ಕರ್ನಾಟಕ

karnataka

ETV Bharat / bharat

ಕೆನಡಾದಿಂದ ತರಲಾದ ಅನ್ನಪೂರ್ಣೆ ಮೂರ್ತಿ ಯುಪಿ ಸರ್ಕಾರಕ್ಕೆ ಹಸ್ತಾಂತರ.. ವಿಶೇಷ ಪೂಜೆ- VIDEO - Smriti Irani

ಮೂರ್ತಿ ಹಸ್ತಾಂತರ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿದ್ದು, ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಸೇರಿ ಹಲವು ಕೇಂದ್ರ ಸಚಿವರು ಸಹ ಪಾಲ್ಗೊಂಡಿದ್ದರು.

the-idol-of-goddess-annapurna-which-was-retrieved-from-canad
ಕೆನಡಾದಿಂದ ತರಲಾದ ಅನ್ನಪೂರ್ಣೆ ಮೂರ್ತಿ ಯುಪಿ ಸರ್ಕಾರಕ್ಕೆ ಹಸ್ತಾಂತರ

By

Published : Nov 12, 2021, 7:28 AM IST

ನವದೆಹಲಿ:ವಾರಾಣಸಿಯ ಕಾಶಿ ದೇವಾಲಯದಿಂದ ಕಳ್ಳತನವಾಗಿದ್ದ ಅನ್ನಪೂಣೇಶ್ವರಿ ದೇವರ ಮೂರ್ತಿಯನ್ನ (Goddess Annapurna) ಈಗಾಗಲೇ ಕೆನಡಾದಿಂದ ಮರಳಿ ತರಲಾಗಿದೆ. ಇದೀಗ ಮೂರ್ತಿಯನ್ನ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ (Uttar Pradesh Government) ಹಸ್ತಾಂತರಿಸಲಾಗಿದೆ.

ಅನ್ನಪೂರ್ಣ ದೇವಿಯ ಮೂರ್ತಿಯನ್ನು 1913ರಲ್ಲಿ ಕಳವು ಮಾಡಲಾಗಿತ್ತು. ಕೆನಡಾದ ಕಲಾ ಸಂಗ್ರಹಾಲಯದಲ್ಲಿದ್ದ ಮೂರ್ತಿಯನ್ನ ಭಾರತ ಪುರಾತತ್ವ ಇಲಾಖೆ (Department of Archeology of India) ವಾಪಸ್​ ಪಡೆದಿತ್ತು. ಇದೀಗ ಮೂರ್ತಿಯ ಮೂಲ ಸ್ಥಳವಾದ ಕಾಶಿ ವಿಶ್ವನಾಥನ (Kashi Vishwanatha) ಸನ್ನಿಧಾನಕ್ಕೆ ನೀಡಲಾಗುತ್ತಿದೆ.

ಕೆನಡಾದಿಂದ ತರಲಾದ ಅನ್ನಪೂರ್ಣೆ ಮೂರ್ತಿ ಯುಪಿ ಸರ್ಕಾರಕ್ಕೆ ಹಸ್ತಾಂತರ

ಈ ಮೂರ್ತಿ ಹಸ್ತಾಂತರ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿದೆ. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಸೇರಿ ಹಲವು ಕೇಂದ್ರ ಸಚಿವರು ಸಹ ಭಾಗಿಯಾಗಿದ್ದರು. ಈ ವೇಳೆ, ಕೇಂದ್ರ ಸಂಸ್ಕೃತಿ ಖಾತೆ ಹಾಗೂ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ (Minister of Tourism, Culture and Development ) ಹಾಗೂ ಸಚಿವೆ ಸ್ಮೃತಿ ಇರಾನಿ (Smriti Irani) ಸಮ್ಮುಖದಲ್ಲಿ ಮೂರ್ತಿ ಹಸ್ತಾಂತರ ಮಾಡಲಾಗಿದೆ.

ಇದಕ್ಕೂ ಮೊದಲು ಶಾಸ್ತ್ರೋಕ್ತವಾಗಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿ ಮೆರವಣಿಗೆ ಸಹ ನೆರವೇರಿಸಲಾಗಿದೆ.

ಇದನ್ನೂ ಓದಿ:ombudsman schemes: ರಿಟೇಲ್​ ಡೈರೆಕ್ಟ್​, ಒಂಬುಡ್ಸ್​ಮನ್ಸ್​ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details