ರಿಟಿಷರ ರಾಜತಾಂತ್ರಿಕತೆಯಿಂದಾಗಿ, ಈ ಯುದ್ಧವು ಶೀಘ್ರವೇ ಕೊನೆಗೊಂಡಿತು. ಹುಮಾಯೂನ್ ಸಮಾಧಿಯಲ್ಲಿ ಜಾಫರ್​ ರಕ್ಷಣೆ ಪಡೆದುಕೊಂಡ. ಬಹದ್ದೂರ್ ಷಾ ಜಾಫರ್ ಅವರನ್ನು ಅಲ್ಲಿ ಬ್ರಿಟಿಷ್ ಅಧಿಕಾರಿ ವಿಲಿಯಂ ಹಡ್ಸನ್ ಪಿತೂರಿಯಿಂದ ಬಂಧಿಸಿದರು.

ಬ್ರಿಟಿಷರು ಜಾಫರ್ ವಿರುದ್ಧ ದೇಶದ್ರೋಹ ಮತ್ತು ಕೊಲೆ ಆರೋಪಗಳನ್ನು ಹೊರಿಸಿದರು. 27ನೇ ಜನವರಿ 1858 ರಿಂದ 9 ಮಾರ್ಚ್, 1858 ರವರೆಗೆ 40 ದಿನಗಳ ಕಾಲ ವಿಚಾರಣೆ ನಡೆಯಿತು. ಆತನನ್ನು ಅಪರಾಧಿ ಎಂದು ಘೋಷಿಸಲಾಯಿತು. ಬಳಿಕ ರಂಗೂನ್​ಗೆ ಗಡಿಪಾರು ಮಾಡಲಾಯಿತು. ಇತಿಹಾಸಕಾರರು ಹೇಳುವ ಪ್ರಕಾರ, ಬ್ರಿಟಿಷರು ಬಹದ್ದೂರ್ ಷಾ ಜಾಫರ್ ದೇಶದಲ್ಲಿ ಮತ್ತೊಮ್ಮೆ ದಂಗೆಯ ಕೇಂದ್ರವಾಗಬಹುದೆಂದು ಹೆದರುತ್ತಿದ್ದರು.

ವನವಾಸದ ದಿನಗಳಲ್ಲಿ, ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಅವನಿಗೆ ಕೇವಲ ಕಾವ್ಯವೇ ಒಂದು ಮಾಧ್ಯಮವಾಗಿತ್ತು. ಆದರೆ, ಬ್ರಿಟಿಷರು ಜೈಲಿನಲ್ಲಿ ಪೆನ್, ಲ್ಯಾಂಪ್ ಮತ್ತು ಪೇಪರ್‌ಗಾಗಿ ಹಂಬಲಿಸುವಂತೆ ಮಾಡಿದರು. ಬಹದ್ದೂರ್ ಶಾ ಇಟ್ಟಿಗೆಗಳನ್ನು ಬಳಸಿ ಗೋಡೆಗಳ ಮೇಲೆ ತನ್ನ ಗಜಲ್​ಗಳನ್ನು ಬರೆದ. ಅವರ ಕೊನೆಯ ಆಸೆ ಮೆಹ್ರೌಲಿಯ ಜಾಫರ್ ಮಹಲ್‌ನಲ್ಲಿ ತನ್ನ ಸಮಾಧಿ ನಿರ್ಮಿಸಬೇಕೆಂಬುದಾಗಿತ್ತು. 7 ನವೆಂಬರ್ 1862 ರಂದು, ಅವರು ರಂಗೂನ್ ಜೈಲಿನಲ್ಲಿ ನಿಧನರಾದರು. ಅವರ ಸಾವಿನ ಜತೆಯೇ ಕೊನಯಾಸೆಯೂ ಮಣ್ಣಾಯಿತು.

ಆತನ ಸಾವಿನ ಸುದ್ದಿ ಭಾರತದಲ್ಲಿ ಹರಡಿದರೆ, ದಂಗೆ ಮತ್ತೊಮ್ಮೆ ಭುಗಿಲೇಳಬಹುದು ಎಂದು ಬ್ರಿಟಿಷರು ಹೆದರಿದರು. ಆದ್ದರಿಂದ, ಅವನ ಸಮಾಧಿಯ ಎಲ್ಲಾ ಆಚರಣೆಗಳನ್ನು ರಹಸ್ಯವಾಗಿ ನಡೆಸಲಾಯಿತು. 1907ರಲ್ಲಿ, ಜಾಫರ್ ಸಮಾಧಿ ಸ್ಥಳವನ್ನು ಗುರುತಿಸಲಾಯಿತು.

ಅಲ್ಲಿ ಒಂದು ಶಾಸನವನ್ನು ಇರಿಸಲಾಯಿತು. ಆದರೆ, 1991ರಲ್ಲಿ ಉತ್ಖನನದ ಸಮಯದಲ್ಲಿ, ನಿಜವಾದ ಸಮಾಧಿ ಆ ಸ್ಥಳದಿಂದ 25 ಅಡಿ ದೂರದಲ್ಲಿರುವುದು ಕಂಡುಬಂದಿದೆ. ಈಗ ಜನರು ಇದನ್ನು ಜಾಫರ್‌ನ ದರ್ಗಾ ಎಂದು ಕರೆಯುತ್ತಾರೆ ಮತ್ತು ಬಹದ್ದೂರ್ ಷಾ ಮ್ಯೂಸಿಯಂ ಸಮಿತಿಯು ಮ್ಯಾನ್ಮಾರ್‌ನಲ್ಲಿ ಜಾಫರ್‌ಗೆ ಸಂಬಂಧಿಸಿದ ತಾಣಗಳನ್ನು ನಿರ್ವಹಿಸುತ್ತದೆ.

ಇಂದು ಬಹದ್ದೂರ್ ಷಾ ಜಾಫರ್ ಹೆಸರನ್ನು ದೇಶದಲ್ಲಿ ಗೌರವದಿಂದ ತೆಗೆದುಕೊಳ್ಳಲಾಗಿದೆ. ದೆಹಲಿಯಲ್ಲಿ ಅವರ ಹೆಸರಿನ ಅನೇಕ ರಸ್ತೆಗಳು ಮತ್ತು ಉದ್ಯಾನವನಗಳಿವೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಅವರ ಹೆಸರಿನ ರಸ್ತೆಯಿದೆ.

ಬಾಂಗ್ಲಾದೇಶವು ಅವರ ಗೌರವಾರ್ಥವಾಗಿ ಢಾಕಾದ ವಿಕ್ಟೋರಿಯಾ ಪಾರ್ಕ್ ಅನ್ನು ಬಹದ್ದೂರ್ ಷಾ ಜಾಫರ್ ಪಾರ್ಕ್ ಎಂದು ಮರು ನಾಮಕರಣ ಮಾಡಿದೆ. ಕೊನೆಯ ಮೊಘಲ್ ಚಕ್ರವರ್ತಿಯ ತ್ಯಾಗ ಮತ್ತು ಬಲಿದಾನದ ಕಥೆಯು 200 ವರ್ಷಗಳ ಬ್ರಿಟಿಷ್ ಆಕ್ರಮಣದಿಂದ ದೇಶದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ತೆತ್ತ ಬೆಲೆಯನ್ನು ಸ್ಮರಿಸುತ್ತದೆ.

For All Latest Updates

TAGGED:

ABOUT THE AUTHOR

...view details